
ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Team Udayavani, Feb 7, 2023, 12:45 AM IST

ಬಂಟ್ವಾಳ: ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣವೊಂದರ ಆರೋಪಿ ಸಕಲೇಶಪುರ ಬಾಳಗದ್ದೆ ರಾಘವೇಂದ್ರ ನಗರ ನಿವಾಸಿ ಸಲ್ಮಾನ್ ಯಾನೆ ಮುನ್ನ ಯಾನೆ ಚೋಟು (36)ನನ್ನು ಸೋಮವಾರ ಸಕಲೇಶಪುರದಲ್ಲಿ ಬಂಧಿಸಲಾಗಿದೆ.
ಆರೋಪಿಯನ್ನು ವಾರೆಂಟ್ ಸಿಬಂದಿ ಹೆಡ್‌ಕಾನ್‌ಸ್ಟೆಬಲ್ ಗಣೇಶ್, ಕ್ರೈಂ ಸಿಬಂದಿ ಹೆಡ್‌ಕಾನ್‌ಸ್ಟೆಬಲ್ ರಾಜೇಶ್, ಇರ್ಷಾದ್, ಪ್ರವೀಣ್ ಅವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಟಾಪ್ ನ್ಯೂಸ್
