ಬಂಟ್ವಾಳ : ರೈಲ್ವೇ ಹಳಿಯಲ್ಲಿ ಪತ್ತೆಯಾದ ಮೃತ ದೇಹದ ಗುರುತು ಪತ್ತೆ
Team Udayavani, Jan 11, 2022, 7:48 PM IST
ಬಂಟ್ವಾಳ: ಬಿ.ಸಿ.ರೋಡು ರೈಲ್ವೇ ನಿಲ್ದಾಣದ ಪಕ್ಕದಲ್ಲೇ ರೈಲ್ವೇ ಹಳಿಯಲ್ಲಿ ಜ. 10 ರ ರಾತ್ರಿ ವ್ಯಕ್ತಿಯೊಬ್ಬರ ಮೃತದೇಹವೊಂದು ಪತ್ತೆಯಾಗಿದ್ದು, ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಸಿದ್ದಕಟ್ಟೆ ನಿವಾಸಿ ಜಿನ್ನಪ್ಪ ನಾಯ್ಕ(71) ಮೃತ ವ್ಯಕ್ತಿ. ಅವರು ಕಳೆದ 10 ವರ್ಷಗಳಿಂದ ಮಂಡಿನೋವು ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕಿಸಲಾಗಿದೆ.
ದೂರದೂರುಗಳಿಗೆ ತೆರಳುವ ಸಂದರ್ಭದಲ್ಲಿ ಅವರು ರೈಲಿನ ಮೂಲಕ ತೆರಳುತ್ತಿದ್ದು, ಹೀಗಾಗಿ ಹೆಚ್ಚಾಗಿ ರೈಲ್ವೇ ನಿಲ್ದಾಣಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಜ.೧೦ರ ರಾತ್ರಿ ೮ರ ಸುಮಾರಿಗೆ ಅವರು ಗೂಡ್ಸ್ ರೈಲಿಗೆ ತಲೆಕೊಟ್ಟಿದ್ದು, ರುಂಡ ಹಾಗೂ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪಣಂಬೂರು :ಸೀ ಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯ ಸೋರಿಕೆ 26ಮಂದಿ ಆಸ್ವಸ್ಥ, ಆಸ್ಪತ್ರೆಗೆ ದಾಖಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ
ಕುವೈಟ್ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ
ನೀರಿನಲ್ಲಿ ಮುಳುಗಿ ನಾಪತ್ತೆ ಪ್ರಕರಣ : ಮೂರನೇ ದಿನವೂ ಯುವಕನ ಸುಳಿವು ಪತ್ತೆಯಿಲ್ಲ
ಮಂಗಳೂರು : ಉಡುಗೊರೆ ಆಮಿಷ ನೀಡಿ ವಿದ್ಯಾರ್ಥಿಗೆ 1.85 ಲ.ರೂ. ವಂಚನೆ
ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!