ಬಂಟ್ವಾಳ: ದನಗಳನ್ನು ಕದ್ದು ಮಾಂಸ ಮಾಡುತ್ತಿದ್ದ ಅಪ್ಪ-ಮಗ ಬಂಧನ
Team Udayavani, Jul 1, 2022, 8:02 PM IST
ಬಂಟ್ವಾಳ : ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್‌ಐ.ಅವಿನಾಶ್ ನೇತ್ರತ್ವದ ತಂಡ ದಾಳಿ ನಡೆಸಿ ಅಪ್ಪ ಮಗ ಇಬ್ಬರು ಆರೋಪಿಗಳನ್ನು ಬಂದಿಸಿ, ಸ್ಥಳದಲ್ಲಿದ್ದ ಸಾವಿರಾರು ರೂ ಮೌಲ್ಯದ ಮಾಂಸವನ್ನು ವಶಕ್ಕೆ ಪಡೆದ ಘಟನೆ ಜುಲೈ 1 ರ ಶುಕ್ರವಾರ ಮುಂಜಾನೆ ನಡೆದಿದೆ.
ಗೋಳ್ತಮಜಲು ನಿವಾಸಿಗಳಾದ ಮಹಮ್ಮದ್ ಮತ್ತು ಸಾಧಿಕ್ ಬಂಧಿತ ಆರೋಪಿಗಳು. ಗೋಳ್ತಮಜಲು ಮಹಮ್ಮದ್ ಎಂಬವರ ಮನೆಯಲ್ಲಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಬಗ್ಗೆ ಸ್ಥಳೀಯ ರಿಂದ ಮಾಹಿತಿ ಲಭ್ಯವಾಗಿತ್ತು.
ಕದ್ದು ತಂದ ದನಗಳನ್ನು ಇವರ ಮನೆಯಲ್ಲಿ ವಧೆ ಮಾಡಲಾಗುತ್ತಿತ್ತು, ಅ ಬಳಿಕ ಮಾಂಸ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಪೋಲಿಸರಿಗೆ ಲಭ್ಯವಾಗಿತ್ತು ಈ ಹಿನ್ನೆಲೆಯಲ್ಲಿ ಎಸ್ ಐ.ಅವಿನಾಶ್ ನೇತ್ರತ್ವದ ನಗರ ಠಾಣಾ ಪೋಲೀಸರ ತಂಡ ಮುಂಜಾವಿನ ವೇಳೆ ದಾಳಿ ನಡೆಸಿ, ಮಾಂಸ ಸಹಿತ ಆರೋಪಿಗಳು ಪರಾರಿಯಾಗದಂತೆ ಬಂಧಿಸಿದ್ದಾರೆ.
ಅನೇಕ ಬಾರಿ ದಾಳಿ ನಡೆದಾಗ ಆರೋಪಿಗಳು ಪರಾರಿಯಾಗುತ್ತಾರೆ ಸೊತ್ತುಗಳು ವಶಕ್ಕೆ ಪಡೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಂಟ್ವಾಳ ತಾಲೂಕಿನ ಪೋಲೀಸರ ಕಾರ್ಯತತ್ಪರತೆಯಿಂದ ಅಕ್ರಮ ದಂಧೆಯ ಬಹುತೇಕ ಅರೋಪಿಗಳು ಬಂಧನವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಟ್ಲ: ಮಹಿಳೆ ಮನೆಗೆ ತೆರಳುವ ರಸ್ತೆ ಅಗೆದು ಹಾಕಿ, ನಿಂದನೆ: ತಹಶೀಲ್ದಾರ್ಗೆ ದೂರು
ಬೆಳ್ತಂಗಡಿ: ಗೋ ಅಕ್ರಮ ಸಾಗಾಟ; 2 ವಾಹನ ಸಹಿತ ಮೂವರ ವಶ
ವಿಟ್ಲ-ಕಬಕ ರಸ್ತೆ ಸ್ಥಿತಿ ಶೋಚನೀಯ : ರಸ್ತೆ ವಿಸ್ತರಣೆಯೂ ಆಗಲಿಲ್ಲ, ಮರುಡಾಮರು ಕಾಣಲೇ ಇಲ್ಲ
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ; ಐನೂರರ ಗಡಿಗೆ ಇನ್ನೆರೆಡೇ ಗೇಣು ಬಾಕಿ..!
ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ-ಮಗ ಈಗ ದಕ್ಷಿಣಕನ್ನಡ ಯಾತ್ರೆಯಲ್ಲಿ !