ಬೆಂಗಳೂರು: ಮೊದಲ ಪತ್ನಿ ಕೊಂದು 2ನೇ ಪತಿಯ ಮಗು ಹತ್ಯೆಗೂ ಯತ್ನ!

ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೃತ್ಯ; ಆರೋಪಿ ಬಂಧನ

Team Udayavani, Mar 22, 2023, 12:10 PM IST

1-sadsd-asd

ಬೆಂಗಳೂರು: ಅಕ್ರಮ ಸಂಬಂಧ ಹಿನ್ನೆಲೆ ಮೊದಲ ಪತ್ನಿಯನ್ನು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದಿದ್ದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದೇ ಸಂದರ್ಭದಲ್ಲಿ ಆಕೆಯ 2ನೇ ಪತಿಗೆ ಜನಿಸಿದ ಮಗುವನ್ನೂ ಕೊಲ್ಲಲು ಯತ್ನಿಸಿದ್ದು, ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಾರಾಯಿ ಪಾಳ್ಯದಲ್ಲಿ ಪ್ರಕರಣ ನಡೆದಿದ್ದು, ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದ ತಬ್ಸೆನ್‌ ಬೇಬಿ (32) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಪತಿ ಶೇಕ್‌ ಸುಹೈಲ್‌ನನ್ನು ಬಂಧಿಸಲಾಗಿದೆ.

ಶೇಕ್‌ ಸುಹೈಲ್‌ ಮತ್ತು ತಬ್ಸೆನ್‌ ಬೇಬಿ 14 ವರ್ಷಗಳ ಹಿಂದೆ ಕೋಲ್ಕತಾದಲ್ಲಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. 2013ರಲ್ಲಿ ಬೆಂಗಳೂರಿಗೆ ಬಂದಿದ್ದ ದಂಪತಿ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಶೇಕ್‌ ಸುಹೈಲ್‌ ಟೈಲರಿಂಗ್‌ ಕೆಲಸಕ್ಕೆ ಹೋಗುತ್ತಿದ್ದ. ಆಕೆ ಮನೆಯಲ್ಲೇ ಇರುತ್ತಿದ್ದಳು.

3 ವರ್ಷಗಳ ಹಿಂದೆ ತಬ್ಸೆನ್‌ ಬೇಬಿ ಸಾರಾಯಿಪಾಳ್ಯ ನಿವಾಸಿ ಸೈಯದ್‌ ನದೀಮ್‌ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಶೇಕ್‌ ಸುಹೈಲ್‌, ಪತ್ನಿ ಮತ್ತು ಮಕ್ಕಳನ್ನು ತೊರೆದು ಕೋಲ್ಕತಾಗೆ ಹೋಗಿದ್ದ. ಇತ್ತ ಕ್ಯಾಬ್‌ ಚಾಲಕನಾಗಿರುವ ಸೈಯದ್‌ ನದೀಮ್‌ ತನ್ನ ಪತ್ನಿಗೆ ವಿಚ್ಛೇದನ ನೀಡಿ ತಬ್ಸೆನ್‌ ಬೇಬಿ ಜತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇಬ್ಬರಿಗೂ ಒಂದು ಮಗು ಜನಿಸಿತ್ತು. ಜತೆಗೆ ತನ್ನ ಮೊದಲ ಪತಿಯ
ಮಕ್ಕಳನ್ನು ತಬ್ಸೆನ್‌ ಬೇಬಿ ಸಾಕುತ್ತಿದ್ದಳು ಎಂದು ಪೊಲೀಸರು ಹೇಳಿದರು.

ಆರೋಪಿ ಶೇಕ್‌ ಸುಹೈಲ್‌ ಕೂಡ ಕೋಲ್ಕತ್ತಾದಲ್ಲಿ ಮತ್ತೂಬ್ಬ ಯುವತಿಯನ್ನು ಮದುವೆ ಆಗಿದ್ದು, ದಂಪತಿಗೆ ಒಂದು ಮಗು ಇದೆ. ಈ ನಡುವೆ ತಬ್ಸೆನ್‌ ಬೇಬಿ ಆಗಾಗ್ಗೆ ಮೊದಲ ಪತಿ ಶೇಕ್‌ಗೆ ಕರೆ ಮಾಡುತ್ತಿದ್ದಳು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಶೇಕ್‌ನ ಎರಡನೇ ಪತ್ನಿ, ಪತಿ ಜತೆ ವಾಗ್ವಾದ ನಡೆಸುತ್ತಿದ್ದಳು.
ಇದೇ ವೇಳೆ ಮೊದಲ ಪತ್ನಿ ತಬ್ಸೆನ್‌ ಬೇಬಿ ನದೀಮ್‌ನಿಂದ ಒಂದು ಮಗು ಪಡೆದುಕೊಂಡಿದ್ದಾಳೆ ಎಂಬ ವಿಚಾರ ತಿಳಿದ ಶೇಕ್‌, ಆಕೆಗೆ ಕರೆ ಮಾಡಿ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಪೊಲೀಸರು ಹೇಳಿದರು.

ಮನೆಗೆ ಬಂದು ಕೊಲೆ
ಕೆಲ ದಿನಗಳ ಹಿಂದೆ ಪತ್ನಿಗೆ ಕರೆ ಮಾಡಿದ ಶೇಕ್‌ ಸುಹೈಲ್‌ ಮನೆಗೆ ಬರುವುದಾಗಿ ಹೇಳಿದ್ದಾನೆ. ಸೋಮವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ, ನದೀಮ್‌ನಿಂದ ಮಗು ಪಡೆದ ವಿಚಾರಕ್ಕೆ ತಬ್ಸೆನ್‌ ಬೇಬಿ ಜತೆ ವಾಗ್ವಾದ ನಡೆಸಿ, ಹಲ್ಲೆಗೆ ಯತ್ನಿಸಿದ್ದಾನೆ. ಆಗ 15 ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ತಬ್ಸೆನ್‌ ಬೇಬಿ ಸಹೋದರಿ ಗಲಾಟೆ ಬಿಡಿಸಲು ಯತ್ನಿಸಿದ್ದಾಳೆ. ಆಕೆ ಮೇಲೂ ಹಲ್ಲೆ ನಡೆಸಿದ ಆರೋಪಿ, ಕೃತ್ಯ ಎಸಗಲೆಂದೆ ತಂದಿದ್ದ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಹತ್ಯೆಗೈದಿದ್ದಾನೆ.

ಟಾಪ್ ನ್ಯೂಸ್

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

anಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲು

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳ ದೂರು

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ

Sri Lanka;ಏಕದಿನಕ್ಕೆ ಮರಳಿದ ದಿಮುತ್‌ ಕರುಣಾರತ್ನೆ

Sri Lanka;ಏಕದಿನಕ್ಕೆ ಮರಳಿದ ದಿಮುತ್‌ ಕರುಣಾರತ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಗ್ಯಾರಂಟಿ? ಉಚಿತಗಳಿಗೆ ಷರತ್ತು ಖಚಿತ; ಘೋಷಣೆಯತ್ತ ಜನರ ಕುತೂಹಲ

ಇಂದು ಗ್ಯಾರಂಟಿ? ಉಚಿತಗಳಿಗೆ ಷರತ್ತು ಖಚಿತ; ಘೋಷಣೆಯತ್ತ ಜನರ ಕುತೂಹಲ

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

ಟೀಸಿ ನೀಡಲು ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗ

ಟೀಸಿ ನೀಡಲು ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗ

ಫೇಸ್‌ಬುಕ್‌ನಲ್ಲಿ ಪೀಠೊಪಕರಣ ಮಾರಲು ಹೋದ ವ್ಯಕ್ತಿಗೆ 98 ಸಾವಿರ ರೂ. ವಂಚನೆ

ಫೇಸ್‌ಬುಕ್‌ನಲ್ಲಿ ಪೀಠೊಪಕರಣ ಮಾರಲು ಹೋದ ವ್ಯಕ್ತಿಗೆ 98 ಸಾವಿರ ರೂ. ವಂಚನೆ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ