
HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ
Team Udayavani, Jun 6, 2023, 3:20 PM IST

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಮತ್ತೆ ಕಾಣಿಸಿಕೊಂಡಿದ್ದು, ಜೂ.6 ರ ಮಂಗಳವಾರ ಮುಂಜಾನೆ ಜೆಎಲ್ ಆರ್ ವಾಹನದಲ್ಲಿ ಸಫಾರಿಗೆ ತೆರಳಿದ್ದವರಿಗೆ ದರ್ಶನ ನೀಡಿದೆ.
ನಾಗರಹೊಳೆಯ ಅಭಯಾರಣ್ಯದ ದಮ್ಮನಕಟ್ಟೆ ರೇಂಜಿನ ಸುಂಕದಕಟ್ಟೆ ಬಳಿ ಸುಮಾರು ದಿನಗಳ ನಂತರ ಕಪ್ಪು ಚಿರತೆಯು ಇಂದು ಮುಂಜಾನೆಯ ಜೆ ಎಲ್ ಆರ್ ವಾಹನ ಚಾಲಕ ರೇವಣ್ಣರೊಂದಿಗೆ ಸಫಾರಿಗೆ ತೆರಳಿದ್ದವರಿಗೆ ಕಾಣಿಸಿಕೊಂಡಿದೆ.
ಚಿರತೆಯು ಆರಾಮವಾಗಿ ಸಫಾರಿ ಲೈನ್ ದಾಟುತ್ತಿರುವ ದೃಶ್ಯವನ್ನು ಮೈಸೂರಿನ ಜೀವನ್ ಕೃಷ್ಣಪ್ಪ ಎಂಬವರು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಚಿರತೆ ಕಂಡ ವನ್ಯಪ್ರೀಯರು ಸಂತೋಷದಿಂದ ವಾಪಸ್ ಆಗಿದ್ದಾರೆ. ತಾವು ಸೆರೆ ಹಿಡಿದಿದ್ದ ವಿಡಿಯೋವನ್ನು ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್ ಮೂಲಕ ಉದಯವಾಣಿಗೆ ಕಳುಹಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur; ಗದ್ದಿಗೆಯಲ್ಲಿ 59 ಆದಿವಾಸಿ ಜೋಡಿಗಳ ಸಾಮೂಹಿಕ ವಿವಾಹ

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ

Cauvery; ತಮಿಳುನಾಡಿಗೆ ಮತ್ತೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ: ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

Mysuru Dasara: ಅರಮನೆಗೆ ಬಂದಿಳಿದ ಗಜಪಡೆಯ 2ನೇ ತಂಡ