Crime: ಹೆಣ್ಣನ್ನು ಖರೀದಿಸಿ ಮದುವೆಯಾದ, ನಂತರ ಕೊಂದ!
Team Udayavani, Aug 11, 2023, 7:11 AM IST
ನವದೆಹಲಿ: ದೆಹಲಿ ಮೂಲದ ವ್ಯಕ್ತಿಯೊಬ್ಬ 70,000 ರೂ.ಗಳನ್ನು ಕೊಟ್ಟು ಬಿಹಾರದಿಂದ ಮಹಿಳೆಯೊಬ್ಬರನ್ನು ಖರೀದಿಸಿ ಮದುವೆಯಾಗಿದ್ದು, ಬಳಿಕ ತಾನೇ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಬಿಹಾರಿ ಮೂಲದವರು ಎನ್ನಲಾದ ಸ್ವೀಟಿ ಎಂಬಾಕೆಯನ್ನು ಧರ್ಮವೀರ್ ಎಂಬವರು ಖರೀದಿಸಿ, ಮದುವೆಯಾಗಿದ್ದರು.
ಆದರೆ, ಸ್ವೀಟಿ ಆಗಾಗ ಮನೆಬಿಟ್ಟು ಓಡಿ ಹೋಗುತ್ತಿದ್ದಳು. ಎಲ್ಲಿಗೆ ಹೋಗುತ್ತಿದ್ದೇನೆ? ಯಾವಾಗ ಬರುತ್ತೇನೆ ಎಂಬ ಯಾವ ಮಾಹಿತಿಯನ್ನೂ ನೀಡದೇ ಹೋಗುತ್ತಿದ್ದರಿಂದ ಧರ್ಮವೀರ್ಗೆ ಆಕೆ ಬಗ್ಗೆ ತೀವ್ರವಾದ ಅಸಮಾಧಾನವಿತ್ತು. ಈ ಹಿನ್ನೆಲೆಯಲ್ಲಿ ಧರ್ಮವೀರ್ ತನ್ನ ಇಬ್ಬರು ಸಂಬಂಧಿಕರ ಸಹಾಯ ಪಡೆದು ಸ್ವೀಟಿಯನ್ನು ಹತ್ಯೆಗೈದಿದ್ದಾನೆ. ಅಲ್ಲದೇ, ಹರ್ಯಾಣ ಗಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಎಸೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.