Britain: ಸಿಗರೇಟ್ ನಿಷೇಧಕ್ಕೆ ಬ್ರಿಟನ್ ಚಿಂತನೆ
Team Udayavani, Sep 23, 2023, 8:34 PM IST
ಲಂಡನ್: ಬ್ರಿಟನ್ನ ಮುಂದಿನ ಪೀಳಿಗೆಯನ್ನು ಧೂಮಪಾನ ವ್ಯಸನದಿಂದ ದೂರವಿಡಲು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಚಿಂತನೆ ನಡೆಸಿದ್ದಾರೆ. 2030ರ ವೇಳೆಗೆ ಬ್ರಿಟನ್ನಲ್ಲಿ ಧೂಮಪಾನವನ್ನು ಸಂಪೂರ್ಣ ನಿಷೇಧಿಸುವ ಮಹತ್ವಾಕಾಂಕ್ಷೆಯನ್ನು ಸುನಕ್ ಸರ್ಕಾರ ಹೊಂದಿದೆ.
ಈಗಾಗಲೇ ಇದರ ಭಾಗವಾಗಿ ಜನರನ್ನು ಧೂಮಪಾನ ತೊರೆಯಲು ಪ್ರೋತ್ಸಾಹಿಸುವ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅದರ ಜತೆಗೆ ರಿಷಿ ಸುನಕ್ ಮುಂದಿನ ಪೀಳಿಗೆಗೆ ತಂಬಾಕು ದೊರೆಯದಂತೆ ಮಾಡಲು ನ್ಯೂಜಿಲೆಂಡ್ ಸರ್ಕಾರ ಕಳೆದ ವರ್ಷ ಘೋಷಿಸಿದಂತೆಯೇ ತಾವೂ ಕ್ರಮ ಕೈಗೊಳ್ಳಲು ಯೋಜಿಸಿದ್ದಾರೆ. ಆ ದೇಶದಲ್ಲಿ 2009ರ ಜ.1ರ ನಂತರ ಜನಿಸಿರುವವರಿಗೆ ದೇಶದಲ್ಲಿ ತಂಬಾಕು ಮಾರಾಟ ಮಾಡುವಂತಿಲ್ಲ ಎಂದು ನಿಯಮ ಇದೆ.