ಬೋಂಡಾ, ಬನ್ಸ್ ಮತ್ತು ಕೇಕ್‌


Team Udayavani, Jul 15, 2020, 10:53 AM IST

ಬೋಂಡಾ, ಬನ್ಸ್ ಮತ್ತು ಕೇಕ್‌

ಬಾಳೆಹಣ್ಣು, ತೋಟದಲ್ಲಿ ಮಾತ್ರವಲ್ಲ, ಬಹುತೇಕರ ಹಿತ್ತಲಲ್ಲಿಯೂ ಬೆಳೆಯುವ ಹಣ್ಣು. ಸರ್ವಕಾಲದಲ್ಲಿಯೂ ಸಿಗುವ ಈ ಹಣ್ಣನ್ನು ಮಳೆಗಾಲ ದಲ್ಲಿ ತಿನ್ನಲು ಸ್ವಲ್ಪ ಭಯ. ಎಲ್ಲಿ ಶೀತವಾಗಿ ಬಿಡುತ್ತದೋ ಅಂತ. ಆದರೆ, ಬಾಳೆಹಣ್ಣಿನ ತಿನಿಸುಗಳನ್ನು
ತಿನ್ನಲು ತೊಂದರೆಯಿಲ್ಲ. ಬಾಳೆಹಣ್ಣಿನಿಂದ ತಯಾರಿಸಬಹುದಾದ ಖಾದ್ಯಗಳ ರೆಸಿಪಿ ಇಲ್ಲಿದೆ ನೋಡಿ…

ಬೋಂಡಾ ಬೇಕಾಗುವ ಸಾಮಗ್ರಿ:
ಬಾಳೆಹಣ್ಣು- 4, ಗೋಧಿ ಹಿಟ್ಟು- 1 ಕಪ್‌, ಬೆಲ್ಲ- ಕಾಲು ಕಪ್‌, ಅಕ್ಕಿ ಹಿಟ್ಟು- 2 ಚಮಚ, ಚಿಟಿಕೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು,
ಕರಿಯಲು ಎಣ್ಣೆ.
ಮಾಡುವ ವಿಧಾನ: ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲ (ಬೆಲ್ಲಕ್ಕೆ ಸ್ವಲ್ಪ ನೀರು ಬೆರೆಸಿ, ಬಿಸಿ
ಮಾಡಿ ಕರಗಿಸಿಕೊಳ್ಳಿ) ಅಡುಗೆ ಸೋಡಾ, ಏಲಕ್ಕಿ ಪುಡಿ, ಉಪ್ಪು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ. ಅದನ್ನು ಸಣ್ಣ
ಉಂಡೆಗಳಾಗಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ.

ಬನ್ಸ್
ಬೇಕಾಗುವ ಸಾಮಗ್ರಿ: ಗೋಧಿ/ ಮೈದಾ ಹಿಟ್ಟು- 3 ಕಪ್‌, ಸಕ್ಕರೆ- ಎಷ್ಟು ಸಿಹಿ ಬೇಕೋ ಅಷ್ಟು, ಮೊಸರು- ಅರ್ಧ ಕಪ್‌, ಅಡುಗೆ
ಸೋಡಾ- 1 ಚಿಟಿಕೆ, ಬಾಳೆಹಣ್ಣು- 4, ಕರಿಯಲು ಎಣ್ಣೆ, ರುಚಿಗೆ ಉಪ್ಪು.
ಮಾಡುವ ವಿಧಾನ: ಬಾಳೆಹಣ್ಣನ್ನು ಮೊಸರಿನೊಂದಿಗೆ ಬೆರೆಸಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಸಕ್ಕರೆ, ಜೀರಿಗೆ, ಸೋಡಾ, ಉಪ್ಪು ಬೆರೆಸಿ, ಸ್ವಲ್ಪ ಸ್ವಲ್ಪವೇ ಮೈದಾ/ ಗೋಧಿ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟು ತಯಾರಿಸಿ. ಅರ್ಧ ಗಂಟೆಯ ನಂತರ ಹಿಟ್ಟನ್ನು ಪೂರಿಯಂತೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಕಾಯಿ ಚಟ್ನಿಯೊಂದಿಗೆ ಸವಿಯಲು ಇದು ಬಲು ರುಚಿ.

ಕೇಕ್‌
ಬೇಕಾಗುವ ಸಾಮಗ್ರಿ: ಅರ್ಧ ಕಪ್‌ ಬೆಣ್ಣೆ, ಒಂದು ಕಪ್‌ ಸಕ್ಕರೆ, ಒಂದು ಮೊಟ್ಟೆ, ಮೂರು ಬಾಳೆಹಣ್ಣು, ಒಂದೂ ಕಾಲು ಕಪ್‌ ಮೈದಾ, ಚಿಟಿಕೆ ಬೇಕಿಂಗ್‌ ಸೋಡಾ, ಉಪ್ಪು, ಡ್ರೈ ಫ್ರೂಟ್ಸ್
ಮಾಡುವ ವಿಧಾನ: ಒಂದು ಬಟ್ಟಲಿಗೆ ಬೆಣ್ಣೆ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿ.ಮಿಶ್ರಣವು ಕ್ರೀಮ್‌ನಂತೆ ಆದಾಗ, ಮೊಟ್ಟೆಯ ದ್ರಾವಣವನ್ನು ಸೇರಿಸಿ ಮತ್ತಷ್ಟು ಕಲಸಿ. ನಂತರ ಕಿವುಚಿದ (ರುಬ್ಬಿದರೂ ಆಗುತ್ತದೆ) ಬಾಳೆಹಣ್ಣನ್ನು ಸೇರಿಸಿ ಬೆರೆಸಿ. ಮೈದಾ ಹಿಟ್ಟು, ಬೇಕಿಂಗ್‌ ಸೋಡಾ, ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಕÕ… ಮಾಡಿ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ
ತುಣುಕು ಸೇರಿಸಿ. ಈ ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಗೆ ಸುರಿದು, ಕುಕ್ಕರ್‌ ಒಳಗೆ ಇಟ್ಟು (ನೀರು ಹಾಕಬಾ ರದು) 20 ನಿಮಿಷ ಕಾಲ ಬೇಯಿಸಿದರೆ ಬನಾನ ಕೇಕು ಸಿದ್ಧ.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

Garden

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.