ದುಬಾೖಯಲ್ಲಿ ಮನೆ ಖರೀದಿ: ಭಾರತೀಯರ ಸಂಖ್ಯೆಯೇ ಹೆಚ್ಚು
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ದಾಖಲೆಗಳಲ್ಲಿ ಉಲ್ಲೇಖ
Team Udayavani, Feb 6, 2023, 7:20 AM IST
ಅಬುಧಾಬಿ: ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಆಸ್ತಿ, ನಿವೇಶನಗಳನ್ನು ಹೊಂದುತ್ತಿರುವ ಭಾರ ತೀಯರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ದುಬಾೖಯಲ್ಲೂ ಭಾರತೀಯರ ಠಿಕಾಣಿ ಹೆಚ್ಚುತ್ತಿದ್ದು, 2022ರಲ್ಲಿ ದುಬಾೖಯಲ್ಲಿ ಸ್ವಂತ ಮನೆಗಳನ್ನು ಖರೀದಿಸುವುದಕ್ಕಾಗಿ ಭಾರತೀ ಯರು ಬರೋಬ್ಬರಿ 33,500 ಕೋಟಿ ರೂ. ಖರ್ಚು ಮಾಡಿದ್ದಾರಂತೆ.
ಐಷಾರಾಮಿ ಜೀವನಕ್ಕೆ ಹೆಸರಾಗಿರುವ ದುಬಾೖಯಲ್ಲಿರುವ ವಿದೇಶಿಗರ ಪೈಕಿ ಭಾರತೀಯರೇ ಹೆಚ್ಚು. ಉದ್ಯೋಗಕ್ಕಾಗಿ ದುಬಾೖಗೆ ತೆರಳಿದ ಎಷ್ಟೋ ಮಂದಿ, ಈಗ ಅಲ್ಲಿನ ಪ್ರಜೆಗಳೇ ಆಗಿಹೋಗಿದ್ದೂ ಇದೆ. ಇತ್ತೀಚಿನ ವರ್ಷಗಳಲ್ಲಂತೂ ಭಾರತೀಯರು ದುಬಾೖಯಲ್ಲಿ ಮನೆಗಳ ಖರೀದಿಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಾಡುತ್ತಿರುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
2022ರ ರಿಯಲ್ ಎಸ್ಟೇಟ್ ವರದಿಗಳ ಪ್ರಕಾರ ದುಬಾೖರಿ ಯಲ್ ಎಸ್ಟೇಟ್ ಮಾರುಕಟ್ಟೆ ಕಳೆದ ವರ್ಷ 16 ಶತಕೋಟಿ ಧೀರಮ್(33,500 ಕೋಟಿ ರೂ.)ಗಳನ್ನು ಗಳಿಸಿದೆ. ಇದು 2021ರಲ್ಲಿನ ಮೌಲ್ಯಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚು. ಇನ್ನು ದುಬಾೖಯಲ್ಲಿ ಮನೆಗಳನ್ನು ಖರೀದಿಸಿರುವ ವರ ಪೈಕಿ ಶೇ.40 ಮಂದಿ ದಿಲ್ಲಿ ಎನ್ಸಿಆರ್, ಅಹ್ಮದಾಬಾದ್, ಸೂರತ್, ಹೈದರಾಬಾದ್, ಪಂಜಾಬ್ನವರಾಗಿದ್ದಾರೆ. ಉಳಿದ ಶೇ.40 ಮಂದಿ ದುಬಾೖಯಲ್ಲಿಯೇ ವಾಸವಿರುವ ಭಾರತೀಯ ರಾಗಿದ್ದಾರೆ, ಶೇ.20 ಮಂದಿ ವಿಶ್ವದ ಬೇರೆ-ಬೇರೆ ರಾಷ್ಟ್ರಗಳ ಲ್ಲಿರುವ ಭಾರತೀಯರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ