ರಾಮ ಚರಿತ ಮಾನಸ ಸುಟ್ಟವರ ವಿರುದ್ಧ ಎನ್‌ಎಸ್‌ಎ ಅಡಿ ಕೇಸು
Team Udayavani, Feb 7, 2023, 6:40 AM IST
ಲಕ್ನೋ: “ರಾಮಚರಿತಮಾನಸ’ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿರುವ ಆರೋಪದಡಿ ಉತ್ತರ ಪ್ರದೇಶದ ಜೈಲಿನಲ್ಲಿರುವ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಾಗಿದೆ.
ಅಖೀಲ ಭಾರತೀಯ ಒಬಿಸಿ ಮಹಾಸಭಾ ವತಿಯಿಂದ ಜ.29ರಂದು ಲಕ್ನೋದಲ್ಲಿ ನಡೆದ ಪ್ರತಿಭಟನೆಯಲ್ಲಿ “ರಾಮಚರಿತಮಾನಸ’ದ ಪ್ರತಿಗಳನ್ನು ಸುಟ್ಟುಹಾಕಲಾಗಿತ್ತು. ಈ ಸಂಬಂಧ ಲಕ್ನೋದ ಪಿಜಿಐ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಗಳಾದ ಮೊಹಮದ್ ಸಲೀಂ ಮತ್ತು ಸತ್ಯೇಂದ್ರ ಖಶ್ವಾ ಜೈಲಿನಲ್ಲಿದ್ದಾರೆ.
ಪ್ರಕರಣ ಸಂಬಂಧ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ದೇವೇಂದ್ರ ಪ್ರತಾಪ್ ಯಾದವ್, ಯಶ್‌ಪಾಲ್ ಸಿಂಗ್ ಲೋಧಿ, ಸತ್ಯೇಂದ್ರ ಖಶ್ವಾ, ಮಹೇಂದ್ರ ಪ್ರತಾಪ್ ಯಾದವ್, ಸುಜಿತ್ ಯಾದವ್, ನರೇಶ್ ಸಿಂಗ್, ಎಸ್.ಎಸ್.ಯಾದವ್, ಸಂತೋಷ್ ವರ್ಮಾ ಮತ್ತು ಮೊಹಮದ್ ಸಲೀಂ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ಪಣಜಿ: ಮಹಿಳೆಯರಿಗೆ ಸರಿಯಾದ ಗೌರವ ಕೊಡಬೇಕು, ಅವಮಾನಿಸಬಾರದು: ಡಾ.ನಿರ್ಮಲಾ ಸಿ.ಯಲಿಗಾರ
ಏಜೆನ್ಸಿಗಳ ದುರುಪಯೋಗ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ 14 ವಿರೋಧ ಪಕ್ಷಗಳು
ಪಾಕ್ ಗಡಿಯ ದೇಗುಲಕ್ಕೆ ಶೃಂಗೇರಿ ವಿಗ್ರಹ; ಕಾಶ್ಮೀರದ ಕುಪ್ವಾರದಲ್ಲಿ ಶಾರದಾ ದೇಗುಲ ಲೋಕಾರ್ಪಣೆ
2030ಕ್ಕೆ ಸ್ವದೇಶಿ 6ಜಿ ದುನಿಯಾ : ಪ್ರಧಾನಿಯಿಂದ 6ಜಿ ಟೆಸ್ಟ್ ಬೆಡ್ ಅನಾವರಣ
MUST WATCH
ಹೊಸ ಸೇರ್ಪಡೆ
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ರೈತರ ಹಕ್ಕಿಗಾಗಿ ಸಂಘಟಿತರಾಗಿ ಹೋರಾಟ ಅನಿವಾರ್ಯ; ಶಾಂತಿ ಪ್ರಸಾದ್ ಹೆಗ್ಡೆ
ಸುಳ್ಯ ನ.ಪಂ. ಸಾಮಾನ್ಯ ಸಭೆ; ನೀರಿನ ಮಿತಬಳಕೆ, ಜಾಗೃತಿ ಅಗತ್ಯ
ಚಿಕ್ಕಮಗಳೂರು: ಮತದಾರರಿಗೆ ಹಂಚಲು ತಂದಿದ್ದ 150 ಕ್ವಿಂಟಾಲ್ ಅಕ್ಕಿ ವಶ
ಎ. 2: “ಬಸಂತ್ ಉತ್ಸವ್’; ಸಿತಾರ್-ಬಾನ್ಸುರಿ ಜುಗಲ್‌ಬಂದಿ