ಜಾತಿ-ವ್ಯಕ್ತಿಗತ ಟೀಕೆ ಸರಿಯಲ್ಲ: ಜಗದೀಶ್ ಶೆಟ್ಟರ್
Team Udayavani, Feb 7, 2023, 10:51 PM IST
ಹುಬ್ಬಳ್ಳಿ: ಚುನಾವಣೆ ಸಮೀಪಿಸುತ್ತಿದ್ದು, ಜಾತಿ-ವ್ಯಕ್ತಿಗತ ಟೀಕೆ ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಚಾರವಾಗಿ ಅನುಭವಿ ರಾಜಕಾರಣಿ ಕುಮಾರಸ್ವಾಮಿ ಏಕೆ ಹೀಗೆ ಮಾತನಾಡಿದ್ದಾರೆ ಅರ್ಥವಾಗುತ್ತಿಲ್ಲ. ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಅನಿಸುತ್ತಿದೆ. ಈ ರೀತಿಯ ವೈಯಕ್ತಿಕ ಟೀಕೆ-ಟಿಪ್ಪಣಿಗಳಿಗೆ, ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವುದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕು. ಇದು ಸಮಾಜ ಒಡೆಯುವ ಕೆಲಸವಾಗಿದೆ.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣೆ ಹಾಗೂ ಸಿಎಂ ಯಾರು ಆಗಬೇಕೆಂಬುದರ ಕುರಿತು ದೊಡ್ಡ ಪ್ರಮಾಣದಲ್ಲಿ ಚರ್ಚೆಗಳಾಗುತ್ತವೆ. ವೈಯಕ್ತಿಕ ವಿಚಾರ ಮತ್ತು ವ್ಯಕ್ತಿಗಳ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮನೆ ಕಳ್ಳತನದ ಆರೋಪಿ ಬಂಧನ : 11.18 ಲಕ್ಷ ಮೌಲ್ಯದ ಚಿನ್ನಾಭರಣ ವಶ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಬೊಂಬೆ ನುಡಿಯಿತು ಭವಿಷ್ಯ!
ಎಲ್ಲಾ ಗೌರವ ಸ್ಥಾನಮಾನ ಕೊಟ್ಟರೂ ಚಿಂಚನಸೂರು ಕಾಂಗ್ರೆಸ್ ಗೆ ಹೋದರು; ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ
ಬೋಗಸ್ ಕಾರ್ಡ್ ಗಳ ಬಿಡುಗಡೆ ಸರಣಿ ಆರಂಭ : ಸಿಎಂ ಬೊಮ್ಮಾಯಿ ಲೇವಡಿ