
ಚಂದ್ರಯಾನ-3 ಇಳಿದಾಣಗಳ ಗುರುತು ಪೂರ್ಣ; ವರ್ಷಾಂತ್ಯಕ್ಕೆ ಉಡಾವಣೆ ಸಾಧ್ಯತೆ
ಹಿಂದಿನ ಸಮಸ್ಯೆ ತಲೆದೋರದಿರಲು ಮುನ್ನೆಚ್ಚರಿಕೆ
Team Udayavani, Feb 9, 2023, 7:35 AM IST

ನವದೆಹಲಿ: ವರ್ಷಾಂತ್ಯದಲ್ಲಿ ನಡೆಯಲಿರುವ ಚಂದ್ರಯಾನ-3ಕ್ಕೆ ಸಿದ್ಧತೆಗಳು ಬಿರುಸಾಗಿಯೇ ನಡೆದಿದೆ. ಚಂದ್ರಯಾನ-2ರಲ್ಲಿ ಉಂಟಾದ ಸಮಸ್ಯೆ ತಲೆದೋರಬಾರದು ಎಂಬ ಕಾರಣಕ್ಕಾಗಿ ಸ್ವದೇಶೀಯವಾಗಿ ನಿರ್ಮಿಸಲಾಗಿರುವ ಲ್ಯಾಂಡರ್ ಇಳಿಯುವ ಮೂರು ಸಂಭಾವ್ಯ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-2ರ ಸಂದರ್ಭದಲ್ಲಿ ಲ್ಯಾಂಡರ್ ಕ್ರ್ಯಾಶ್ ಲ್ಯಾಂಡಿಂಗ್ ಆದ ಹಿನ್ನೆಲೆ ಈ ಬಾರಿ ಅತ್ಯಂತ ಜಾಗರೂಕತೆಯಿಂದ ಲ್ಯಾಂಡಿಗ್ ಪ್ರದೇಶಗಳನ್ನು ಗುರುತಿಸಲಾಗಿದೆ.
ಚಂದ್ರನ ಮೇಲ್ಮೈ ನಲ್ಲಿರುವ ಕುಳಿಗಳು ಅವುಗಳ ಗಾತ್ರ, ಸೂರ್ಯನ ಕಿರಣಗಳ ಅಂತರ, ಭೂಮಿ ಜತೆಗಿನ ರೇಡಿಯೋ ಸಂವಹನದ ಸಾಧ್ಯತೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.
ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ನೀರು,ಮಂಜುಗಡ್ಡೆ ಪತ್ತೆಯಾಗುವ ಸಾಧ್ಯತೆಗಳು ಇವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈಲೈಟ್ ಏನು?
ಪ್ರಸಕ್ತ ಸಾಲಿನ ಯಾತ್ರೆಯಲ್ಲಿ ದೇಶೀಯವಾಗಿಯೇ ನಿರ್ಮಿತವಾಗಿರುವ ಲ್ಯಾಂಡರ್, ಪ್ರೊಪಲ್ಶನ್ ಮಾಡ್ಯುಲ್ ಹಾಗೂ ರೋವರ್ ಅನ್ನು ಒಳಗೊಂಡಿದೆ.
ಟಾಪ್ ನ್ಯೂಸ್
