ಮೂರು ದಶಕ ಕಳೆದರೂ ಏತನೀರಾವರಿ ಯೋಜನೆಯಲ್ಲಿ ಹನಿ ನೀರು ಹರಿದಿಲ್ಲ

Team Udayavani, Sep 12, 2020, 11:36 AM IST

ಮೂರು ದಶಕ ಕಳೆದರೂ ಏತನೀರಾವರಿ ಯೋಜನೆಯಲ್ಲಿ ಹನಿ ನೀರು ಹರಿದಿಲ್ಲ

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿ ಏತನೀರಾವರಿ ಯೋಜನೆ ಅನುಷ್ಠಾನಗೊಂಡು ಮೂರು ದಶಕವಾದರೂ, ನೂರಾರು ಕೋಟಿ ರೂ. ಖರ್ಚು ಮಾಡಿದ್ರೂ ಕಾಮಗಾರಿ ಮುಗಿದಿಲ್ಲ. ಒಂದು ಹನಿ ನೀರೂ ಹರಿದಿಲ್ಲ.
ಬಹುನಿರೀಕ್ಷಿತ ಕಾಚೇನಹಳ್ಳಿ ಏತನೀರಾವರಿ ಯೋಜನೆಗೆ 1991 ಡಿ.27ರಂದು ಅಂದಿನ ಕಾಂಗ್ರೆಸ್‌ ಸರ್ಕಾರ ಕೇವಲ 8.9 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಕಾಮಗಾರಿಗೆ ಚಾಲನೆ ನೀಡಿತ್ತು. ದಂಡಿಗನಹಳ್ಳಿ, ಶಾಂತಿಗ್ರಾಮ, ದುದ್ದು, ಗಂಡಸಿ ಹೋಬಳಿಯ 12,600 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮೂರು ಹಂತದಲ್ಲಿ ನೀರು ಹರಿಸುವ ಈ ಯೋಜನೆಕುಂಟುತ್ತಾ ಸಾಗಿದೆ.

ಈಗಾಗಲೇ 2002ರ ಅ.19 ಮತ್ತು 2007ರ ಜೂ.30 ರಂದು 2ನೇ ಬಾರಿಗೆ 165 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿ ಮಾಡಿ ಅನುಮೋದನೆ ನೀಡಿದ್ದು, ಮೊದಲನೇ ಹಂತಕ್ಕೆ 57.10 ಕೋಟಿ ರೂ. ಮತ್ತು 2ನೇ ಹಂತಕ್ಕೆ 47.38 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿತ್ತು. ಇದನ್ನು ಮೀರಿ ಕಾಮಗಾರಿಗೆ ಹಣ ವೆಚ್ಚ ಮಾಡಿದ್ದರೂ ಕಾಮಗಾರಿ ಮುಗಿಯುವ ಲಕ್ಷಣಗಳುಕಾಣುತ್ತಿಲ್ಲ.

ಕೆರೆಗೆ ನೀರು ಹರಿಯುತ್ತಿಲ್ಲ: 29 ವರ್ಷಗಳಿಂದ ನಡೆಯುತ್ತಿರುವ ಈ ಕಾಮಗಾರಿ 8.9 ಕೋಟಿ ರೂ.ನೊಂದಿಗೆ ಆರಂಭವಾಗಿ, ಈವರೆಗೂ 101 ಕೋಟಿ ರೂ. ಖರ್ಚು ಆಗಿದೆ. ಆದರೂ, ಕಾಮಗಾರಿ ಮುಗಿದಿಲ್ಲ. ಅಂದಾಜಿನ ಪ್ರಕಾರ ಇನ್ನೂ 30 ಕೋಟಿ ರೂ. ಅಗತ್ಯವಿದೆ. ಹೀಗೆ ಯೋಜನೆಗೆ ಸರ್ಕಾರದಿಂದ ಹಣ ಹರಿಯುತ್ತಿದೆಯೇ ಹೊರತು, ಕೆರೆ ಹಾಗೂ ಕೃಷಿ ಭೂಮಿಗೆ ಒಂದು ಹನಿ ನೀರು ಹರಿದಿಲ್ಲ.

ತಡವಾಗಲು ಕಾರಣವೇನು?: ಯೋಜನೆ ಪ್ರಾರಂಭವಾದ ಅತ್ಯಾಧುನಿಕ ಯಂತ್ರಗಳು ಇಲ್ಲದೆ ಇರಬಹುದು. ಆದರೆ, ಈಗ ದಿನಕ್ಕೆ ಕಿ.ಮೀ. ಗಟ್ಟಲೆ ನಾಲೆ ತೋಡಬಹುದಾದ ಯಂತ್ರಗಳು ಬಂದಿವೆ. ಹಗಲು ರಾತ್ರಿಕೆಲಸ ಮಾಡುವಕಾರ್ಮಿಕರು ಇದ್ದಾರೆ. ಆದರೂ, ಈ ಯೋಜನೆ ವಿಳಂಬವಾಗುತ್ತಿರುವುದು ಏಕೆ ಎಂಬ ಪ್ರಶ್ನೆ ರೈತರನ್ನುಕಾಡುತ್ತಿದೆ.

ಮೊದಲ ಹಂತ ಮುಕ್ತಾಯ: ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಹೊಳೆನರಸೀಪುರ ತಾಲೂಕಿನ ಎರಡು, ಚನ್ನರಾಯಪಟ್ಟಣ ತಾಲೂಕಿನ 7 ಗ್ರಾಮದ ಕೆರೆಗಳಿಗೆ ನೀರು ಹರಿಯುತ್ತಿದೆ. 2ನೇ ಹಂತ ಪೂರ್ಣಗೊಂಡರೆಹಾಸನ ತಾಲೂಕಿನಎರಡು ಗ್ರಾಮ, ಹೊಳೆನರಸೀಪುರ ತಾಲೂಕಿನ9, ಚ®ರಾ‌° ಯಪಟ್ಟಣದ 17 ಗ್ರಾಮಗಳಿಗೆ ನೀರು ಹರಿಯಲಿದೆ. ಆದರೆ, ಕಾಮಗಾರಿ ಮುಕ್ತಾಯ ಆಗಲು ಇನ್ನೂ ಎಷ್ಟು ವರ್ಷ ಬೇಕು ಎನ್ನುವುದನ್ನು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾಹಿತಿ ನೀಡುತ್ತಿಲ್ಲ.

ಕೆಲವು ಕಡೆ ಭೂ ಸ್ವಾಧೀನ ಆಗಿಲ್ಲ: ಕಾಮಗಾರಿ ಪ್ರಾರಂಭವಾಗಿ 29 ವರ್ಷ ಕಳೆದರೂ ಕೆಲವು ಕಡೆ ಇನ್ನೂ ಭೂ ಸ್ವಾಧೀನ ಆಗಿಲ್ಲ, ದಂಡಿಗನಹಳ್ಳಿ, ಮುರಾರನಹಳ್ಳಿ, ತೆಂಕನಹಳ್ಳಿ, ಅವೇರಹಳ್ಳಿಕೊಪ್ಪಲು, ತಿಮ್ಮಲಾಪುರ, ದೊತನೂರು ಕಾವಲು ಗ್ರಾಮಗಳಲ್ಲಿ 280 ಮೀಟರ್‌ಕಾಮಗಾರಿಆಗಬೇಕಿದೆ. 14.17 ಎಕರೆ ಭೂಮಿ ಸ್ವಾಧೀನಕ್ಕೆ ಪರಿಹಾರ ನೀಡಬೇಕಿದೆ. ಸದ್ಯ 18.52 ಕೋಟಿ ರೂ. ಹಣ ಮಾತ್ರ ಯೋಜನೆಗೆ ಇದೆ. ಈ ಹಣವನ್ನು ಭೂಸ್ವಾಧೀನಕ್ಕೆ ಬಳಸಿದರೆ ಕಾಮಗಾರಿ ನಿಲ್ಲಿಸಬೇಕಾಗುತ್ತದೆ, ಕಾಮಗಾರಿ ಮಾಡಿದರೆ ಭೂ ಸ್ವಾಧೀನ ಆಗದ ಕಡೆಯಲ್ಲಿ ನಾಲೆ ಮಾಡದೆ ನೀರು ಮುಂದಕ್ಕೆ ಹರಿಯುವುದಿಲ್ಲ.

3ನೇ ಹಂತಕ್ಕೆ ನೂರು ಕೋಟಿ ರೂ.: ಯೋಜನೆಯ ಎರಡನೇ ಹಂತಕ್ಕೆ ಇಷ್ಟೊಂದು ಅಡೆತಡೆಗಳು ಇರುವಾಗಲೇ ಮೂರನೇ ಹಂತಕ್ಕೆ ನಾಲಾ ವ್ಯಾಪ್ತಿಯ ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ ಪಟ್ಟು ಹಿಡಿದು ಮೈತ್ರಿ ಸರ್ಕಾರದ ವೇಳೆ ಅಂದಿನ ಮುಖ್ಯಮಂತ್ರಿ ಕರೆಯಿಸಿ 3ನೇ ಹಂತಕ್ಕೆ ಭೂಮಿ ಪೂಜೆ ನೆರವೇರಿಸಿ, ಬಜೆಟ್‌ನಲ್ಲಿ 100ಕೋಟಿ ರೂ. ಹಣ ಬಿಡುಗಡೆ ಮಾಡಿಸಿದ್ದಾರೆ. ಈ ಯೋಜನೆ ಯಾವಾಗ ಮುಕ್ತಾಯವಾಗಲಿದೆ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿದೆ.

– ಶಾಮಸುಂದರ್‌ ಅಣ್ಣೇನಹಳ್ಳಿ

ಟಾಪ್ ನ್ಯೂಸ್

6

ಕಿರುತೆರೆ ನಟನಿಂದ ಗರ್ಭಿಣಿ ಪತ್ನಿ ಮೇಲೆ ಹಲ್ಲೆ: ಮದುವೆ ಬಳಿಕ ಮತ್ತೊಬ್ಬಳ ಜತೆ ನಿಶ್ಚಿತಾರ್ಥ?

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

1-ttt

Budget; ಬಿಹಾರ, ಆಂಧ್ರಕ್ಕೆ ಪ್ರಧಾನ ಆದ್ಯತೆ : ಹಲವು ದೊಡ್ಡ ಯೋಜನೆಗಳು

Union Budget 2024: ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ದಿಗೆ 1.48 ಲಕ್ಷ ಕೋಟಿ ರೂ. ಮೀಸಲು

Union Budget 2024: ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ದಿಗೆ 1.48 ಲಕ್ಷ ಕೋಟಿ ರೂ. ಮೀಸಲು

1-wwewqe

Budget; ಭಾರತೀಯರು ಮೋದಿ ಸರ್ಕಾರದ ಮೇಲೆ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ: ನಿರ್ಮಲಾ

Union Budget: 7ನೇ ಬಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ-ನಿರೀಕ್ಷೆಗಳೇನು?

Union Budget: 7ನೇ ಬಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ-ನಿರೀಕ್ಷೆಗಳೇನು?

1-asasas

Nirmala Sitharaman ಮತ್ತೊಮ್ಮೆ ಕಾಗದರಹಿತ ಬಜೆಟ್: ‘ಬಹಿ-ಖಾತಾ’ ಶೈಲಿಯ ಪೌಚ್‌ನಲ್ಲಿ ಟ್ಯಾಬ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ ಸಾರ್ವಜನಿಕರ ಸಂಚಾರ ಬಂದ್

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ… ಸಾರ್ವಜನಿಕ ಸಂಚಾರ ಬಂದ್

drowned

Chikkodi:ಕೃಷ್ಣಾ ನದಿಗೆ ಪೂಜೆ ಸಲ್ಲಿಸುವ ವೇಳೆ ಅಯ ತಪ್ಪಿ ಯುವಕ ನೀರುಪಾಲು

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

ankola

Shirur Landslide: ಗಂಗಾವಳಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ.. ಎಂಟಕ್ಕೇರಿದ ಮೃತರ ಸಂಖ್ಯೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

6

ಕಿರುತೆರೆ ನಟನಿಂದ ಗರ್ಭಿಣಿ ಪತ್ನಿ ಮೇಲೆ ಹಲ್ಲೆ: ಮದುವೆ ಬಳಿಕ ಮತ್ತೊಬ್ಬಳ ಜತೆ ನಿಶ್ಚಿತಾರ್ಥ?

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

1-ttt

Budget; ಬಿಹಾರ, ಆಂಧ್ರಕ್ಕೆ ಪ್ರಧಾನ ಆದ್ಯತೆ : ಹಲವು ದೊಡ್ಡ ಯೋಜನೆಗಳು

Union Budget 2024: ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ದಿಗೆ 1.48 ಲಕ್ಷ ಕೋಟಿ ರೂ. ಮೀಸಲು

Union Budget 2024: ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ದಿಗೆ 1.48 ಲಕ್ಷ ಕೋಟಿ ರೂ. ಮೀಸಲು

Commissioner B. Dayanand: ಪೊಲೀಸ್‌ ಡ್ರೆಸ್‌ನಲ್ಲಿ ರೀಲ್ಸ್ ಗೆ ಕಮಿಷನರ್‌ ಬ್ರೇಕ್

Commissioner B. Dayanand: ಪೊಲೀಸ್‌ ಡ್ರೆಸ್‌ನಲ್ಲಿ ರೀಲ್ಸ್ ಗೆ ಕಮಿಷನರ್‌ ಬ್ರೇಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.