
ದೇವರ ಸ್ಮರಣೆಗೂ ಲಿಂಗತಟಸ್ಥ ಪದ ! ಇಂಗ್ಲೆಂಡ್ ಚರ್ಚ್ ಧರ್ಮಗುರುಗಳ ಸಲಹೆ
Team Udayavani, Feb 9, 2023, 7:30 AM IST

ಲಂಡನ್ :ಸಂಕಷ್ಟ ಎದುರಾಗುತ್ತಿದ್ದಂತೆ ಜನರು ದೇವರನ್ನು ಸ್ಮರಿಸುತ್ತಾರೆ. ಈ ವೇಳೆ ದೇವ ನನ್ನ ಕಾಪಾಡಿದ, ಸಂಕಷ್ಟದಲ್ಲಿ ತಂದೆ ನನ್ನ ಕೈ ಹಿಡಿದ ಎನ್ನುವಂಥ ಪದಗಳನ್ನು ಬಳಸುತ್ತಾರೆ. ಆದರೆ, ಈ ಪದಗಳು ಪುರುಷ ಪ್ರಾಧಾನ್ಯತೆಯ ಸೂಚಕವಾಗಿರುವ ಹಿನ್ನೆಲೆ ಇನ್ನು ಮುಂದೆ ದೇವರನ್ನು ಸ್ಮರಿಸಲು ಲಿಂಗತಟಸ್ಥ ಪದಗಳನ್ನು ಬಳಸಬೇಕಂತೆ.ಅಂಥ ಪದಗಳನ್ನು ಹುಡುಕುತ್ತಿರುವುದಾಗಿ ಇಂಗ್ಲೆಂಡ್‌ನ ಚರ್ಚ್ ಒಂದು ತಿಳಿಸಿದೆ.
ಹೌದು, ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿ ಪಾದ್ರಿ ಈ ರೀತಿಯ ಕರೆ ನೀಡಿದ್ದಾರೆ. ದೇವರ ಪ್ರಾರ್ಥನೆ ಸಮಯದಲ್ಲಿ ಓ ನನ್ನ ತಂದೆಯೇ ಎಂದು ಹೇಳಲಾಗುತ್ತದೆ. ದೇವರನ್ನು ಯಾವುದೇ ಲಿಂಗಸೂಚಕವಾಗಿ ಗುರುತಿಸುವ ಅಗತ್ಯವಿಲ್ಲ. ದೇವರಿಗೆ ಪರಿಧಿ ಇಲ್ಲ ಹೀಗಾಗಿ ದೇವರನ್ನು ಲಿಂಗತಟಸ್ಥ ಪದಗಳಿಂದ ಪ್ರಾರ್ಥಿಸಬೇಕು. ಅಂಥ ಪದದ ಹುಡುಕಾಟಕ್ಕಾಗಿ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
