
IAS ಅಧಿಕಾರಿ ರಿಂಕು ದುಗ್ಗಾಗೆ ಕಡ್ಡಾಯ ನಿವೃತ್ತಿ
Team Udayavani, Sep 27, 2023, 11:35 PM IST

ನವದೆಹಲಿ: ಸಾಕು ನಾಯಿಯ ವಿಷಯವಾಗಿ ಸುದ್ದಿಯಲ್ಲಿದ್ದ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಅವರ ಕಡ್ಡಾಯ ನಿವೃತ್ತಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಪ್ರಸ್ತುತ ಅವರು ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1994ರ ಬ್ಯಾಚ್‌ನ ಐಎಎಸ್ ಅಧಿಕಾರಿ ಗಳಾಗಿರುವ ರಿಂಕು ಮತ್ತು ಅವರ ಪತಿ ಸಂಜೀವ್ ಖೀರ್ವಾರ್, ಕಳೆದ ವರ್ಷ ನವದೆಹಲಿಯ ಸ್ಟೇಡಿಯಂ ಒಂದರಲ್ಲಿ ತಮ್ಮ ಸಾಕು ನಾಯಿಯನ್ನು ಓಡಾಡಿಸಲು, ಅಲ್ಲಿದ್ದ ಅಥ್ಲೀಟ್‌ಗಳನ್ನು ಕ್ರೀಡಾಂಗಣದಿಂದ ಹೊರಕ್ಕೆ ಕಳುಹಿಸಿದ್ದರು. ಈ ಸಂಬಂಧ ಭಾರೀ ಟೀಕೆ ವ್ಯಕ್ತ ವಾಗಿತ್ತು. ಪ್ರಸ್ತುತ ಸಂಜೀವ್ ಅವರು ಲಡಾಖ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
