
ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ
Team Udayavani, Nov 27, 2021, 10:45 PM IST

ಮುಂಬಯಿ : ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಬಂಧಿಸಿಡಲಾಗಿದ್ದ 39 ಕಾರ್ಮಿಕರನ್ನು ರಕ್ಷಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಎಲ್ಲ ಕಾರ್ಮಿಕರು ಮಧ್ಯಪ್ರದೇಶದ ರಾಜ್‌ಗರ್ ಮೂಲದವರು ಎನ್ನಲಾಗಿದೆ.
39 ಕಾರ್ಮಿಕರನ್ನು ರಾಜ್‌ಗರ್‌ನ ಕಂಟ್ರ್ಯಾಕ್ಟರ್ ಒಬ್ಬ ಕರೆದುಕೊಂಡು ಬಂದು ಕೊಲ್ಲಾಪುರಲ್ಲಿ ಕೆಲಸಕ್ಕೆ ಸೇರಿಸಿದ್ದ. ಇಲ್ಲಿ 25 ದಿನಗಳ ಕೆಲಸ ಮಾಡಿದ ಅನಂತರ ಕಾರ್ಮಿಕರು ಸಂಬಳವನ್ನು ಕೇಳಿದ್ದಾರೆ. ಆದರೆ ಸಂಬಳ ಕೊಡದೆ, ಪೀಡಿಸಿ ಅವರನ್ನು ಇಲ್ಲೇ ಬಂಧಿಸಿಟ್ಟುಕೊಳ್ಳಲಾಗಿತ್ತು.
ಈ ವಿಚಾರ ಮಧ್ಯಪ್ರದೇಶದ ಶಾಸಕರೊಬ್ಬರಿಗೆ ತಿಳಿದುಬಂದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದಿಂದ ಪೊಲೀಸರ ವಿಶೇಷ ತಂಡವೊಂದು ಬಂದಿದ್ದು, ಮಹಾ ಪೊಲೀಸರ ಸಹಾಯದೊಂದಿಗೆ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ : ರೇಪ್ & ಮರ್ಡರ್ : ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

Russia-Ukraine War ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಬೆಂಬಲಿಸಿದ ರಾಹುಲ್ ಗಾಂಧಿ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

ಕಣ್ಣೂರು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: CCTVಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆ

BJP MLA: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ