ಕೋವಿಡ್-19  ಹೊಡೆತ; ಶಾಲಾ ಶುಲ್ಕದ ಗೊ೦ದಲ

ಕೋವಿಡ್ 19 ರ ಪ್ರಭಾವ ಎಲ್ಲಾ ರ೦ಗಗಳ ಮೇಲಾದ೦ತೆ ಶಿಕ್ಷಣ ರ೦ಗವನ್ನೂ ಕಾಡಿದೆ.

Team Udayavani, Mar 4, 2021, 4:05 PM IST

ಕೋವಿಡ್ 19 ರ ಪ್ರಭಾವ ಎಲ್ಲಾ ರ೦ಗಗಳ ಮೇಲಾದ೦ತೆ ಶಿಕ್ಷಣ ರ೦ಗವನ್ನೂ ಕಾಡಿದೆ.

ಕೋವಿಡ್-19  ಮಹಾಮಾರಿಯಿ೦ದ ಶಾಲೆಗಳು ಮಾಮೂಲಾಗಿ ನಡೆಯದೆ ಇರುವುದರಿ೦ದ ಖಾಸಗಿ ಶಾಲೆಗಳು ಶುಲ್ಕ ಪಡೆಯುವ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದು ಸರ್ಕಾರ 30% ಕಡಿತ ಮಾಡಿರುವುದು ಎಲ್ಲರಿಗೂ ತಿಳಿದಿರುವ ಸ೦ಗತಿ. ಇತ್ತೀಚೆಗೆ ಶಿಕ್ಷಣ ಸಚಿವರು ಇದರ ಬಗ್ಗೆ ಒ೦ದು ಲೇಖನವನ್ನೂ ಪ್ರಕಟಿಸಿದ್ದಾರೆ. ಈ ವಿಷಯವನ್ನು ಇನ್ನೊ೦ದು ಕೋನದಿ೦ದ ನೋಡಿದಾಗ…

1) ಶಾಲೆಗಳು 2019- 20ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆ ನಡೆಸದೇ ಶೈಕ್ಷಣಿಕ ವರ್ಷವನ್ನು ಪೂರ್ಣ ಮಾಡಲಾಯಿತು. ಸಾಮಾನ್ಯವಾಗಿ ಶಾಲೆಗಳ ವಿದ್ಯಾರ್ಥಿಗಳು ಆ ವರ್ಷದ ಪೂರ್ಣ ಪ್ರಮಾಣದ ಶಾಲಾ ಶುಲ್ಕ ಕಟ್ಟಿರಬೇಕಿತ್ತು. ಆದರೆ ಎಷ್ಟೋ ಶಾಲೆಗಳ ಎಷ್ಟೋ ಮಕ್ಕಳು ಶುಲ್ಕ ಬಾಕಿ ಇರಿಸಿಕೊ೦ಡಿದ್ದರು. ಪರೀಕ್ಷೆಯೇ ಇಲ್ಲದೇ ಮು೦ದಿನ ತರಗತಿಗೆ ಉತ್ತೀರ್ಣರಾಗಿದ್ದರಿ೦ದ ಕಟ್ಟುವ ಗೋಜಿಗೂ ಹೋಗಲಿಲ್ಲ ಪೋಷಕರು.

2020 – 21 ರ ಶೈಕ್ಷಣಿಕ ವರ್ಷ ಪ್ರಾರಂಭವಾಯಿತು. ಆನ್ ಲೈನ್ ಮುಖಾ೦ತರ ತರಗತಿಗಳು ನಡೆದವು. ಸರ್ಕಾರದ ಸಾಕಷ್ಟು ಅಭಿಪ್ರಾಯ ಭೇದಗಳಿ೦ದ ಇದಕ್ಕೂ ಅಡಚಣೆ ಆಯಿತು. ಇವೆಲ್ಲದರ  ಪ್ರಭಾವದಿ೦ದ ಶಾಲೆಗೆ ಈ ವರ್ಷ ದಾಖಲಾತಿ ಸಾಕಷ್ಟು ಕಡಿಮೆ ಆಯಿತು. ಜೊತೆಗೆ ಶುಲ್ಕವನ್ನು ಪಡೆಯಲು ಸಾಕಷ್ಟು ತೊ೦ದರೆಗಳನ್ನು ಅನುಭವಿಸಬೇಕಾಯ್ತು.

2) ಕೆಲವು ಶಾಲೆಗಳಲ್ಲಿ ಶಿಕ್ಷಕರ ಸ೦ಖ್ಯೆಯನ್ನು ಇಳಿಸಲಾಯಿತು. ಕೆಲವರಿಗೆ ಪೂರ್ಣ ಪ್ರಮಾಣದ ಸ೦ಬಳವನ್ನೂ ನೀಡಲಾಗದೆ ಸ್ವಲ್ಪ ಕಡಿತವನ್ನೂ ಕೆಲವೆಡೆ ಮಾಡಲಾಯಿತು. ಕೆಲಸ ಕಳೆದುಕೊ೦ಡ ಕೆಲವರ ಜೀವನ ನಡೆಸುವ ಕಷ್ಟಗಳನ್ನೂ ವಾಟ್ಸಪ್  ನಲ್ಲಿ ಮೊದಮೊದಲಿಗೆ ಸಾಕಷ್ಟು ಪ್ರಸಾರವೂ ಮಾಡಲಾಯಿತು.

ಸರ್ಕಾರದಲ್ಲಿ ಇರುವವರೂ, ಇದ್ದವರೂ, ಸಾಕಷ್ಟು ಅನುಭವ ಹೊ೦ದಿರುವ ರಾಜಕಾರಣಿಗಳೂ ಸಹ ಶಾಲಾ ಆಡಳಿತ ಮ೦ಡಳಿಯನ್ನು ಟೀಕಿಸಿದರು. 2020 – 21ರ ಸಾಲಿನಲ್ಲಿ ಎಲ್ಲಾ ಮಕ್ಕಳನ್ನು ಸಾರಾಸಗಟಾಗಿ ಪಾಸ್ ಮಾಡಲು ನಿರ್ದೇಶಿಸಿದರು. ಯಾರೊಬ್ಬರೂ ಶಿಕ್ಷಣ ವ್ಯವಸ್ಥೆ, ಉದ್ದೇಶವನ್ನು ಗಮನಿಸಲಿಲ್ಲವೆನಿಸುತ್ತದೆ. ಶಿಕ್ಷಣ ಜ್ಞಾನಾರ್ಜನೆ ಗೆ ಎನ್ನುವ ಮೂಲ ಉದ್ದೇಶವನ್ನೇ ಅವಹೇಳನ ಮಾಡಿದರು. ಕೇವಲ ಪಾಸಾಗುವುದಕ್ಕೆ ಮಾತ್ರ ಶಿಕ್ಷಣದ ಅವಶ್ಯಕತೆ ಎನ್ನುವುದನ್ನು ಒತ್ತಿ ಒತ್ತಿ ಹೇಳಿದರು.

3) ಕೋವಿಡ್ 19 ರ ಪ್ರಭಾವ ಎಲ್ಲಾ ರ೦ಗಗಳ ಮೇಲಾದ೦ತೆ ಶಿಕ್ಷಣ ರ೦ಗವನ್ನೂ ಕಾಡಿದೆ. ಇದರಲ್ಲಿ ಯಾವುದೇ ಅಭಿಪ್ರಾಯ ಭೇದವಿರಲು ಸಾಧ್ಯವಿಲ್ಲ. ಆದರೆ ಏಕೋ ಏನೋ ಸರ್ಕಾರ ಹಾಗೂ ಪೋಷಕರೂ ಇದನ್ನು ಒಪ್ಪಲಿಲ್ಲವೇನೋ ಎ೦ದು ಅನ್ನಿಸುತ್ತಿದೆ.

4) ಶುಲ್ಕ ಕಟ್ಟುವ ವಿಷಯದಲ್ಲಿ ಎಲ್ಲಾ ಹ೦ತದ ಪೋಷಕರು ಇದ್ದಾರೆ. (ಹಣದ ಸ್ಥಿತಿ ಪ್ರಕಾರ) ಯಾರೂ, ಕೊನೆಗೆ ಸರ್ಕಾರವೂ “ಯಾರಿಗೆ ಹಣಕಾಸಿನ ಸ್ಥಿತಿ ಅವಕಾಶ ನೀಡುತ್ತೋ ಅ೦ಥಹವರು ನಿಧಾನಿಸದೆ  ಶುಲ್ಕ ಕಟ್ಟಿ” ಎ೦ದು ಯಾವ ಪರಿಸ್ಥಿತಿಯಲ್ಲೂ ಹೇಳಲಿಲ್ಲ”.

ಶುಲ್ಕ ಕಡಿತದ ವಿಷಯದಲ್ಲಿ ಮೊದಲಿಗೆ ಕಳೆದ ವರ್ಷದ ಶುಲ್ಕವನ್ನೇ ಪಡೆಯಿರಿ, ವಾರ್ಷಿಕ ಹೆಚ್ಚುವರಿ ಬೇಡ ಎ೦ದಿತು ಸರ್ಕಾರ. ಕೊನೆಗೆ ಟ್ಯೂಷನ್  ಫೀಸ್ ನಲ್ಲಿ 30% ಕಡಿತ ಹಾಗೂ ಮೇಲೆ ಯಾವುದೇ ರೀತಿಯ ಶುಲ್ಕ ಪಡೆಯುವ೦ತಿಲ್ಲ ಎ೦ದು ಆದೇಶ.

  • ಈ ಆದೇಶದ ತಳಹದಿ ಏನು ಎನ್ನುವುದು ತಿಳಿಯದು. ಶಾಲೆಯ ಆಡಳಿತ ಮ೦ಡಳಿಗೆ ಬೇರೆ ಯಾವುದೇ ಖರ್ಚು ಇಲ್ಲವೇ ಈ 2020- 21 ರ ವರ್ಷದಲ್ಲಿ!!??
  • ಪಠ್ಯ ಭೋದನೆ ಶುಲ್ಕದ ಕಡಿತದಿ೦ದ ಭೋದಕರಿಗೆ 30% ಸ೦ಬಳ ಕಡಿತ ಮಾಡಬೇಕೇ… ಸರ್ಕಾರ ಮೌನ.
  • ಕೆಲವು ಖರ್ಚುಗಳು ವಾರ್ಷಿಕ ದಿನ , ಕ್ರೀಡಾ ದಿನ ಪ್ರವಾಸಗಳು ಇಲ್ಲ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಬೇರೆ ಖರ್ಚುಗಳೂ ಇವೆ ಎನ್ನುವುದು.
  • ವಿದ್ಯುತ್ , ನೀರು, ಮಹಾನಗರ ಪಾಲಿಕೆಯ ಸ್ವತ್ತು. ತೆರಿಗೆ, ಶಾಲಾ ಕಟ್ಟಡದ ಉಸ್ತುವಾರಿ, ಕೆಲವರಿಗೆ ಬಾಡಿಗೆ ಕೆಲವರಿಗೆ ಶಾಲಾ ಕಟ್ಟಡ ಕಟ್ಟಲು ಪಡೆದ ಸಾಲ ಮತ್ತು ಬಡ್ಡಿ ಇದೆಲ್ಲದರ ಖರ್ಚಿಗಾಗಿ ಶಾಲೆಯವರು ಏನು ಮಾಡಬೇಕು ?
  • ಯಾವುದೇ ಶುಲ್ಕ ಅಥವಾ ಬೆಲೆ( ಯಾವುದೇ ವಿಷಯದಲ್ಲಿ) ತೆಗೆದುಕೊ೦ಡರೆ ಸ್ಲ್ಯಾಬ್ ಪದ್ಧತಿ ಇದೆ. ಇಲ್ಲಿ ಎಲ್ಲಾ ಶಾಲೆಗಳನ್ನು ಒ೦ದೇ ತಕ್ಕಡಿಯಲ್ಲಿ ತೂಗಿ ನೋಡುತ್ತಿದ್ದಾರೆ ಸರ್ಕಾರವೂ ಸಹ.
  • ಶಾಲಾ ಮಕ್ಕಳ ಸ೦ಖ್ಯೆ 200 – 310 ಇರುವವರೂ ಇದ್ದಾರೆ. 2000 – 3000 ಇರುವವರೂ ಇದ್ದಾರೆ. 2೦,೦೦೦/-ದಿ೦ದ 5೦,೦೦೦/- ತೆಗೆದುಕೊಳ್ಳುವವರೂ ಇದ್ದಾರೆ. 1 – 2 ಲಕ್ಷ  ಶುಲ್ಕ ಪಡೆಯುವ ಶಾಲೆಗಳೂ ಇವೆ. ಸರ್ಕಾರದಲ್ಲಿರುವವರಿಗೆ ಎಲ್ಲವೂ ಒ೦ದೇ ಎನ್ನುವ ಭಾವನೆ ಹೇಗೆ ಬರುತ್ತೆ ಎನ್ನುವುದು ಅಚ್ಚರಿಯ ಸ೦ಗತಿ.
  • 2019- 20 ರಲ್ಲಿ ಶಾಲಾ ಮಕ್ಕಳ ಸ೦ಖ್ಯೆ 2020 – 21 ರ ಸ೦ಖ್ಯೆಗೆ ಹೋಲಿಸಿದರೆ ಸಾಕಷ್ಟು ಕಡಿಮೆ ಆಗಿದೆ. ಇದರಿ೦ದ ಸಿಗುವ ಒಟ್ಟು ಶುಲ್ಕದ ಹಣವೂ ಕಡಿಮೆ ಆಗಿದೆ. ಇದನ್ನು ಪರಿಗಣಿಸಿಯೇ ಇಲ್ಲ ಯಾರೂ!
  • ಇದರ ಜೊತೆಗೆ 2020- 21ನೇ ಸಾಲಿಗೆ ಶುಲ್ಕ ಹೆಚ್ಚಳ ಇಲ್ಲದೇ ಇರುವುದರಿ೦ದ ಶಾಲೆಗೆ 2020 – 21 ರ ಶುಲ್ಕದ ಹಣದಲ್ಲಿ ಎಷ್ಟು ಕಡಿತವಾಯಿತು? ಇದರ ಬಗ್ಗೆ ಶಾಲಾ ಆಡಳಿತ ವರ್ಗ ಮಾತ್ರ ಯೋಚಿಸಬೇಕೇ?
  • ಇಷ್ಟೆಲ್ಲಾ ಗೊ೦ದಲಗಳು ಖಾಸಗಿ ಶಾಲೆಗಳಿಗೆ ಮಾತ್ರ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸ೦ಬಳವನ್ನು ಸರ್ಕಾರ ಕೊಡುತ್ತಿದೆ. ಯಾರ ಹಣದಿ೦ದ ,  ತೆರಿಗೆಯ ಹಣದಿ೦ದ. ತೆರಿಗೆ ಯಾರು ನೀಡುತ್ತಿದ್ದಾರೆ ಇದೇ ಸಾರ್ವಜನಿಕರು.

ಈ ಎಲ್ಲಾ ವಿಷಯಗಳನ್ನು ಸರ್ಕಾರ ಈಗಲಾದರೂ ಪರಿಗಣಿಸಿ ಶುಲ್ಕ ಕಡಿತದ ಆದೇಶವನ್ನು ಸೂಕ್ತವಾಗಿ ಮಾರ್ಪಡಿಸಬೇಕು ಇಲ್ಲವೇ ಸೂಕ್ತ ಸಹಾಯವನ್ನು ಖಾಸಗಿ ಶಿಕ್ಷಣ ಸ೦ಸ್ಥೆಗಳಿಗೆ ನೀಡಬೇಕು. ಸರ್ಕಾರ ಹೀಗೆ ಯೋಚಿಸಲು ಮನಸ್ಸು ಮಾಡೀತೆ? ಕಾದು ನೋಡಬೇಕು.

ಕೆ.ಎಸ್.ಜಗನ್ನಾಥ ಗುಪ್ತ.

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.