ಕ್ರಿಪ್ಟೋ ಕೋಟ್ಯಧಿಪತಿಯ ಶವ ಸೂಟ್ಕೇಸಲ್ಲಿ ಪತ್ತೆ
Team Udayavani, Jul 29, 2023, 7:05 AM IST
ಬ್ಯೂನಸ್ಐರಿಸ್: ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದ ಅರ್ಜಿಂಟೀನಾ ಮೂಲದ ಕ್ರಿಪ್ಟೋ ಕರೆನ್ಸಿ ಇನ್ಫ್ಲೂಯೆನ್ಸರ್ ಫರ್ನಾಂಡೋ ಪರೇಜ್ ಅಲ್ಗಾಬಾ ಅವರ ಶವ ಪತ್ತೆಯಾಗಿದ್ದು, ಸೂಟ್ಕೇಸ್ ಒಂದರಲ್ಲಿ ಅವರ ದೇಹವನ್ನು ತುಂಡರಿಸಿ ದುಷ್ಕರ್ಮಿಗಳು ತುಂಬಿಟ್ಟಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ಬ್ಯೂನಸ್ಐರಿಸ್ನ ಬಳಿ ರಸ್ತೆಯೊಂದರಲ್ಲಿ ಕೆಂಪು ಸೂಟ್ಕೇಸ್ನಲ್ಲಿ ತುಂಡರಿಸಿದ ದೇಹವನ್ನು ತುಂಬಿಟ್ಟಿದ್ದು ಪತ್ತೆಯಾಗಿದೆ. ಆಟವಾಡುವಾಗ ಮಕ್ಕಳು ಅದನ್ನು ಗಮನಿಸಿದ್ದಾರೆ. ನಂತರ ಮಕ್ಕಳ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಶವ ಫರ್ನಾಂಡೋ ಅವರದ್ದೇ ಎಂಬುದು ತಿಳಿದುಬಂದಿದೆ.
ಶವ ಪರೀಕ್ಷೆಯ ವರದಿಗಳ ಪ್ರಕಾರ, ಫರ್ನಾಂಡೋ ಅವರನ್ನು ಗುಂಡಿಕ್ಕಿ ಹತ್ಯೆಗೈದು ಬಳಿಕ ಅವರ ದೇಹವನ್ನು ತುಂಡರಿಸಲಾಗಿದೆ ಎನ್ನಲಾಗಿದೆ. ಕ್ರಿಪ್ಟೋ ಕರೆನ್ಸಿ ಮಾರಾಟಗಾರರಾಗಿದ್ದ ಫರ್ನಾಂಡೋ ಯೂಟ್ಯೂಬ್ನಲ್ಲಿ ಅಪಾರ ಫಾಲೋವರ್ಸ್ಗಳನ್ನು ಹೊಂದಿದ್ದರು. ತಮ್ಮ ಆಸ್ತಿ, ಸಂಪತ್ತು, ಐಷಾರಾಮಿ ಜೀವನವನ್ನು ತೋರಿಸಿಕೊಂಡಿದ್ದರು. ಬಹುಶಃ ಅದೇ ಕಾರಣಗಳಿಗಾಗೇ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ, ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ