Piracy: ಸಿನೆಮಾ ಪೈರಸಿಗೆ ಕಡಿವಾಣ


Team Udayavani, Jul 28, 2023, 7:27 AM IST

CINEMA CAMERA

ಕೇಂದ್ರ ಸರಕಾರ 10 ವರ್ಷಗಳಷುc ಹಳೆಯ ಸಿನೆಮಾಟೋಗ್ರಫಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಸಿನೆಮಾಗಳಿಗೆ ಹೊಸ ರೀತಿಯ ರೇಟಿಂಗ್‌ ಮತ್ತು ಪೈರಸಿಗೆ ಕಡಿವಾಣ ಹಾಕಲು ಮುಂದಾಗಿದೆ. ಭಾರತೀಯ ಸಿನೆಮಾ ರಂಗಕ್ಕೆ ಪೈರಸಿಯದ್ದೇ ಹಾವಳಿ. ಪೈರಸಿವೆಬ್‌ಸೈಟ್‌ಗಳನ್ನು ನಿಷೇಧಿಸಿದ್ದರೂ, ಬೇರೆ ಬೇರೆ ಮೂಲಗಳಿಂದ ಸಿನೆಮಾಗಳನ್ನು ಕದಿಯುವ ಕುತ್ಸಿತತನ ಮುಂದುವರಿದೇ ಇದೆ. ಹೀಗಾಗಿ ಕೇಂದ್ರ ಸರಕಾರ ಕಠಿನ ಕ್ರಮಗಳನ್ನು ಒಳಗೊಂಡ ತಿದ್ದುಪಡಿ ಸೇರಿಸಲಾಗಿದೆ.

ಬದಲಾವಣೆಗೆ ಏನು ಕಾರಣ?

ಹೊಸ ಸಿನೆಮಾಟೋಗ್ರಫಿ ತಿದ್ದುಪಡಿ ಕಾಯ್ದೆಯನ್ನು 2019ರಲ್ಲಿ ರಾಜ್ಯಸಭೆಯಲ್ಲಿ ಮೊದಲಿಗೆ ಮಂಡಿಸಲಾಯಿತು. ಚಲನಚಿತ್ರಗಳು, ಟಿವಿ ಶೋಗಳು ಮತ್ತು ವೆಬ್‌ಸರಣಿಗಳ ಮೇಲೆ ಪೈರಸಿ ಶಾಪ ಬಿದ್ದಿದ್ದು, ಇದರಿಂದ ಕಾಪಾಡುವಂತೆ ಸಿನೆಮಾ ಮಂದಿ ಕೇಂದ್ರ ಸರಕಾರದ ಮೊರೆ ಹೋಗಿದ್ದರು.

ಆಗ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಹಿಂದಿನ ಸಿನೆಮಾಟೋಗ್ರಫಿ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿತ್ತು. ಇದಾದ ಅನಂತರ ದೇಶಾದ್ಯಂತ ನಿರ್ಮಾಪಕರ ಸಂಘಗಳು ಮತ್ತು ಚಲನಚಿತ್ರ ತಯಾರಕರ ಜತೆ 15ಕ್ಕೂ ಹೆಚ್ಚು ಬಾರಿ ಸಭೆ ನಡೆಸಿ ಅವರ ಕಡೆಯಿಂದ ಬಂದ ಸಲಹೆಗಳನ್ನು ಆಧರಿಸಿ ಈಗ ಸಿನೆಮಾಟೋಗ್ರಫಿ ತಿದ್ದುಪಡಿ ಕಾಯ್ದೆ ರೂಪಿಸಲಾಗಿದೆ. ಅಲ್ಲದೆ ಪೈರಸಿಯಿಂದ ವರ್ಷಕ್ಕೆ ಭಾರತೀಯ ಚಲನಚಿತ್ರರಂಗ 20 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಮಾಡಿಕೊಳ್ಳುತ್ತಿದೆ.

ಟಿವಿಗೆ ಪ್ರತ್ಯೇಕ ರೇಟಿಂಗ್‌

“ಎ’ ಮತ್ತು “ಎಸ್‌’ ರೇಟಿಂಗ್‌ನ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವಾಗ ಬೇರೆಯದ್ದೇ ಮಾರ್ಗಸೂಚಿಗಳಿವೆ. ಅಂದರೆ ಈ ಚಲನಚಿತ್ರಗಳನ್ನು ಪ್ರಸಾರ ಮಾಡುವ ಮುನ್ನ, ಕೆಲವೊಂದು ದೃಶ್ಯಾವಳಿಗಳಿಗೆ ಕತ್ತರಿ ಹಾಕಿ ಪ್ರಸಾರ ಮಾಡಬೇಕಾಗುತ್ತದೆ. ಒಮ್ಮೆ ಚಲನಚಿತ್ರಕ್ಕೆ ನೀಡಲಾದ ಪ್ರಮಾಣಪತ್ರವು 10 ವರ್ಷಗಳ ವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೆ ಪ್ರಮಾಣ ಪತ್ರ ವಿಚಾರದಲ್ಲಿ ಸೆನ್ಸಾರ್‌ ಮಂಡಳಿ ಕಾರ್ಯವಿಧಾನ ಮತ್ತು ಕೇಂದ್ರ ಸರಕಾರದ ಅಧಿಕಾರದ ಬಗ್ಗೆಯೂ ಕೆಲವೊಂದು ಬದಲಾವಣೆಗಳನ್ನು ತರಲಾಗಿದೆ.

ಪೈರಸಿ ನಿಯಂತ್ರಣ

ಈ ತಿದ್ದುಪಡಿ ಕಾಯ್ದೆಯ ಪ್ರಮುಖ ಉದ್ದೇಶವೇ ಪೈರಸಿ ನಿಯಂತ್ರಣ ತರುವಂಥದ್ದಾಗಿದೆ. ಅಂದರೆ ಅಕ್ರಮವಾಗಿ ಸಿನೆಮಾವನ್ನು ರೆಕಾರ್ಡಿಂಗ್‌ ಮಾಡುವುದು ಅಥವಾ ಅಕ್ರಮವಾಗಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ. ಅಂದರೆ ಅಕ್ರಮವಾಗಿ ಚಲನಚಿತ್ರವೊಂದನ್ನು ರೆಕಾರ್ಡಿಂಗ್‌ ಮಾಡುವುದು ಅಪರಾಧ. ಅಲ್ಲದೆ ಮಾಲಕರ ಒಪ್ಪಿಗೆ ಇಲ್ಲದೇ ಸಿನೆಮಾದ ನಕಲು ಕಾಪಿಯನ್ನು ಪ್ರಸಾರ ಮಾಡುವುದೂ ಅಪರಾಧ. ಈ ಕೆಲಸಗಳಿಗೆ ಕಾಪಿರೈಟ್‌ ಕಾಯ್ದೆಯನ್ನು ಬಳಸಿಕೊಂಡು ಶಿಕ್ಷೆ ಪ್ರಮಾಣ ನಿರ್ಧಾರ ಮಾಡಲಾಗಿದೆ.  ಹೀಗಾಗಿ ರೆಕಾರ್ಡಿಂಗ್‌ ಮಾಡಿದವರು ಅಥವಾ ಅಕ್ರಮವಾಗಿ ಚಿತ್ರವನ್ನು ಪ್ರಸಾರ ಮಾಡಿದಲ್ಲಿ 3 ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ 10 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ. ಕೆಲವೊಮ್ಮೆ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸಲೂ ಅವಕಾಶ ನೀಡಲಾಗಿದೆ. ಶಿಕ್ಷೆಗೆ ಮಿತಿಯನ್ನೂ ನೀಡಲಾಗಿದೆ. ಕನಿಷ್ಠ 3 ತಿಂಗಳು ಮತ್ತು ಕನಿಷ್ಠ 3 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಕೆಲವು ಪ್ರಸಂಗಗಳಲ್ಲಿ ಸಿನೆಮಾದ ನಿರ್ಮಾಣಕ್ಕೆ ಆಗಿರುವ ವೆಚ್ಚದ ಶೇ.5ರಷ್ಟನ್ನು ದಂಡವಾಗಿ ಪಡೆಯಬಹುದಾಗಿದೆ.

ಭಾರತದಲ್ಲಿ ಪೈರಸಿ ಪಿಡುಗು

ಭಾರತದಲ್ಲಿ ಈಗಲೂ ಪೈರಸಿ ಪಿಡುಗು ಚಿತ್ರರಂಗವನ್ನು ಕಾಡುತ್ತಿದೆ. ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳೇ ಕೆಲವು ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗುತ್ತವೆ. ಕೆಲವೊಂದು ವೆಬ್‌ಸೈಟ್‌ಗಳು ಚಲನಚಿತ್ರಗಳನ್ನು ಆನ್‌ಲೈನ್‌ ಮೂಲಕವೂ ಸ್ಟ್ರೀಮಿಂಗ್‌ ಮಾಡುತ್ತಿದ್ದಾರೆ.  2

022ರ ದತ್ತಾಂಶಗಳ ಪ್ರಕಾರ, ಇಡೀ ಜಗತ್ತಿನಲ್ಲಿ ಪೈರಸಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವವರಲ್ಲಿ ಭಾರತೀಯರಿಗೆ ಮೂರನೇ ಸ್ಥಾನ. ಅಂದರೆ 7 ಶತಕೋಟಿ ಬಾರಿ ಇಂಥ ವೆಬ್‌ಸೈಟ್‌ಗಳಿಗೆ ಭಾರತೀಯರು ಭೇಟಿ ನೀಡಿದ್ದಾರೆ. ಅಲ್ಲದೆ ವಾಟ್‌ಆ್ಯಪ್‌ ಮತ್ತು ಟೆಲಿಗ್ರಾಂನಂಥ ಸಾಮಾಜಿಕ ಜಾಲತಾಣಗಳಲ್ಲೂ ಸಿನೆಮಾಗಳು ಸಿಗುತ್ತಿವೆ. ವರದಿಯೊಂದರ ಪ್ರಕಾರ ಅಕ್ರಮವಾಗಿ ಆನ್‌ಲೈನ್‌ನಲ್ಲಿ ವೀಕ್ಷಣೆ ಮಾಡುವುದರಲ್ಲಿ ಟಿವಿ ಕಂಟೆಂಟ್‌ಗಳು ಮೊದಲ ಸ್ಥಾನ ಪಡೆದಿವೆ. ಇವೇ ಶೇ.46.6ರಷ್ಟು ಸ್ಥಾನ ಪಡೆದಿವೆ. ಎರಡನೇ ಸ್ಥಾನ ಪುಸ್ತಕಗಳ ಡೌನ್‌ಲೋಡ್‌. ಶೇ.27.8ರಷ್ಟು ಮಂದಿ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ.

ಚಲನಚಿತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಖ್ಯೆ ಶೇ.12.4. ಸಂಗೀತವನ್ನು ಡೌನ್‌ಲೋಡ್‌ ಮಾಡಿಕೊಳ್ಳುವವರು ಶೇ.7 ಮತ್ತು ಸಾಫ್ಟ್ವೇರ್‌ ಡೌನ್‌ಲೋಡ್‌ ಮಾಡಿಕೊಳ್ಳುವವರು ಶೇ.6ರಷ್ಟಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಬಾರಿ ಡೌನ್‌ಲೋಡ್‌ ಆದ ಹಾಲಿವುಡ್‌ ಸಿನೆಮಾ ಸ್ಪೈಡರ್‌ ಮ್ಯಾನ್‌-ನೋ ವೇಟು ಹೋಮ್‌. ಭಾರತೀಯ ಸಿನೆಮಾಗಳೆಂದರೆ ಕೆಜಿಎಫ್-2 ಮತ್ತು ಆರ್‌ಆರ್‌ಆರ್‌.

ರೇಟಿಂಗ್‌ ಬದಲಾವಣೆ

ಒಮ್ಮೆ ಈ ಕಾಯ್ದೆ ಕಾನೂನಾಗಿ ಬಂದ ಬಳಿಕ ಸಿನೆಮಾಗಳ ರೇಟಿಂಗ್‌ ಕೂಡ ಬದಲಾಗಲಿದೆ. ಅಂದರೆ ಸದ್ಯ “ಎ’, “ಯು’ ಮತ್ತು “ಯುಎ’ ಎಂಬ ವರ್ಗಗಳಿವೆ. ಇದಕ್ಕೆ ವಯೋಮಿತಿಯನ್ನೂ ನಿಗದಿ ಮಾಡಲಾಗಿದೆ.

“ಯು” ಯಾವುದೇ ನಿರ್ಬಂಧ ಇಲ್ಲದೇ ಇರುವುದು

“ಯುಎ'(12 ವರ್ಷ ಮೇಲ್ಪಟ್ಟು)- ನಿರ್ಬಂಧ ಇಲ್ಲದಿರುವುದರ ಜತೆಗೆ ಪೋಷಕರ ಸಲಹೆ ಮೇರೆಗೆ ನೋಡಬಹುದಾದ್ದು.

“ಎ'(18 ವರ್ಷಕ್ಕಿಂತ ಮೇಲ್ಪಟ್ಟು)- ಕೇವಲ ವಯಸ್ಕರಷ್ಟೇ ನೋಡಬಹುದಾದದ್ದು.

“ಎಸ್‌’- ನಿಗದಿತ ವರ್ಗ ಅಥವಾ ವೃತ್ತಿಪರರು ನೋಡಬಹುದಾಗಿರುವಂಥದ್ದು.

ಈ ವಿಧೇಯಕದಲ್ಲಿ “ಯುಎ’ನೊಳಗೆ ಉಪ ವರ್ಗಗಳನ್ನು ಮಾಡಲಾಗಿದೆ. ಅವುಗಳೆಂದರೆ,  “ಯುಎ'(7+) l “ಯುಎ'(13+)l “ಯುಎ'(16+) – ಈ ಗುಂಪಿಗೆ ಸೇರಿದ ಚಲನಚಿತ್ರಗಳನ್ನು ಕೇವಲ ಪೋಷಕರ ಮಾರ್ಗದರ್ಶನದಂತೆಯೇ ನೋಡಬೇಕಾಗಿದೆ. ಪೋಷಕರ ಹೊರತಾಗಿದೆ ಬೇರೆಯವರ ಮಾರ್ಗದರ್ಶನ ತೆಗೆದುಕೊಳ್ಳುವಂತಿಲ್ಲ.

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.