
Chat GPT: ಚಾಟ್ ಜಿಪಿಟಿ ಮೇಲೆ ಸೈಬರ್ ದಾಳಿ
Team Udayavani, Nov 11, 2023, 11:12 PM IST

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜನಪ್ರಿಯಗೊಂಡಿರುವ ಚಾಟ್ ಜಿಪಿಟಿ ಮೇಲೆ ಸೈಬರ್ ದಾಳಿ ನಡೆಸಲಾಗಿದೆ. ಪ್ಯಾಲೆಸ್ತೀನ್ ಪರವಾಗಿ ಅದು ಕೆಲಸ ಮಾಡುತ್ತಿತ್ತು ಎಂಬ ಆರೋಪಗಳ ನಡುವೇ ಈ ಬೆಳವಣಿಗೆ ಉಂಟಾಗಿದೆ.
ಸುಡಾನ್‌ನಲ್ಲಿ ಇರುವ ಅನಾಮ ಧೇಯ ಸಂಘಟನೆಗಳು ಈ ಕೃತ್ಯವೆಸಗಿರುವ ಸಾಧ್ಯತೆ ಇದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿರುವ ಸಾಧ್ಯತೆಯೂ ಇದೆ ಎಂದು ಓಪನ್ ಎಐ ಕಂಪೆನಿಯ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಹೇಳಿದ್ದಾರೆ. ಸೈಬರ್ ದಾಳಿ ನಡೆದ ಹಿನ್ನೆಲೆಯಲ್ಲಿ ಚಾಟ್ ಜಿಪಿಟಿಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
