
Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ
ಅತ್ಯುತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ
Team Udayavani, May 28, 2023, 8:08 AM IST

ದಾಂಡೇಲಿ: ಗೋವಾದ ಪಣಜಿಯಲ್ಲಿ ಇತ್ತೀಚಿಗೆ ನಡೆದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ
ನಗರದ ಪ್ರಶಾಂತ್ ಕ್ರಿಯೇಷನ್ಸ್ ನಿರ್ಮಾಣದ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಅತ್ಯುತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ ಎನ್ನುವ ಪ್ರಶಸ್ತಿ ನೀಡಲಾಗಿದೆ.
ಅಂಬಿಕಾನಗರದ ಶಿವಾಜಿ ಡೋಯಿಪೋಡೆ ಅವರ ನಿರ್ದೇಶನದ ಈ ಕಿರುಚಿತ್ರದಲ್ಲಿ ನಗರದ ಮಾರುತಿ ನಗರದ
ಪ್ರಶಾಂತ ಕಾಂಬಳೆ, ಅಂಬಿಕಾನಗರದ ಸಾವಿತ್ರಿ ಯಡಗೆ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ಈ ಕಿರು ಚಿತ್ರವನ್ನುಗೋವಾದ ಪಣಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗೋವಾದ ಸಮಾಜ ಕಲ್ಯಾಣ ಇಲಾಖೆ ಸಚಿವ ಸುಭಾಷ್ ಫಾಲ್ ದೇಸಾಯಿ, ಗೋವಾದ ಮಾಜಿ ಮೇಯರ್ ಉದಯ ಮಡಿಕೇರ,ಕನ್ನಡ ಚಿತ್ರ ನಟಿ ಅನು ಪ್ರಭಾಕರ ಮುಖರ್ಜಿ, ಸೆವೆನ್ ಕ್ಲಿಕ್ ಮಿಡಿಯಾದ ಗುರುದೀಪ್ ಸಿಂಗ್, ಲಯನ್ಸ್ ಜಿಲ್ಲಾ ಗವರ್ನರ್ ಸುಗ್ಗಲ ಯಲ್ಮಲಿ, ವಿತರಕರ ರಾಜೇಶ್ ,ಮುಂಬೈನ ಜೈ ಎಂಟರ್‌ಟೈನ್‌ಮೆಂಟ್ ವರ್ಲ್ಡ್ ನ ಜಯಪ್ರಭು ಲಿಂಗಾಯತ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

Sirsi: ರಾಜ್ಯದಲ್ಲಿರುವುದು ಕನ್ನಡಿಗರ ಸರ್ಕಾರನಾ ? ತಮಿಳುನಾಡು ಸರ್ಕಾರನಾ ?: ರಮೇಶ ಬೇಕ್ರಿ

Karwar; ಶೀಘ್ರದಲ್ಲೇ ಕಾರವಾರ ಬಳಿ ಹೆದ್ದಾರಿ ಟನಲ್ ಪುನರಾರಂಭ ಸಾಧ್ಯತೆ

Karwar; ಕಾಂಗ್ರೆಸ್ ಬಡವರ ಮತ್ತು ರೈತರ ಪರ ನಿಲುವು ಹೊಂದಿದೆ: ಸಚಿವ ಮಂಕಾಳು ವೈದ್ಯ

Yakshagana: ಸಾಲಿಗ್ರಾಮ ಮೇಳಕ್ಕೆ ಅತಿಥಿ ಭಾಗವತ: ಹಿಲ್ಲೂರು ಸ್ಪಷ್ಟನೆ