Pakistan: ಪಾಕ್ ಗುಪ್ತಚರ ಸಂಸ್ಥೆಗೆ ದಾವೂದ್ ಸಾರಥ್ಯ?
Team Udayavani, Oct 1, 2023, 10:52 PM IST
ಇಸ್ಲಾಮಾಬಾದ್: ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹೆಚ್ಚುವರಿ ಮಹಾ ನಿರ್ದೇಶಕನನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಹಲವಾರು ವರ್ಷಗಳಿಂದ ಪಾಕ್ ಪರವಾಗಿ ದಾವೂದ್ ಬೇಹುಗಾರಿಕೆ ಮಾಡಿ ದ್ದಕ್ಕೆ ಪ್ರತಿಫಲ ವಾಗಿ ಆತನಿಗೆ ಈ ಹುದ್ದೆ ನೀಡಲಾಗಿದೆ ಎಂಬು ದಾಗಿಯೂ ತಿಳಿದು ಬಂದಿದೆ.
1993 ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿದ್ದ ದಾವೂದ್ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರನೆಂದು ಘೋಷಿಸಿದ್ದು, ಭಾರತೀಯ ತನಿಖಾ ಸಂಸ್ಥೆಗಳು ಕೂಡ ಆತನನ್ನು ಹುಡುಕುತ್ತಿವೆ. ಈ ನಡುವೆಯೇ ಆತ ಪಾಕ್ ಬೇಹುಗಾರಿಕೆ ಸಂಸ್ಥೆಗೆ ಮಹಾನಿರ್ದೇಶ ಕನಾಗಿರುವ ಸುದ್ದಿ ವ್ಯಾಪಿಸಿದೆ.
ಉಗ್ರ ಹಫೀಜ್ ಆಪ್ತ ಹತ್ಯೆ
26/11ರ ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸಯೀದ್ನ ಆಪ್ತ ಮುಫ್ತಿ ಖೈಸರ್ ಫಾರೂಕ್ ಎಂಬಾತನನ್ನು ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆಗೈಯ್ಯಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಸಾಮನಾಬಾದ್ ಬಳಿಯ ಧಾರ್ಮಿಕ ಸಂಸ್ಥೆಯೊಂದರ ಸಮೀಪ ಗುಂಡಿಟ್ಟು ಖೈಸರ್ನನ್ನು ಹತ್ಯೆಗೈದಿದ್ದು, ಘಟನೆಯಲ್ಲಿ 10 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ