Udayavni Special

ಜ್ವಲಂತ ಸಮಸ್ಯೆಗಳನ್ನು ಜೀವಂತ ಇಟ್ಟ ಕಾಂಗ್ರೆಸ್‌ : ಡಿಸಿಎಂ ಕಿಡಿ

Team Udayavani, Jun 25, 2021, 1:22 PM IST

sದ್ಗಹಗ್ದ್ಗಹಗ್ದ್ಗಹಗ್

ಬೆಂಗಳೂರು/ಬಳ್ಳಾರಿ: ದೇಶದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷವೂ ಎಲ್ಲ ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡಿತೇ ವಿನಾ ಅವುಗಳಿಗೆ ಪರಿಹಾರ ಕಂಡುಕೊಳ್ಳಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಟೀಕಿಸಿದರು.

ಬಳ್ಳಾರಿ ಬಿಜೆಪಿ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ʼಈ-ಪ್ರಶಿಕ್ಷಣ ವರ್ಗʼ ಕಾರ್ಯಕ್ರಮದಲ್ಲಿ ʼಮೋದಿ ಸರಕಾರದ 7 ವರ್ಷಗಳ ಸಾಧನೆʼ ವಿಷಯದ ಬಗ್ಗೆ ವರ್ಚುವಲ್ ಮೂಲಕ ಮಾತನಾಡಿದ ಅವರು; ಕಾಂಗ್ರೆಸ್‌ ತನ್ನ ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಸಮಸ್ಯೆಗಳನ್ನು ನಿರಂತರವಾಗಿ ಬದುಕಿರುವಂತೆ ನೋಡಿಕೊಳ್ಳುತ್ತಿತ್ತು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಅಂಥ ಸಮಸ್ಯೆಗಳಿಗೆ ಚರಮಗೀತೆ ಹಾಡುತ್ತಾ ಬರುತ್ತಿದೆ ಎಂದರು.

ಕಾಶ್ಮೀರ, ರಾಮಮಂದಿರ, ವಲಸಿಗರ ದುಃಸ್ಥಿತಿ, ಉದ್ಯೋಗ, ಕೈಗಾರಿಕೆ, ಆರ್ಥಿಕತೆ, ಮೂಲಸೌಕರ್ಯ, ತೆರಿಗೆ, ಕಪ್ಪುಹಣ ಇತ್ಯಾದಿ ಅಂಶಗಳ ಬಗ್ಗೆ ಕಾಂಗ್ರೆಸ್ ಅದೆಷ್ಟು ಉಪೇಕ್ಷೆ ಮಾಡಿತ್ತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇತಿಹಾಸವೇ ಎಲ್ಲ ಸತ್ಯಗಳನ್ನು ಬಿಚ್ಚಿಡುತ್ತಿದೆ. ಆದರೆ, ಬಿಜೆಪಿ ಸರಕಾರ ಈ ಎಲ್ಲ ಸಮಸ್ಯೆಗಳಿಂದ ದೇಶವನ್ನು ಹೊರ ತಂದಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಒಂದು ಭಾರತ- ಎರಡು ರಾಷ್ಟ್ರ ಎನ್ನುವುದು ಕಾಂಗ್ರೆಸ್‌ ನೀತಿ:

ಒಂದು ಭಾರತ- ಎರಡು ರಾಷ್ಟ್ರ ಎನ್ನುವುದು ಕಾಂಗ್ರೆಸ್‌ ನೀತಿ. ಒಂದೇ ಭಾರತ-ಒಂದೇ ದೇಶ ಎನ್ನುವುದು ಬಿಜೆಪಿಯ ನೀತಿ. ಈ ಕಾರಣಕ್ಕಾಗಿಯೇ ಜಮ್ಮು ಮತ್ತು ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ತೆಗೆಯಲಾಯಿತು. ಈಗ ಕಾಶ್ಮೀರವೂ ಭಾರತದ ಅಂತರ್ಭಾಗ. ಕಾಂಗ್ರೆಸ್‌ಗೆ ಇಂಥ ಇಚ್ಛಾಶಕ್ತಿ ಇರಲಿಲ್ಲ ಎಂದು ಅವರು ಕಿಡಿಕಾರಿದರು.

ಈಶಾನ್ಯ ಭಾರತದಲ್ಲೂ ಸಮಸ್ಯೆಗಳ ಸರಮಾಲೆಯೇ ಇತ್ತು. ಬಾಂಗ್ಲಾ ಗಡಿಯಲ್ಲಿ ಒಳನುಸುಳುವಿಕೆ ಮಿತಿ ಮೀರಿತ್ತು. ಈಗ ಎಲ್ಲವೂ ನಿಂತಿದೆ. ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗುವ ಅಂಶಗಳನ್ನು ಇಟುಕೊಂಡೇ ಕಾಂಗ್ರೆಸ್‌ ರಾಜಕಾರಣ ಮಾಡುತ್ತಾ ಬಂದಿದೆ. ಇಂಥ ರಾಜಕೀಯ ಪ್ರವೃತ್ತಿಗೆ ಮೋದಿ ಅವರು ಇತಿಶ್ರೀ ಹಾಡುತ್ತಿದ್ದಾರೆ. ಇಷ್ಟು ಕಾಶ್ಮೀರ ಒಂದು ವಿಷಯವನ್ನಿಟ್ಟುಕೊಂಡು ಭಾರತದ ಮೇಲೆ ವಾಗ್ದಾಳಿ ನಡೆಸಲಾಗುತ್ತಿತ್ತು. ಈಗ ಜಗತ್ತಿಗೆ ಸತ್ಯದ ಅರಿವಾಗಿದೆ. ಆ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲಬೇಕು ಎಂದು ಡಿಸಿಎಂ ಹೇಳಿದರು.

ಕೋವಿಡ್‌ನಿಂದಲೇ ಸ್ವಾವಲಂಬನೆಯತ್ತ:

ಕೋವಿಡ್‌ ಸಂಕಷ್ಟ ಭಾರತಕ್ಕೆ ಬಂದಾಗ ಅದನ್ನೇ ಅವಕಾಶ ಮಾಡಿಕೊಂಡ ಮೋದಿ ಅವರು ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿ ಕೈಗಾರಿಕೆ, ಉತ್ಪಾದನೆ, ಉದ್ಯೋಗ ಸೃಷ್ಠಿಗೆ ಉತ್ತೇಜನ ನೀಡಿದರು. ಕೇವಲ ಒಂದು ಪಿಪಿಇ ಕಿಟ್‌, ಮಾತ್ರೆ, ಔಷಧಿ, ಸ್ಯಾನಿಟೈಸರ್‌ ವಿಷಯದಲ್ಲಿ ಪರ ದೇಶಗಳ ಮೇಲೆ ಅವಲಂಭಿತವಾಗುತ್ತಿದ್ದ ಭಾರತವು ಕೇವಲ ಒಂದೂವರೆ ವರ್ಷದಲ್ಲೇ ಸಂಪೂರ್ಣ ಸ್ವಾವಲಂಭನೆ ಸಾಧಿಸಿತು. ಲಸಿಕೆ ತಯಾರಿಕೆಯಲ್ಲಿ ಜಗತ್ತಿನ ಅಗ್ರಮಾನ್ಯ ದೇಶವಾಗಿ ಹೊರಹೊಮ್ಮಿತು. ಇದು ಭಾರತದ ಸಾಧನೆ ಎಂದು ಡಿಸಿಎಂ ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಚನ್ನಬಸವ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ರಮೇಶ್, ಜಿಲ್ಲಾ ಪ್ರಭಾರಿ ಸಚ್ಚಿದಾನಂದ ಮುಂತಾದವರು ಭಾಗಿಯಾಗಿದ್ದರು.

ಟಾಪ್ ನ್ಯೂಸ್

dhghfhgfgffdf

ಡಬಲ್ ಇಂಜಿನ್ ಸರ್ಕಾರದಿಂದ  ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸ್ಸರ್

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸರ್

Cabinet expansion Of Karnataka

ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಉಡುಪಿ : ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 19 ಲ.ರೂ ವಂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dhghfhgfgffdf

ಡಬಲ್ ಇಂಜಿನ್ ಸರ್ಕಾರದಿಂದ  ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ

Hotel

ಹೋಟೆಲ್‌ ಉದ್ಯಮಕ್ಕೆ ಆರ್ಥಿಕ ಹೊಡೆತ

ದ್ವಿಚಕ್ರ ವಾಹ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ : 17 ಲಕ್ಷ ರೂ. ಮೌಲ್ಯದ ಸೊತ್ತು ವಶ

ದ್ವಿಚಕ್ರ ವಾಹ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ : 17 ಲಕ್ಷ ರೂ. ಮೌಲ್ಯದ ಸೊತ್ತು ವಶ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

wORK

ಆಸ್ಪತ್ರೆ ಸುತ್ತ ಕಾಮಗಾರಿ ಸದ್ದು

MUST WATCH

udayavani youtube

50000 ರೂಪಾಯಿ ಕೊಡಿ, JOB ಕೊಡ್ತಿನಿ?

udayavani youtube

ಆಕ್ಟಿಂಗ್ ಎಲ್ಲಾ ನಿನಗೆ ಯಾಕೆ ಬೇರೆ ಒಳ್ಳೆಯ ಕೆಲಸ ಮಾಡು ಅಂದಿದ್ರು : ರಾಕೇಶ್ ಪೂಜಾರಿ

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

udayavani youtube

ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕೋವಿಡ್ ಸೋಂಕಿನ ಪ್ರಮಾಣ

ಹೊಸ ಸೇರ್ಪಡೆ

heroic-stone

ದಿನ್ನೆ ಸೋಲೂರಲ್ಲಿ ಜೋಡಿ ವೀರಗಲ್ಲು ಪತ್ತೆ

dhghfhgfgffdf

ಡಬಲ್ ಇಂಜಿನ್ ಸರ್ಕಾರದಿಂದ  ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

Hotel

ಹೋಟೆಲ್‌ ಉದ್ಯಮಕ್ಕೆ ಆರ್ಥಿಕ ಹೊಡೆತ

ದ್ವಿಚಕ್ರ ವಾಹ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ : 17 ಲಕ್ಷ ರೂ. ಮೌಲ್ಯದ ಸೊತ್ತು ವಶ

ದ್ವಿಚಕ್ರ ವಾಹ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ : 17 ಲಕ್ಷ ರೂ. ಮೌಲ್ಯದ ಸೊತ್ತು ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.