2020ರ ರಜಾ ದಿನಗಳ ಘೋಷಣೆ

Team Udayavani, Nov 23, 2019, 3:07 AM IST

ಬೆಂಗಳೂರು: ರಾಜ್ಯ ಸರ್ಕಾರ 2020ನೇ ಸಾಲಿನ ಸರ್ಕಾರಿ ರಜಾ ದಿನಗಳನ್ನು ಘೋಷಣೆ ಮಾಡಿದ್ದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ 18 ಸಾರ್ವತ್ರಿಕ ರಜಾ ದಿನಗಳು ಹಾಗೂ 21 ಪರಿಮಿತ ರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಕೆಲವು ಸಾರ್ವತ್ರಿಕ ರಜಾ ದಿನಗಳು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಬರುವುದರಿಂದ ಪ್ರತ್ಯೇಕ ಸರ್ಕಾರಿ ರಜೆ ದಿನ ಪರಿಗಣನೆ ಮಾಡಲಾಗಿಲ್ಲ.

ಅಲ್ಲದೇ ಮುಸ್ಲಿಂ ಬಾಂಧವರಿಗೆ ಸರ್ಕಾರ ಘೋಷಣೆ ಮಾಡಿರುವ ದಿನ ಸಾರ್ವತ್ರಿಕ ರಜೆ ಬೀಳದೇ ಹೋದರೆ, ಆಗಿನ ಸಂದರ್ಭಕ್ಕೆ ಹೋಲಿಕೆ ಮಾಡಿ ರಜಾ ಬದಲಾವಣೆ ಮಾಡಿ ಘೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್‌ 3ರಂದು ನಡೆಯುವ ಕೈಲ್‌ ಮುಹೂರ್ತ, ಅಕ್ಟೋಬರ್‌ 17 ರಂದು ನಡೆಯುವ ತುಲಾ ಸಂಕ್ರಮಣ, ಡಿಸೆಂಬರ್‌ 1ರಂದು ನಡೆಯುವ ಹುತ್ತರಿ ಹಬ್ಬ ಆಚರಣೆಗೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯ ಆಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ರಜಾ ದಿನಗಳನ್ನು ಘೋಷಣೆ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳ ಜತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿನಗಳಿಗೆ ಮೀರದಂತೆ 2020ನೇ ಸಾಲಿನಲ್ಲಿ ಪೂರ್ವಾನುಮತಿ ಪಡೆದು ಪರಿಮಿತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಮಾತ್ರ ಅನುಮತಿ ನೀಡಬೇಕೆಂದು ಸೂಚಿಸಲಾಗಿದೆ.

ಏಪ್ರಿಲ್‌ 1 ರಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ವ್ಯವಹಾರದ ಮುಕ್ತಾಯದ ದಿನವಾಗಿರುವುದರಿಂದ ಅಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಪರಿಮಿತ ರಜಾದಿನಗಳಲ್ಲಿ ಏಪ್ರಿಲ್‌ 11ರಂದು ಬರುವ ಪವಿತ್ರ ಶನಿವಾರ ಎರಡನೇ ಶನಿವಾರ ಬಂದಿದ್ದು, ಮಾರ್ಚ್‌ 29ರಂದು ನಡೆಯುವ ದೇವರ ದಾಸಿಮಯ್ಯ ಜಯಂತಿ ಭಾನುವಾರ ಬಂದಿದ್ದು, ಸೆಪ್ಟೆಂಬರ್‌ 17 ರಂದು ನಡೆಯುವ ವಿಶ್ವಕರ್ಮ ಜಯಂತಿಯು ಮಹಾಲಯ ಅಮವಾಸ್ಯೆಯ ದಿನವೇ ಬಂದಿರುವುದರಿಂದ ಪ್ರತ್ಯೇಕ ರಜೆ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ರಜೆ ದಿನಗಳ ಹೊರತಾಗಿ ಕೆಲವು ಸಾರ್ವತ್ರಿಕ ರಜಾ ದಿನಗಳು ಭಾನುವಾರ ಬಂದಿರುವುದರಿಂದ ಪ್ರತ್ಯೇಕ ಸರ್ಕಾರಿ ರಜೆಗಳಾಗಿ ಪರಿಗಣಿಸಲಾಗಿಲ್ಲ.
26-1-20 ಗಣರಾಜ್ಯೋತ್ಸವ
26-04-20 ಬಸವ ಜಯಂತಿ, ಅಕ್ಷಯ ತೃತಿಯ
30-08-20 ಮೊಹರಂ ಕೊನೇ ದಿನ
25-10-20 ಆಯುಧ ಪೂಜೆ
1-11-20 ಕನ್ನಡ ರಾಜ್ಯೋತ್ಸವ
14-11-20 ನರಕ ಚತುರ್ದಶಿ (ಎರಡನೇ ಶನಿವಾರ)
22-08-20 ವರಸಿದ್ಧಿ ವಿನಾಯಕ ವೃತ (4ನೇ ಶನಿವಾರ)

2020 ಸಾರ್ವತ್ರಿಕ ರಜಾ ದಿನಗಳು
15-1-20 ಮಕರ ಸಂಕ್ರಾಂತಿ
21-2-20 ಮಹಾಶಿವರಾತ್ರಿ
25-3-20 ಯುಗಾದಿ ಹಬ್ಬ
6-4-20 ಮಹಾವೀರ ಜಯಂತಿ
10-4-20 ಗುಡ್‌ ಫ್ರೈಡೆ
14-4-20 ಡಾ.ಅಂಬೇಡ್ಕರ್‌ ಜಯಂತಿ
01-5-20 ಕಾರ್ಮಿಕ ದಿನಾಚರಣೆ
25-5-20 ಕುತುಬ್‌ ಎ. ರಂಜಾನ್‌
01-8-20 ಬಕ್ರೀದ್‌
15-8-20 ಸ್ವಾತಂತ್ರ್ಯ ದಿನಾಚರಣೆ
17-9-20 ಮಹಾಲಯ ಅಮಾವಾಸ್ಯೆ
02-10-20 ಗಾಂಧಿ ಜಯಂತಿ
26-10-20 ವಿಜಯ ದಶಮಿ
30-10-20 ಈದ್‌ ಮಿಲಾದ್‌
31-10-20 ಮಹರ್ಷಿ ವಾಲ್ಮೀಕಿ ಜಯಂತಿ
16-11-20 ಬಲಿಪಾಡ್ಯಮಿ ದೀಪಾವಳಿ
03-12-20 ಕನಕದಾಸ ಜಯಂತಿ
25-12-20 ಕ್ರಿಸ್‌ ಮಸ್‌

ಪರಿಮಿತ ರಜಾದಿನ
1-1-20 ಹೊಸ ವರ್ಷಾರಂಭ
3-2-20 ಮಾಧ್ವನವಮಿ
9-3-20 ಹೋಳಿ ಹಬ್ಬ
2-4-20 ರಾಮನವಮಿ
9-4-20 ಸಬ್‌ ಎ ಬರಾತ್‌
13-4-20 ಸೌರಮಾನ ಯುಗಾದಿ
28-4-20 ಶಂಕರಾಚಾರ್ಯ ಜಯಂತಿ
7-5-20 ಬುದ್ಧ ಪೂರ್ಣಿಮೆ
20-5-20 ಷಬ್‌ ಎ ಬಕ್ರೀದ್‌
22-5-20 ಜುಮಾತ್‌ ಉಲ್‌ ವಿದಾ
31-7-20 ವರಮಹಾಲಕ್ಷ್ಮೀ ಹಬ್ಬ
11-8-20 ಶ್ರೀಕೃಷ್ಣ ಜನ್ಮಾಷ್ಠಮಿ
21-8-20 ಸ್ವರ್ಣಗೌರಿ ವೃತ
31-8-20 ಓಣಂ ಹಬ್ಬ, ಅನಂತ ಪದ್ಮನಾಭ ವೃತ, ಋಗ್‌ ಉಪಾಕರ್ಮ
1-9-20 ಯಜುರ್‌ ಉಪಾಕರ್ಮ
2-9-20 ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ
8-9-20 ಕನ್ಯಾಕುಮಾರಿಯಮ್ಮ ಜಯಂತಿ
17-10-20 ತುಲಾ ಸಂಕ್ರಮಣ
30-11-20 ಗುರುನಾನಕ್‌ ಜಯಂತಿ
1-12-20 ಹುತ್ತರಿ ಹಬ್ಬ
24-12-20 ಕ್ರಿಸ್‌ಮಸ್‌ ಈವ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ