ವಿಭಿನ್ನ ಜಾನರ್ ಚಿತ್ರಗಳಲ್ಲಿ ಡಾಲಿ ಹವಾ!
Team Udayavani, Jun 23, 2020, 8:11 AM IST
“ಡಾಲಿ’ ಖ್ಯಾತಿಯ ನಟ ಧನಂಜಯ್ ಸದ್ಯದ ಮಟ್ಟಿಗೆ ಕನ್ನಡದ ಬೇಡಿಕೆ ನಟ. “ಟಗರು’ ಬಳಿಕ “ಡಾಲಿ’ ಎಂದೇ ಖ್ಯಾತಿಯಾದ ಧನಂಜಯ್, ಆ ಬಳಿಕ “ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕವೂ ಮಾಸ್ ಪ್ರಿಯರಿಗೆ ಮತ್ತಷ್ಟು ಹತ್ತಿರವಾದರು. ಸದ್ಯಕ್ಕೆ “ದುನಿಯಾ’ ವಿಜಯ್ ಅಭಿನಯದ “ಸಲಗ’ದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿರುವ ಧನಂಜಯ್, ಆ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
ಬೇಡಿಕೆ ಹೆಚ್ಚಿಸಿಕೊಂಡಿರುವ ಧನಂಜಯ್ ಅವರೀಗ ಮತ್ತೆರೆಡು ಸಿನಿಮಾಗಳನ್ನು ಒಪ್ಪಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ಒಂದು ಕಡೆ ವಿಲನ್ ಆಗಿ, ಇನ್ನೊಂದು ಕಡೆ ಹೀರೋ ಆಗಿಯೂ ಅವರು ಮಿಂಚುತ್ತಿದ್ದಾರೆ.ಈ ಎರಡು ಶೇಡ್ ಪಾತ್ರಗಳಲ್ಲೂ ಧನಂಜಯ್ ಮೆಚ್ಚುಗೆಯಾಗುತ್ತಿದ್ದಾರೆ. ಈಗ ಧನಂಜಯ್ ಕೈಯಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಆರು ಚಿತ್ರಗಳು ಕೈಯಲ್ಲಿವೆ ಎಂದರೆ ನಂಬಲೇಬೇಕು.
ಆ ಸಾಲಿಗೆ ಈಗ ಅವರು ಮತ್ತೆರೆಡು ಸಿನಮಾಗಳನ್ನೂ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಸಿನಿಮಾ ಪ್ರೀತಿ ಇಟ್ಟುಕೊಂಡಿರುವ “ತ್ರಿವಿಕ್ರಮ’ ಚಿತ್ರದ ನಿರ್ಮಾಪಕ ಸೋಮಣ್ಣ ಅವರು ಧನಂಜಯ್ ಅಭಿನಯದ ಎರಡೂ ಚಿತ್ರಕ್ಕೂ ಮುಂಗಡ ಹಣ ಕೊಟ್ಟು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ತಮ್ಮ ಗೌರಿ ಎಂಟರ್ಟೈನರ್ ಬ್ಯಾನರ್ನಲ್ಲಿ ಡಾಲಿಯ ಎರಡೂ ಸಿನಿಮಾಗಳು ನಿರ್ಮಾಣವಾಗುತ್ತಿವೆ.
ಮುಂದಿನ ವರ್ಷ ಈ ಚಿತ್ರಗಳು ಸೆಟ್ಟೇರಲಿವೆ. ವಿಶೇಷ ಅಂದರೆ, ಮುಂದಿನ ವರ್ಷವೇ ಈ ಎರಡು ಚಿತ್ರಗಳು ಒಮ್ಮೆಲೆ ಚಿತ್ರೀಕರಣಕ್ಕೆ ಅಣಿಯಾಗಲಿವೆ. ವಿಭಿನ್ನ ಜಾನರ್ನ ಈ ಎರಡು ಚಿತ್ರಗಳಿಗೆ ನಿರ್ದೇಶಕರು ಯಾರು ಅನ್ನುವುದನ್ನು ನಿರ್ಮಾಪಕರು ಸದ್ಯಕ್ಕೆ ಸಸ್ಪೆನ್ಸ್ ನಲ್ಲಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ