“ಸಾಮಾಜಿಕ ಜಾಲತಾಣ ನಿಗಾ ಘಟಕ’ ಬಲವರ್ಧನೆ : ಎಸ್‌ಪಿ ಡಾ| ವಿಕ್ರಂ ಅಮಟೆ

Team Udayavani, Feb 5, 2023, 6:45 AM IST

“ಸಾಮಾಜಿಕ ಜಾಲತಾಣ ನಿಗಾ ಘಟಕ’ ಬಲವರ್ಧನೆ : ಎಸ್‌ಪಿ ಡಾ| ವಿಕ್ರಂ ಅಮಟೆ

ಮಂಗಳೂರು: ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ಇಡುವುದಕ್ಕಾಗಿ ದ.ಕ. ಜಿಲ್ಲೆಯ ಉಪವಿಭಾಗಗಳಲ್ಲಿರುವ “ಸಾಮಾಜಿಕ ಜಾಲತಾಣ ನಿಗಾ ಘಟಕ’ಗಳನ್ನು ಬಲಪಡಿಸ ಲಾಗುವುದು ಎಂದು ನೂತನ ಎಸ್‌ಪಿ ಡಾ| ವಿಕ್ರಮ್‌ ಅಮಟೆ ತಿಳಿಸಿದ್ದಾರೆ.

ಶನಿವಾರ ಅವರು ಪತ್ರಕರ್ತ ರೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ, ದ್ವೇಷದ ಸಂದೇಶಗಳನ್ನು ಹರಡಿಸುವುದರಿಂದ ಸಮಾಜದ ಶಾಂತಿ ಕದಡುವ ಅಪಾಯ ವಿದೆ. ಹಾಗಾಗಿ ಇಂತಹ ಸಂದೇಶ ಹಾಕುವವರ ಮೇಲೆ ನಿಗಾ ಇಟ್ಟು ಎಫ್ಐಆರ್‌ ದಾಖಲಿಸಿಕೊಳ್ಳಲಾಗುವುದು. ಇಂಥವರ ಮೇಲೆ ನಿರಂತರ ನಿಗಾ ಇಡಲು ಜಿಲ್ಲಾ ಕೇಂದ್ರದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ (ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಪುತ್ತೂರು ಮತ್ತು ಬಂಟ್ವಾಳ ಉಪವಿಭಾಗಗಳ ಘಟಕ(ಸೆಲ್‌)ಗಳನ್ನು ಕೂಡ ಬಲಪಡಿಸ ಲಾಗುವುದು ಎಂದು ಡಾ| ವಿಕ್ರಮ್‌ ತಿಳಿಸಿದರು.

ಕಟ್ಟುನಿಟ್ಟಿನ ನಿಗಾ
ರೌಡಿಶೀಟರ್‌ಗಳು, ಜೈಲಿನಿಂದ ಬಿಡುಗಡೆಯಾದವರು, ಅಪರಾಧ ಹಿನ್ನೆಲೆಯಲ್ಲಿರುವವರು, ವದಂತಿ ಗಳನ್ನು ಹಬ್ಬಿಸುವವರು ಮೊದಲಾದ ಸಮಾಜ ಘಾತುಕರ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗುವುದು. ಸದ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾ ಗುವುದು. ಸಂಘಟಿತ ಅಪರಾಧಗಳ ತಡೆಗೂ ವಿಶೇಷ ಗಮನ ನೀಡಲಾಗುವುದು. ಸಾರ್ವಜನಿಕರು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುವುದು ಎಂದು ಎಸ್‌ಪಿ ಡಾ| ವಿಕ್ರಮ್‌ ತಿಳಿಸಿದರು.

ಗಡಿಭಾಗದಲ್ಲಿ ಸಿಸಿ ಕೆಮರಾ: ಕೇರಳ-ಕರ್ನಾಟಕ ಗಡಿ ಭಾಗದ ರಸ್ತೆಗಳಲ್ಲಿ ಹೆಚ್ಚಿನ ನಿಗಾ ಇಡುವುದಕ್ಕಾಗಿ ಹೆಚ್ಚುವರಿಯಾಗಿ ಸಿಸಿ ಕೆಮರಾ ಅಥವಾ ಇನ್ನಿತರ ಕ್ರಮಗಳ ಅಗತ್ಯವಿದ್ದರೆ ಜಿಲ್ಲಾಧಿಕಾರಿ ಯವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಅಂತಾರಾಜ್ಯ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಈಗಾಗಲೇ ಇರುವ ಸಿಸಿ ಕೆಮರಾಗಳ ಸ್ಥಿತಿಗತಿ ಪರಿಶೀಲನೆ ನಡೆಸಲಾಗುವುದು ಎಂದು ಡಾ| ವಿಕ್ರಮ್‌ ತಿಳಿಸಿದರು.

ಬೀಟ್‌ ಬಲವರ್ಧನೆ
ಪೊಲೀಸ್‌ ಬೀಟ್‌ ವ್ಯವಸ್ಥೆ ಬಲವರ್ಧನೆ ಮಾಡಲಾಗುವುದು. ಮುಖ್ಯವಾಗಿ ಹಿರಿಯ ನಾಗರಿಕರು, ಒಂಟಿ ಮನೆಗಳಿರುವ ಪ್ರದೇಶಗಳಲ್ಲಿ ಪೊಲೀಸ್‌ ಬೀಟ್‌ ಕಟ್ಟುನಿಟ್ಟುಗೊಳಿಸಲಾಗುವುದು, ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿ ಗಳನ್ನು ಹನಿಟ್ರ್ಯಾಪ್‌ಗೆ ಒಳಪಡಿಸುವ, ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಆರ್‌ಬಿ ಡಿಎಸ್‌ಪಿ ಡಾ| ಗಾನ ಪಿ. ಕುಮಾರ್‌ ಉಪಸ್ಥಿತರಿದ್ದರು.

ಬೆಳಗಾವಿ ಮೂಲದವರು
ಬೆಳಗಾವಿಯವರಾದ ಡಾ| ವಿಕ್ರಂ ಅಮಟೆ ಬೀದರ್‌ನಲ್ಲಿ ಪಶು ವೈದ್ಯಕೀಯ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದು ಬೆಳಗಾವಿಯಲ್ಲಿ ಪಶು ಸಂಗೋಪನ ಇಲಾಖೆಯಲ್ಲಿ ಅ ಧಿಕಾರಿಯಾಗಿ, ಅನಂತರ ಎಸ್‌ಬಿಐ ಬ್ಯಾಂಕ್‌ನಲ್ಲಿ 2 ವರ್ಷಗಳ ಕಾಲ ತಾಂತ್ರಿಕ ಅ ಧಿಕಾರಿಯಾಗಿದ್ದರು. 2012ರಲ್ಲಿ ಕೆಎಸ್‌ಪಿಎಸ್‌ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮೈಸೂರು, ಚಾಮರಾಜನಗರ, ಮಂಗಳೂರು, ಬೆಳಗಾವಿ, ಶಿವಮೊಗ್ಗಗಳಲ್ಲಿ ನಾನಾ ಹುದ್ದೆ ನಿರ್ವಹಿಸಿದ್ದಾರೆ. ಬಳಿಕ ಐಪಿಎಸ್‌ ಆಗಿ ಪದೋನ್ನತಿ ಹೊಂದಿ ಮೈಸೂರು ವಿಭಾಗದಲ್ಲಿ ಗುಪ್ತವಾರ್ತೆ ಎಸ್‌ಪಿಯಾಗಿದ್ದರು. ಎರಡು ವರ್ಷಗಳ ಹಿಂದೆ ದ.ಕ. ಜಿಲ್ಲಾ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.

ಕೇಸ್‌ನೊಂದಿಗೆ ಕೌನ್ಸೆಲಿಂಗ್‌
ಹೆಲ್ಮೆಟ್‌ ಧರಿಸದೆ ಸಂಚರಿಸುವುದು ಸೇರಿದಂತೆ ವಾಹನ ಸಂಚಾರ ನಿಯಮ ಉಲ್ಲಂ ಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಜತೆಗೆ ಪದೇ ಪದೇ ನಿಯಮ ಉಲ್ಲಂ ಸುವವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ವಿಶೇಷ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಸ್ಯಾಟಲೈಟ್‌ ಪೋನ್‌ ಬಳಕೆ ತನಿಖೆ
ನಿಷೇಧಿತ ಸ್ಯಾಟಲೈಟ್‌ ಪೋನ್‌ಗಳ ಬಳಕೆಯಾಗಿರುವ ಮಾಹಿತಿಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ| ವಿಕ್ರಮ್‌ ಅವರು, ದ.ಕ. ಜಿಲ್ಲೆ ಸೇರಿದಂತೆ ಹಲವೆಡೆ ಸ್ಟಾಟಲೈಟ್‌ ಪೋನ್‌ ಬಳಕೆಯಾಗಿರುವ ಸಿಗ್ನಲ್‌ ದೊರೆತಿರುವ ಬಗ್ಗೆ ಗುಪ್ತಚರ ಇಲಾಖೆ, ಎನ್‌ಐಎ, ಎಎನ್‌ಎಫ್ ಮತ್ತು ಪೊಲೀಸ್‌ ತಂಡಗಳು ತನಿಖೆ ನಡೆಸುತ್ತಿವೆ ಎಂದು ತಿಳಿಸಿದರು.

ಟಾಪ್ ನ್ಯೂಸ್

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು ಎಚ್ಚರವಹಿಸಲು ಅರಣ್ಯ ಅಧಿಕಾರಿಗಳ ಸೂಚನೆ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ: ಓರ್ವನ ಸೆರೆ, ಇನ್ನೋರ್ವ ಪರಾರಿ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತಸ್ವೀಪ್‌ ಚಿತ್ತ!

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್‌ ಚಿತ್ತ!

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

ajit kumar rai maladi

ಬಂಟರು ಯಾನೆ ನಾಡವರನ್ನು ಪ್ರವರ್ಗ 2(ಎ)ಗೆ ಸೇರಿಸಿ- ನಿಗಮ ಸ್ಥಾಪಿಸಿ

ಹಂಪ್‌ನಲ್ಲಿ ಬಸ್‌ ಜಂಪ್‌: ಪ್ರಯಾಣಿಕನಿಗೆ ಗಂಭೀರ ಗಾಯ

ಹಂಪ್‌ನಲ್ಲಿ ಬಸ್‌ ಜಂಪ್‌: ಪ್ರಯಾಣಿಕನಿಗೆ ಗಂಭೀರ ಗಾಯ

ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.