
ಕೋವಿಡ್-19 ವಿರುದ್ಧ ಹೋರಾಟಕ್ಕೆ ತಿಂಗಳ ವೇತನ ನೀಡಿದ ಡಿಎಸ್ ಪಿ ಶಾಂತವೀರ
Team Udayavani, Apr 6, 2020, 4:28 PM IST

ವಿಜಯಪುರ: ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಾಠಿ ಹಿಡಿದು ಕರ್ತವ್ಯ ಮೆರೆಯುತ್ತಿರುವ ಪೊಲೀಸರು ಇದೀಗ ಇತರ ಕಾರಣಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ಲಾಕ್ ಡೌನ್ ಉಲ್ಲಂಘಿಸುವ ಜನರಿಗೆ ವಿನೂತಕ ಬಗೆಯ ಶಿಕ್ಷೆಗಳನ್ನು ನೀಡುತ್ತಿದ್ದ ಪೊಲೀಸರು ಈಗ ಆರ್ಥಿಕ ನೆರವಿನಿಂದಲೂ ತಮ್ಮ ಸಹಕಾರ ನೀಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪ ವಿಭಾಗದ ಡಿಎಸ್ಪಿ ಶಾಂತವೀರ ತಮ್ಮ ಒಂದು ತಿಂಗಳ ವೇತನವನ್ನು ಕೋವಿಡ್-19 ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು ದೇಣಿಗೆ ನೀಡಿದ್ದಾರೆ.
ಈ ಕುರಿತು ಎಸ್ಪಿ ಅನುಪಮ ಅಗರವಾಲ ಅವರಿಗೆ ಏಪ್ರಿಲ್ 6 ರಂದು ಲಿಖಿತವಾಗಿ ಪತ್ರ ಬರೆದಿರುವ ಅವರು, ತಮ್ಮ ಏಪ್ರಿಲ್ ತಿಂಗಳ ವೇತನ 75 ಸಾವಿರ ರೂ. ಕಡಿತಮಾಡಿ, ಕೋವಿಡ್-19 ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು ಕೋರಿದ್ದಾರೆ.
ಟಾಪ್ ನ್ಯೂಸ್
