“ವೀರಂ’ ಲುಕ್‌ನಲ್ಲಿ ಡೈನಾಮಿಕ್ ಪ್ರಿನ್ಸ್
Team Udayavani, Jul 5, 2020, 9:19 AM IST
“ಜಂಟಲ್‌ಮನ್’ ಸಿನಿಮಾದ ಯಶಸ್ಸಿನ ನಂತರ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಹೊಸ ಚಿತ್ರ “ವೀರಂ’. ಇದೀಗ ಚಿತ್ರತಂಡ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದೆ. “ವೀರಂ’ ಫಸ್ಟ್‌ಲುಕ್‌ನಲ್ಲಿ ಪ್ರಜ್ವಲ್ ಬಾಯಲ್ಲಿ ಲಾಂಗ್ ಕಚ್ಚಿಕೊಂಡು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು “ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ನಿರ್ಮಾಪಕ ಶಶಿಧರ್ ಕೆ.ಎಂ. ನಿರ್ಮಿಸುತ್ತಿದ್ದು, ಖದರ್ ಕುಮಾರ್ ನಿರ್ದೇಶನವಿದೆ. ನಿರ್ಮಾಣದಲ್ಲಿ ರಘು ಸಿಂಗಂ ಸಾಥ್ ನೀಡುತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಈ ಹಿಂದೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದೇ ಚಿತ್ರದ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರನ್ನು ಚಾಲೆಂಜಿಂಗ್ ಸಾರ್ ದರ್ಶನ್ ಬಿಡುಗಡೆ ಮಾಡಿದ್ದರು. “ವೀರಂ’ ಚಿತ್ರದಲ್ಲಿ ಪ್ರಜ್ವಲ್, ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದೇ ಚಿತ್ರದ ಟೈಟಲ್ ಲಾಂಚ್ ಮಾಡಿತ್ತು ಚಿತ್ರತಂಡ.
ಒಟ್ಟಾರೆ “ಕೋಟಿಗೊಬ್ಬ’, “ಯಜಮಾನ’ ಚಿತ್ರಗಳ ಶೀರ್ಷಿಕೆ ಮರುಬಳಕೆಯಾಗಿ, ಸಕ್ಸಸ್ ಕಂಡಿದ್ದು ಕಣ್ಣ ಮುಂದೆಯೇ ಇದೆ. ಅದೇನೆ ಇರಲಿ, “ವೀರಂ’ ಒಂದು ಸಂಸ್ಕೃತ ಪದವಾಗಿದ್ದು, ಆ ಹೆಸರಲ್ಲಿ ಈಗ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಲು ಚಿತ್ರತಂಡ ಅಣಿಯಾಗುತ್ತಿದ್ದು, ಆಗಸ್ಟ್‌ನಿಂದ ಚಿತ್ರೀಕರಣವನ್ನು ಮಾಡಲು ತಯಾರಾಗುತ್ತಿದೆ.