ಕಂಪನಿಯ ಏಳಿಗೆಗೆ ದುಡಿದ 13 ಉದ್ಯೋಗಿಗಳಿಗೆ ಕಾರು ಗಿಫ್ಟ್ !
Team Udayavani, Feb 4, 2023, 7:30 AM IST
ನವದೆಹಲಿ: ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್ ಸೇರಿದಂತೆ ಜಗತ್ತಿನ ಪ್ರಸಿದ್ಧ ಸಂಸ್ಥೆಗಳೇ ನಷ್ಟದ ಕಾರಣ ನೀಡಿ, ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಆದರೆ, ಭಾರತೀಯ ಮೂಲದ ಐಟಿ ಸಂಸ್ಥೆಯೊಂದು ತನ್ನ ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡಿ, ಹುರಿದುಂಬಿಸಿದೆ.
ಹೌದು, ಅಹ್ಮದಾಬಾದ್ ಮೂಲದ ತ್ರಿಧ್ಯಾ ಟೆಕ್ ಎನ್ನುವ ಸಂಸ್ಥೆ ತನ್ನ 13 ಉದ್ಯೋಗಿಗಳಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಕಾರುಗಳನ್ನು ಗಿಫ್ಟ್ ನೀಡಿದೆ. ಸಂಸ್ಥೆ ಆರಂಭವಾದಾಗಿನಿಂದಲೂ, ಅತ್ಯುತ್ತಮ ಉದ್ಯೋಗಿಗಳಿಗೆ ಉಡುಗೊರೆ ನೀಡುತ್ತಿದ್ದು, ಅದೇ ಸಂಪ್ರದಾಯವನ್ನೇ ಈಗಲೂ ಮುಂದುವರಿಸಿರುವುದಾಗಿ ಹೇಳಿದೆ.
ಬೈಜೂಸ್‌ನಿಂದ ಮತ್ತೆ ಉದ್ಯೋಗ ಕಡಿತ:
ಟೆಕ್ ಸಂಸ್ಥೆಗಳ ಉದ್ಯೋಗ ಕಡಿತದ ಸರಣಿಯೂ ಮುಂದುವರಿದಿದ್ದು, ಬೈಜೂಸ್ ಸಂಸ್ಥೆ ಮತ್ತೆ ತನ್ನ 1 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಕಳೆದ 6 ತಿಂಗಳಲ್ಲಿ 2ನೇ ಬಾರಿಗೆ ಸಂಸ್ಥೆ ಉದ್ಯೋಗ ಕಡಿತಗೊಳಿಸುತ್ತಿದೆ. ಸಂಸ್ಥೆಯ ಪ್ರೊಡಕ್ಷನ್, ಎಂಜಿನಿಯರಿಂಗ್ ಡಿಪಾರ್ಟ್‌ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!
ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?
ಪ್ರಧಾನಿ ಮೋದಿ ಭೇಟಿಗೂ ಮುನ್ನ ಅಜಯ್ ಬಂಗಾ ಅವರಿಗೆ ಕೋವಿಡ್ ಪಾಸಿಟಿವ್
ದೆಹಲಿಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನಾ ಮೆರವಣಿಗೆಗೆ ಪೊಲೀಸರ ತಡೆ ; ವಿಡಿಯೋ
MUST WATCH
ಹೊಸ ಸೇರ್ಪಡೆ
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’
ಮಂಗಳೂರು: ಪೊಲೀಸರಿಂದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ
ಕೇಂದ್ರ ಸರಕಾರದಿಂದ ಉತ್ತರ ಕನ್ನಡ ಜಿಲ್ಲೆಗೆ 232 ಕೋ.ರೂ. ಅನುದಾನ
ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!