
ದುಬಾರಿ ಮೌಲ್ಯದ ಜೀವವಿಮೆಗಳಿಗೆ ತೆರಿಗೆ ವಿನಾಯ್ತಿ ಇಲ್ಲ
Team Udayavani, Feb 2, 2023, 7:25 AM IST

ಈ ವರ್ಷ ಏ.1ರಿಂದ ನೀಡಲ್ಪಡುವ ವಿಮೆಗಳಿಗೆ ಮಾತ್ರ ಹೊಸ ನೀತಿ ಅನ್ವಯ ದುಬಾರಿ ಮೌಲ್ಯದ ವಿಮಾ ಪಾಲಿಸಿಗಳನ್ನು ಮಾಡಿಸುವವರಿಗೆ ಒಂದು ಬೇಸರದ ಸುದ್ದಿಯಿದೆ. ಇದು ದುಬಾರಿ ವಿಮೆಗಳಿಗೆ ಮಾತ್ರ ಅನ್ವಯವಾಗುವುದರಿಂದ ಉಳಿದವರೆಲ್ಲ ಚಿಂತೆ ಮಾಡುವ ಅಗತ್ಯವಿಲ್ಲ. ಜೊತೆಗೆ 2023 ಏ.1 ಮತ್ತು ನಂತರ ನೀಡಲ್ಪಡುವ ಜೀವವಿಮೆಗಳಿಗೆ ಮಾತ್ರ ಇದು ಅನ್ವಯವಾಗುವುದು. ಹಾಗಾಗಿ ಹಿಂದೆಯೇ ದುಬಾರಿ ವಿಮೆ ಪಡೆದವರೂ ಯೋಚಿಸಬೇಕಾದ ಅಗತ್ಯವಿಲ್ಲ.
ವಿಷಯವೇನೆಂದರೆ ಈ ವರ್ಷ ಏ.1ರಿಂದ ಪಡೆಯುವ ಹೊಸ ವಿಮೆಗಳಿಗೆ 5 ಲಕ್ಷ ರೂ.ಗಿಂತ ಮೇಲ್ಪಟ್ಟು ಕಂತನ್ನು ಪಾವತಿಸುತ್ತೀರಾದರೆ, ಅದಕ್ಕೆ ಇನ್ನು ಮುಂದೆ ತೆರಿಗೆ ವಿನಾಯ್ತಿ ಸಿಗುವುದಿಲ್ಲ.
ಯೂಲಿಪ್‌ಗಳಿಗೆ (ಜೀವವಿಮೆಗಳನ್ನು ಹೆಚ್ಚುವರಿಯಾಗಿ ಹೊಂದಿರುವ ವಿಮೆಗಳು) ಹೊಸ ನೀತಿ ಅನ್ವಯವಾಗುವುದಿಲ್ಲ. ಅಂದರೆ ಯೂಲಿಪ್ ವಿಮೆಗಳಿಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ಗಮನಾರ್ಹ ಸಂಗತಿಯೆಂದರೆ 2021ರ ಬಜೆಟ್‌ನಲ್ಲಿ, ವಾರ್ಷಿಕ 2.5 ಲಕ್ಷ ರೂ. ಕಂತು ಹೊಂದಿದ್ದ ಯೂಲಿಪ್‌ಗಳಿಗೆ ತೆರಿಗೆ ವಿನಾಯ್ತಿ ತೆಗೆಯಲಾಗಿತ್ತು. ಇನ್ನು ಒಬ್ಬ ವ್ಯಕ್ತಿ ಮೃತಪಟ್ಟಾಗ ಪಡೆಯುವ ಪಡೆಯುವ ವಿಮಾಮೊತ್ತಕ್ಕೂ ಈ ಹೊಸ ನೀತಿ ಅನ್ವಯವಾಗುವುದಿಲ್ಲ. ಈ ಬಾರಿಯ ನೀತಿಯ ಉದ್ದೇಶವೆಂದರೆ ಗರಿಷ್ಠ ಮೌಲ್ಯ ಹೊಂದಿರುವ ವಿಮೆಗಳಿಗೆ ತೆರಿಗೆ ವಿನಾಯ್ತಿ ನೀಡುವುದನ್ನು ನಿಲ್ಲಿಸುವುದು.
ತಜ್ಞರ ವಿರೋಧ: ಸರ್ಕಾರದ ಹೊಸನೀತಿಯನ್ನು ತಜ್ಞರು ವಿರೋಧಿಸಿದ್ದಾರೆ. ಈ ನೀತಿಯಿಂದ ವಿಮಾವಲಯದಲ್ಲಿ ಋಣಾತ್ಮಕ ಪರಿಣಾಮವಾಗುತ್ತದೆ. ಗರಿಷ್ಠ ಮೌಲ್ಯ ಹೊಂದಿರುವ ಸಾಂಪ್ರದಾಯಿಕ ವಿಮೆಗಳನ್ನು (ಜೀವವಿಮೆ) ಕೊಳ್ಳುವ ವ್ಯಕ್ತಿಗಳ ಆಸಕ್ತಿ ಕುಂದಬಹುದು. ಜನ ಇನ್ನು ನಿಗದಿತ ಅವಧಿಯ ವಿಮೆಗಳಿಗೆ, ಭದ್ರತಾ ಆಧಾರಿತ ವಿಮೆಗಳಿಗೆ ಬದಲಿಸಿಕೊಳ್ಳಬಹುದು. ಈ ಹೊಸ ನೀತಿಯಿಂದ ಜನರು ಹೂಡಿಕೆ ಆಧಾರಿತ ಯೂಲಿಪ್‌ಗಳಿಗೆ ಬದಲಾಗದಿದ್ದರೆ ಸಾಕು ಎಂದು ಸೆಕ್ಯೂರ್‌ನೌ ಇನ್ಶೂರೆನ್ಸ್ ಬ್ರೋಕರ್ ಸಂಸ್ಥೆಯ ಸಹ ಸಂಸ್ಥಾಪಕ ಕಪಿಲ್ ಮೆಹ್ತಾ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ನ್ಯಾಯಾಲಯದಿಂದ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾ

ಮುಳುಗುತ್ತಿದ್ದವರನ್ನು ರಕ್ಷಿಸಿದ ಬಾಲಕನಿಗೆ ಗೋವಾ ಮುಖ್ಯಮಂತ್ರಿಯಿಂದ 1 ಲಕ್ಷ ರೂ. ಬಹುಮಾನ

ಪ್ರಧಾನಿ ಮೋದಿ ಪದವಿಯ ವಿವರ ಪ್ರಶ್ನೆ;ಕೇಜ್ರಿವಾಲ್‌ಗೆ ದಂಡ ಹಾಕಿದ ಕೋರ್ಟ್

ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು

ʻಮೋದಿ ಹಟಾವೋ, ದೇಶ್ ಬಚಾವೋʼ ಪೋಸ್ಟರ್: ಗುಜರಾತ್‌ನಲ್ಲಿ 8 ಜನ ಪೋಲಿಸ್ ವಶಕ್ಕೆ