ಚಿರು ಕುಟುಂಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಅಭಿಮಾನಿ
Team Udayavani, May 23, 2021, 9:48 PM IST
ಮೇ 22ಕ್ಕೆ ಚಿರು ಪುತ್ರ ಜನಿಸಿ ಏಳು ತಿಂಗಳು ಕಳೆದಿವೆ. ಈ ವಿಶೇಷವಾಗಿ ಅಭಿಮಾನಿಗಳು ಜೂನಿಯರ್ ಚಿರುಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ಮಗನಿಗೆ ಏಳು ತಿಂಗಳು ತುಂಬಿದ ಸಂತಸವನ್ನು ನಟಿ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಜೊತೆಗೆ ಅಭಿಮಾನಿಯೊಬ್ಬರು ರಚಿಸಿದ ಫೋಟೋವನ್ನು ಸಹ ಶೇರ್ ಮಾಡಿದ್ದರು.
ಈ ಫೋಟೋದಲ್ಲಿ ಚಿರಂಜೀವಿ, ಮೇಘನಾ ರಾಜ್ ಹಾಗೂ ಅವರ ಮಗು ಒಟ್ಟಿಗೆ ಇರುವಂತೆ ಭಾವನಾತ್ಮಕವಾಗಿ ರಚಿಸಲಾಗಿದೆ. ಮೇಘನಾ ಶೇರ್ ಮಾಡಿದ್ದ ಈ ಫೋಟೋ ವೈರಲ್ ಆಗಿದೆ.
ಅಕ್ಟೋಬರ್ 22 ರಂದು ಚಿರು-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿತು. ಕಳೆದ ತಿಂಗಳು ಚಿರು ಪುತ್ರನಿಗೆ ಆರು ತಿಂಗಳು ಪೂರೈಸಿದಾಗ ಮನೆಯಲ್ಲಿ ಸದಸ್ಯರೆಲ್ಲರು ಸೇರಿ ಸಂಭ್ರಮಿಸಲಾಗಿತ್ತು.