ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

Team Udayavani, Aug 2, 2020, 11:56 AM IST

vydyakeeya

ಮೊದಲೆರಡು ವರ್ಷ ಸಾಮಾನ್ಯ ಪಠ್ಯ
ಎಂಬಿಬಿಎಸ್‌ ಕೋರ್ಸ್‌ನ ಮೊದಲ ಹಾಗೂ ಎರಡನೇ ವರ್ಷವನ್ನು ಸಾಮಾನ್ಯ ಅವಧಿಯೆಂದು ಪರಿಗಣಿಸಲು ನಿರ್ಧರಿಸಲಾಗಿದೆ. ಅಂದರೆ, ಎಂಬಿಬಿಎಸ್‌, ಡೆಂಟಲ್‌, ನರ್ಸಿಂಗ್‌ ಹಾಗೂ ಇನ್ನಿತರ ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ
ಕೋರ್ಸ್‌ಗಳ ಮೊದಲ ಎರಡು ವರ್ಷಗಳಲ್ಲಿನ ಪಠ್ಯಕ್ರಮವನ್ನು ಒಂದೇ ರೀತಿಯಲ್ಲಿ ರೂಪಿಸಲಾಗುತ್ತದೆ. ಹಾಗಾಗಿ ಈ ಕೋರ್ಸ್‌ಗಳಲ್ಲಿ ಮೊದಲೆರಡು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಯು, ಎಕ್ಸಿಟ್‌-ಕಂ-ಎಂಟ್ರೆನ್ಸ್‌ ಪರೀಕ್ಷೆ ಬರೆದು ಅಲ್ಲಿ ತೋರುವ ಸಾಧನೆಯ ಆಧಾರದಲ್ಲಿ ಎಂಬಿಬಿಎಸ್‌, ಡೆಂಟಲ್‌, ನರ್ಸಿಂಗ್‌, ಫಿಸಿಯೋಥೆರಪಿ ಮುಂತಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಎಂಬಿಬಿಎಸ್‌ಗೆ ಕಾಮನ್‌ ಎಕ್ಸಿಟ್‌ ಪರೀಕ್ಷೆ
ಎಂಬಿಬಿಎಸ್‌ ಶಿಕ್ಷಣದ ನಾಲ್ಕನೇ ವರ್ಷ ಪೂರೈಸಿದ ವಿದ್ಯಾರ್ಥಿಗಳಿಗಾಗಿ, ಕಾಮನ್‌ ಎಕ್ಸಿಟ್‌ ಪರೀಕ್ಷೆ­ಯನ್ನು ನಡೆಸಲಾಗುವುದು. ಈ ಪರೀಕ್ಷೆಯು, ವೈದ್ಯ­ಕೀಯ ಸ್ನಾತಕೋತ್ತರ ವ್ಯಾಸಂಗಕ್ಕೆ ಪ್ರವೇಶ ಪರೀ­ಕ್ಷೆಯೂ ಆಗಿರಲಿದೆ. ಆದ ಕಾರಣ ಇಲ್ಲಿ ವಿದ್ಯಾರ್ಥಿ­ಗಳು ಉತ್ತಮ ಸಾಧನೆ ತೋರಿ, ಸ್ನಾತಕೋತ್ತರ ಪ್ರವೇಶಕ್ಕೆ ಅವಕಾಶ ಗಿಟ್ಟಿಸಿಕೊಂಡು, ತಮ್ಮ ಹೌಸ್‌ ಸರ್ಜನ್‌ಶಿಪ್‌ ಅವಧಿಯನ್ನು ನಿಶ್ಚಿಂತೆಯಿಂದ ಮುಗಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ಸೌಲಭ್ಯವನ್ನು ಡೆಂಟಲ್‌ ವಿದ್ಯಾರ್ಥಿಗಳಿಗೂ ನೀಡಲು ತೀರ್ಮಾನಿಸಲಾಗಿದೆ.

ಜನರಲ್‌ ನರ್ಸಿಂಗ್‌ಗೆ ಕೊಕ್‌
ಶುಶ್ರೂಷಕರಾಗಲು ಬಯಸುವವರು ಇನ್ನು ಕಡ್ಡಾಯವಾಗಿ, ಬಿಎಸ್ಸಿ ನರ್ಸಿಂಗ್‌ ಮುಗಿಸಿದ ಅನಂತರವೇ ಆ ಕ್ಷೇತ್ರಕ್ಕೆ ಕಾಲಿಡಬೇಕಾಗುತ್ತದೆ. ಈಗ ಇರುವ ಜನರಲ್‌ ನರ್ಸಿಂಗ್‌ ಆ್ಯಂಡ್‌ ಮಿಡ್‌ವೈಫ‌ರಿ (ಜಿಎನ್‌ಎಂ) ಕೋರ್ಸನ್ನು ರದ್ದುಗೊಳಿಸಲು ನಿರ್ಧರಿಸಲಾಗಿದ್ದು, ಅದು ಹಂತಹಂತವಾಗಿ ಜಾರಿಗೆ ಬರಲಿದೆ. ಶುಶ್ರೂಷಕ ವ್ಯಾಸಂಗದ ಗುಣಮಟ್ಟ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವೈದ್ಯರೇ ಇಲ್ಲದ ಪ್ರಾಂತ್ಯಗಳಲ್ಲಿ ಶುಶ್ರೂಷಕರ ನೆರವು ಹೆಚ್ಚಾಗಿ ಜನರಿಗೆ ಸಿಗುವಂತಾಗಲು, ನರ್ಸ್‌ ಪ್ರಾಕ್ಟೀಷನರ್‌ ಎಂಬ ಹೊಸ ಕೋರ್ಸ್‌ ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಜತೆಗೆ ಆನ್‌-ದ-ಜಾಬ್‌ ಟ್ರೈನಿಂಗ್‌ ಮಾದರಿಯಲ್ಲಿ, ಜನರಲ್‌ ಡ್ನೂಟಿ ಅಸಿಸ್ಟೆಂಟ್‌ಗಳಿಗೆ (ಜಿಡಿಎ), ತುರ್ತು ವೈದ್ಯಕೀಯ ಸಿಬಂದಿಗೆ (ಇಎಂಟಿ-ಬಿ), ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಲ್ಯಾಬ್‌ ಟೆಕ್ನೀಷಿಯನ್‌ಗಳಿಗೆ ಕೌಶಲಾಭಿವೃದ್ಧಿಯ ಸರ್ಟಿಫಿಕೇಟ್‌ ಕೋರ್ಸ್‌ ಗಳನ್ನು ನಡೆಸಲು ನಿರ್ಧರಿಸಲಾಗಿದೆ. ಎಲ್ಲ ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಬೋಧನಾ ಸಂಸ್ಥೆಗಳಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ.

ಕೃಷಿ ವಿಶ್ವವಿದ್ಯಾಲಯ, ಪಶು ವೈದ್ಯಕೀಯಕ್ಕೆ ಹೊಸ ಸ್ಪರ್ಶ
ತಾಂತ್ರಿಕ ವಿಶ್ವವಿದ್ಯಾಲಯಗಳು, ಆರೋಗ್ಯ ವಿಜ್ಞಾನ ವಿದ್ಯಾಲಯ­ಗಳು, ಕಾನೂನು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿ ಸ್ಥಾಪನೆಯಾಗುವ ಪರಿಪಾಠಕ್ಕೆ ಅಂತ್ಯ ಹಾಡಲಾಗುತ್ತದೆ. ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆ ಗಳನ್ನು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಉದಾಹರಣೆಗೆ, ದೇಶದೆಲ್ಲೆಡೆ ಕೃಷಿ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ಸಂಸ್ಥೆಗಳಿದ್ದರೂ ಅಲ್ಲಿಗೆ ದಾಖಲಾಗುವ ಯುವಜನರ ಪ್ರಮಾಣ ಶೇ. 1ರಷ್ಟಿದೆ. ಇದರಿಂದ, ನಮ್ಮ ದೇಶದ ಪ್ರಮುಖ ಕ್ಷೇತ್ರವಾದ ಕೃಷಿಯಲ್ಲಿ ಸುಧಾರಣೆಗಳು ತರುವಂಥ, ಕ್ರಾಂತಿಕಾರಕ ಬದಲಾವಣೆಗಳನ್ನು ತರುವಂಥ ಯುವ ತಜ್ಞರು ನಮ್ಮಲ್ಲಿ ಕಡಿಮೆ ಇದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಕೃಷಿಗಳಿಗೆ ಅನುಗುಣ ವಾಗಿ, ಪಠ್ಯಗಳನ್ನು ರೂಪಿಸಿ, ಅದನ್ನು ಶಾಸ್ತ್ರೀಯವಾಗಿ ಕಲಿಯುವಂಥ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಅಂದರೆ, ಕೃಷಿ ವ್ಯಾಸಂಗ ಕ್ಷೇತ್ರಕ್ಕೆ ಇನ್ನು ಹೊಸ ಬೆಂಬಲ ಸಿಗಲಿದೆ. ಇಲ್ಲಿಯೂ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆ ಹುಟ್ಟಿಸಿದೆ.

ಸಮಾಜ ಸ್ನೇಹಿ ಪಠ್ಯಕ್ರಮಕ್ಕೆ ಒತ್ತು
ತಾಂತ್ರಿಕ ವಿಷಯಗಳಲ್ಲಿ ಸ್ನಾತಕ ಪದವಿಗಳನ್ನು ಪಡೆಯುವ ವಿದ್ಯಾರ್ಥಿ­ಗಳನ್ನು ಹೆಚ್ಚೆಚ್ಚು ವೃತ್ತಿಪರರನ್ನಾಗಿಸಲು ತೀರ್ಮಾ­ನಿ­ಸಲಾಗಿದೆ. ಇಂಥದ್ದೇ ಒಂದು ಪ್ರಯತ್ನದಡಿ, ವಾಸ್ತುಶಿಲ್ಪ ಎಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ನಗರಗಳ ಯೋಜನೆ, ಸಾಮಾಜಿಕ ವಿಜ್ಞಾನ ಹಾಗೂ ಆರ್ಥಿಕತೆಯಲ್ಲೂ ಪರಿಣತಿ ಪಡೆಯು­ವಂತೆ ಪಠ್ಯಕ್ರಮ ರೂಪಿಸಲಾಗುತ್ತದೆ. ಇದು ಭವಿಷ್ಯದಲ್ಲಿ ಅವರ ಕೆರಿಯರ್‌ಗೆ ಹಾಗೂ ಸಮಾಜಕ್ಕೆ ಎರಡಕ್ಕೂ ಉಪಯೋಗ­ವಾಗುವಂತೆ ರೂಪಿಸಲಾಗುತ್ತದೆ. ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚಳದ ಬಗ್ಗೆ ಗಮನ ಕೊಡುವ ನ್ಯಾಶನಲ್‌ ಅಕಾಡೆಮಿ ಆಫ್ ಎಂಜಿನಿಯರಿಂಗ್‌ (ಐಎನ್‌ಎಎಫ್) ನಲ್ಲಿ ನಿವೃತ್ತ ವಿಜ್ಞಾನಿಗಳು, ಎಂಜಿನಿ ಯರ್‌ಗಳನ್ನು ಕರೆತಂದು ವಾಸ್ತವಕ್ಕೆ ಹತ್ತಿರುವಂಥ ಪಠ್ಯಕ್ರಮ, ತರಬೇತಿ ಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.

ಕೈಗಾರಿಕಾ ಜ್ಞಾನಾರ್ಜನೆಗೆ ಅವಕಾಶ
ವಿದ್ಯಾರ್ಥಿಗಳು ತಾವು ಓದುತ್ತಿರುವ ಎಂಜಿನಿಯರಿಂಗ್‌ ವಿಷಯದಲ್ಲಿ ಕೈಗಾರಿಕಾ ಜ್ಞಾನ ಪಡೆಯುವಂತೆ ಮಾಡುವ ಉದ್ದೇಶದಿಂದ ಅವರಿಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂಡಸ್ಟ್ರಿ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಕೈಗಾರಿಕಾ ವಲಯದಲ್ಲಿ ಹೆಚ್ಚು ಅನುಭವವಿರುವ ವ್ಯಕ್ತಿಗಳನ್ನು ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳಲು, ಇಂಟರ್ನ್ಶಿಪ್‌ಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸಲಾಗುತ್ತದೆ.

ಕಾನೂನು ಶಿಕ್ಷಣದಲ್ಲಿ ಹೊಸತನ
ದೇಶದಲ್ಲಿ ಹಲವಾರು ಕಾನೂನು ಶಿಕ್ಷಣ ಸಂಸ್ಥೆಗಳಿವೆ. ಅವು ಜಾಗತಿಕ ಮಟ್ಟದಲ್ಲಿ ಸೆಣಸು­ವಂಥ ದೈತ್ಯ ವಕೀಲರನ್ನು ನಿರೀಕ್ಷಿತ ಮಟ್ಟದಲ್ಲಿ ತಯಾರಿಸುತ್ತಿಲ್ಲ ಹಾಗಾಗಿ, ಈಗಿರುವ ಕಾನೂನು ವ್ಯಾಸಂಗದಲ್ಲಿ, ಸಾಂವಿಧಾನಿಕ ಮೌಲ್ಯಗಳ ಜತೆ, ನ್ಯಾಯ, ಆರ್ಥಿಕ, ಸಾಮಾಜಿಕ, ರಾಜಕೀಯ ತಿಳುವಳಿಕೆ ಸೇರಿಸಲು ತೀರ್ಮಾನಿಸಲಾಗಿದೆ. ಜತೆಗೆ ಇಂಗ್ಲೀಷ್‌ ಹಾಗೂ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಕಾನೂನು ವ್ಯಾಸಂಗ ಮಾಡಲು ಅನುವು ಮಾಡಿಕೊಡಲಾಗುತ್ತದೆ.

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.