ಬಾಲಾಜಿ ಸಕ್ಕರೆ ಕಾರ್ಖಾನೆಗೆ ವಂಚನೆ:  ಇಬ್ಬರು ಸಿಬ್ಬಂದಿ ಸೇರಿ ಏಳು ಜನರ ವಿರುದ್ಧ ಪ್ರಕರಣ


Team Udayavani, Feb 8, 2022, 2:31 PM IST

17factroy

ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಮದರಿ ಗ್ರಾಮದ ಬಳಿ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆಯಲ್ಲಿ ಗೋಲ್‍ಮಾಲ್ ನಡೆಸಿ ಅಂದಾಜು 40 ಲಕ್ಷ ರೂ ಹಾನಿ ತಂದೊಡ್ಡಿರುವ ಆರೋಪದ ಮೇಲೆ 7 ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೇನ್‍ಯಾರ್ಡ್ ಸೂಪರ್ ವೈಜರ್ ಮುದ್ದೇಬಿಹಾಳ ತಾಲೂಕು ಜಲಪೂರನ ಮಂಜುನಾಥ ರೇವಣಸಿದ್ದನಗೌಡ ತೊಂಡಿಹಾಳ, ವೇ ಬ್ರಿಜ್ ಆಪರೇಟರ್ ಯರಝರಿಯ ಶಿವಕುಮಾರ ಮಲ್ಲಿಕಾರ್ಜುನ ಮಣ್ಣೂರ, ಕಬ್ಬಿನ ಲೋಡ್ ಟ್ರ್ಯಾಕ್ಟರುಗಳ ಚಾಲಕರಾದ ಯರಝರಿಯ ರಮೇಶ ಯಮನಪ್ಪ ದಡ್ಡಿ ಹಾಗೂ ಓಂಪ್ರಕಾಶ ಲಕ್ಕಪ್ಪ ಗುರಿಕಾರ, ಬಳಬಟ್ಟಿಯ ಭೂಪಣ್ಣ ಅಮೀನಪ್ಪ ಮಾಳಗೊಂಡ ಹಾಗೂ ದುಂಡಪ್ಪ ಮಲ್ಲಪ್ಪ ವಾಲಿಕಾರ ಮತ್ತು ಬಸವನ ಬಾಗೇವಾಡಿ ತಾಲೂಕು ಕುರುಬರದಿನ್ನಿಯ ಸಂಗನಗೌಡ ದುಂಡಪ್ಪಗೌಡ ಬಿರಾದಾರ ವಿರುದ್ದ ಪ್ರಕರಣ ದಾಖಲಾಗಿದೆ.

ಮಂಜುನಾಥ ಮತ್ತು ಶಿವಕುಮಾರ ಇವರಿಬ್ಬರೂ ಸೇರಿಕೊಂಡು ಇತರೆ ಕಬ್ಬಿನ ಲೋಟ್ ಟ್ರ್ಯಾಕ್ಟರ್‍ ಗಳ ಚಾಲಕರೊಂದಿಗೆ ಸೇರಿಕೊಂಡು ಕೆಲವು ಕಬ್ಬಿನ ಲೋಡ್ ಟ್ರ್ಯಾಕ್ಟರ್‍ ಗಳ ತೂಕದಲ್ಲಿ ಮೋಸ ಮಾಡಿ ಲೋಡ್ ಕಾರ್ಖಾನೆಗೆ ಬರದಿದ್ದರೂ ಬಂದಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಒಂದು ಹಂತದಲ್ಲಿ ಅಂದಾಜು 10 ಲಕ್ಷ ರೂ ಮೌಲ್ಯದ 322.299 ಮೆಟ್ರಿಕ್ ಟನ್ ಹಾಗೂ ಇನ್ನೊಂದು ಹಂತದಲ್ಲಿ ಅಂದಾಜು 30 ಲಕ್ಷ ರೂ ಮೌಲ್ಯದ 1005.450 ಮೆಟ್ರಿಕ್ ಟನ್ ಕಬ್ಬಿನಲ್ಲಿ ಗೋಲ್‍ಮಾಲ್ ಮಾಡಿ ಕಾರ್ಖಾನೆಗೆ ವಂಚಿಸಿ ಒಟ್ಟು 51 ಟ್ರಿಪ್‍ಗಳ 1327.749 ಮೆಟ್ರಿಕ್ ಟನ್ ಕಬ್ಬಿಗೆ ನಕಲಿ ದಾಖಲೆ ಸೃಷ್ಟಿಸಿ 40 ಲಕ್ಷ ರೂಗಳಷ್ಟು ವಂಚನರ ಮಾಡಿದ್ದಾರೆ.

ದುಂಡಪ್ಪ ವಾಲಿಕಾರನ ಹೆಸರಿನಲ್ಲಿ ಕಾರ್ಖಾನೆಗೆ ತಿಳಿಯದ ಹಾಗೆ 130.392 ಮೆಟ್ರಿಕ್ ಟನ್ ಅನ್‍ಲೋಡ್ ಮಾಡಿದ್ದರ ಪೈಕಿ ಈಗಾಗಲೇ 3,20,764 ರೂ ಬಿಲ್ ಜಮಾ ಮಾಡಲಾಗಿದೆ. ಆರೋಪಿಗಳೆಲ್ಲರೂ ಸೇರಿ ನಿಡಗುಂದಿಯಲ್ಲಿರುವ ಕಾರ್ಖಾನೆಗೆ ಸೇರಿದ ಸುಂದರಾ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್‍ನಲ್ಲಿ ಖಾತೆ ತೆರೆದು ಜಮಾ ಆಗಿದ್ದ ಹಣದ ಪೈಕಿ ಈಗಾಗಲೇ 1 ಲಕ್ಷ ರೂ ವಿತ್‍ಡ್ರಾ ಮಾಡಿಕೊಂಡಿದ್ದಾರೆ.

ಆರೋಪಿಗಳ ನಡವಳಿಕೆ ಮತ್ತು ಚಟುವಟಿಕೆಗಳಿಂದ ಸಂಶಯಗೊಂಡು ವಿಚಾರಿಸಿದಾಗ, ಇನ್ನಿತರೆ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದಾಗ ಮತ್ತು ಸಿಸಿ ಟಿವಿ ದೃಶ್ಯ ಪರಿಶೀಲಿಸಿದಾಗ ಗೋಲ್‍ಮಾಲ್ ಬೆಳಕಿಗೆ ಬಂದಿದೆ.

ಎಲ್ಲ ಆರೋಪಗಳು ಕೂಡಿಕೊಂಡು ನೈಜವಾಗಿ ಕಬ್ಬಿನ ವಾಹನಗಳು ಇರದಿದ್ದಾಗ್ಯೂ ಕಂಪ್ಯೂಟರಿನಲ್ಲಿ ಡಾಟಾ ಎಂಟ್ರಿ ಮಾಡಿ, ಕಾಗದದಲ್ಲಿ ಮಾತ್ರ ಖೊಟ್ಟಿ ವಾಹನಗಳನ್ನು ಸೃಷ್ಟಿಸಿ, ನಕಲಿ ಕಾಗದ ಪತ್ರ ತಯಾರಿಸಿ ಕಾರ್ಖಾನೆಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪಿಎಸೈ ರೇಣುಕಾ ಜಕನೂರ ಅವರು ತನಿಖೆ ಕೈಕೊಂಡಿದ್ದಾರೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.