G-20 ವಿ.ವಿ.ಕನೆಕ್ಟ್ ಫಿನಾಲೆ: ವಿದ್ಯಾರ್ಥಿಗಳು, ಯುವ ವೃತ್ತಿಪರರಿಗೆ ಪ್ರಧಾನಿ ಮೋದಿ ಆಹ್ವಾನ
Team Udayavani, Sep 25, 2023, 12:45 AM IST
ಹೊಸದಿಲ್ಲಿ: ಭಾರತ ಮಂಟಪದಲ್ಲಿ ಸೆ.26ರಂದು ನಡೆಯಲಿರುವ ಜಿ-20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯಲ್ಲಿ ಪಾಲ್ಗೊಳ್ಳುವಂತೆ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
ಲಿಂಕ್ಡ್ ಇನ್ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ ಒಂದು ವರ್ಷದಲ್ಲಿ ಜಿ-20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯು ಭಾರತದ ಯುವಜನತೆಯನ್ನು ಒಗ್ಗೂಡಿಸಿದೆ. ವರ್ಷವಿಡೀ ಜಾರಿಯಲ್ಲಿದ್ದ ಈ ಉಪಕ್ರಮ ನಂಬಲಾರದಷ್ಟು ಬದಲಾವಣೆ, ತೃಪ್ತಿಕರ ಫಲಿತಾಂಶ ನೀಡುವುದಲ್ಲದೇ, ನಮ್ಮ ದೇಶದ ಜನರು ಹೇಗೆ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆಂಬುದನ್ನು ಇಡೀ ಜಗತ್ತಿಗೆ ತೋರಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಜರುಗಿದರ ಬಗ್ಗೆ ಯುವಕರು ಸಂಪೂರ್ಣವಾಗಿ ಅರಿತಿದ್ದಾರೆ. 2047ರ ವೇಳೆಗೆ ನಮ್ಮ ಯುವಕರು ವೀಕ್ಷಿತ್ ಭಾರತ್ನ ಮುನ್ನಡೆಸಲು ಉಪಕ್ರಮ ಸಹಕರಿಸಿದೆ ಎಂದಿದ್ದಾರೆ.