
ಕೆಕೆಆರ್ ಆಲ್‌ಟೈಮ್ ಇಲೆವೆನ್‌ಗೆ ಗಂಭೀರ್ ನಾಯಕ
Team Udayavani, May 19, 2020, 6:25 AM IST

ಕೋಲ್ಕತಾ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಕೋಲ್ಕತಾ ನೈಟ್‌ರೈಡರ್ (ಕೆಕೆಆರ್) ಕೂಡ ಒಂದು. ಆರಂಭಿಕ ವರ್ಷದಿಂದಲೇ ಗೆಲ್ಲುವ ಫೇವರಿಟ್ ಎನಿಸಿಕೊಂಡ ತಂಡವಿದು. ಶಾರುಖ್ ಖಾನ್, ಸೌರವ್ ಗಂಗೂಲಿ, ಗೌತಮ್ ಗಂಭೀರ್ ಅವರ ಸಾಂಗತ್ಯದಿಂದ ಇದು ಬಲಾಡ್ಯವಾಗಿ ಬೆಳೆದದ್ದು ಇತಿಹಾಸ.
2012 ಮತ್ತು 2014ರಲ್ಲಿ ಕಿರೀಟ ಏರಿಸಿಕೊಂಡ ಕೆಕೆಆರ್‌ನ ಸಾರ್ವಕಾಲಿಕ ಶ್ರೇಷ್ಠ ತಂಡವೊಂದು ಹೇಗಿದ್ದೀತು ಎಂಬ ಕುತೂಹಲ ಎಲ್ಲರದಾಗಿದೆ. ಸ್ವತಃ ಫ್ರಾಂಚೈಸಿಯೇ ಇಂಥದೊಂದು ತಂಡವನ್ನು ಪ್ರಕಟಿಸಿದೆ. ಕೋಲ್ಕತಾ ಎನ್ನುವುದು “ದಾದಾ’ ಸೌರವ್ ಗಂಗೂಲಿಯ ಆಸ್ತಿಯಾದರೂ “ಕೆಕೆಆರ್ ಕನಸಿನ ತಂಡ’ಕ್ಕೆ ಸಾರಥಿಯಾಗಿರುವವರು ಗೌತಮ್ ಗಂಭೀರ್ ಎಂಬುದು ವಿಶೇಷ. ಕೆಕೆಆರ್ ಇತಿಹಾಸದಲ್ಲಿ ಅತ್ಯಧಿಕ ರನ್, ಅರ್ಧ ಶತಕ, ಅತೀ ಹೆಚ್ಚು ಗೆಲುವು, 2 ಸಲ ಚಾಂಪಿಯನ್ ಪಟ್ಟದ ಗೌರವ… ಹೀಗೆ ಸಾಗುತ್ತದೆ ಗಂಭೀರ್ ಸಾಹಸ.
ಕನ್ನಡಿಗರಾದ ರಾಬಿನ್ ಉತ್ತಪ್ಪ (91 ಪಂದ್ಯಗಳಿಂದ 2,649 ರನ್), ಮನೀಷ್ ಪಾಂಡೆ (80 ಪಂದ್ಯ, 1,442 ರನ್), ವಿಶ್ವ ದರ್ಜೆಯ ಆಲ್‌ರೌಂಡರ್ ಜಾಕ್ ಕ್ಯಾಲಿಸ್, ಬಿಗ್ ಹಿಟ್ಟರ್ ಆಂಡ್ರೆ ರಸೆಲ್, ಮಿಸ್ಟರಿ ಸ್ಪಿನ್ನರ್ ಸುನೀಲ್ ನಾರಾಯಣ್ ಅವರೆಲ್ಲ ಈ ತಂಡದಲ್ಲಿ ಸ್ಥಾನ ಸಂಪಾದಿಸಿದ ಪ್ರಮುಖರು.
ಕೆಕೆಆರ್ ಆಲ್ ಟೈಮ್ ಇಲೆವೆನ್: ಗೌತಮ್ ಗಂಭೀರ್ (ನಾಯಕ), ರಾಬಿನ್ ಉತ್ತಪ್ಪ, ಜಾಕ್ ಕ್ಯಾಲಿಸ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಯೂಸುಫ್ ಪಠಾಣ್, ಸುನೀಲ್ ನಾರಾಯಣ್, ಆಂಡ್ರೆ ರಸೆಲ್, ಪೀಯೂಷ್ ಚಾವ್ಲಾ, ಎಲ್. ಬಾಲಾಜಿ ಮತ್ತು ಮಾರ್ನೆ ಮಾರ್ಕೆಲ್.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
