ರಚನೆಯಾಗಿ ಎಂಟು ವರ್ಷಕ್ಕೇ ಸೋಂದಾ ಗ್ರಾಪಂಗೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ
Team Udayavani, Mar 30, 2023, 6:39 PM IST
ಶಿರಸಿ: ರಚನೆಯಾಗಿ ಎಂಟೇ ವರ್ಷದಲ್ಲಿ ತಾಲೂಕಿನ ಸೋಂದಾ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದೆ.
ಉದ್ಯೋಗ ಖಾತ್ರಿ, 15 ನೇ ಹಣಕಾಸು ಯೋಜನೆ , ಕರ ವಸೂಲಿ, ಕೋವಿಡ್ ನಿರ್ವಹಣೆ ಮುಂತಾದ ಕಾರ್ಯಕ್ರಮಗಳ ಪ್ರಗತಿಯನ್ನು ಆಧರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2021-22 ನೇ ಸಾಲಿನ ಪುರಸ್ಕಾರಕ್ಕೆ ಸೋಂದಾವನ್ನು ಆಯ್ಕೆ ಮಾಡಿದೆ.
ಹುಲೇಕಲ್ ಗ್ರಾಮ ಪಂಚಾಯಿತಿಯಿಂದ ಭಾಗವಾಗಿ 2015 ರಲ್ಲಿ ಪ್ರತ್ಯೇಕ ಸೋಂದಾ ಗ್ರಾಪಂ ರಚನೆಯಾಯಿತು. ಒಟ್ಟು 4 ಕಂದಾಯ ಗ್ರಾಮಗಳಿದ್ದು, 2800 ರಷ್ಟು ಜನಸಂಖ್ಯೆಯಿತಿದೆ. ಎಂಟು ಜನ ಚುನಾಯಿತ ಸದಸ್ಯರಿದ್ದಾರೆ. ಮಠ, ಮಂದಿರಗಳಂಥ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ, ನೈಸರ್ಗಿಕ ಪ್ರವಾಸಿ ತಾಣಗಳನ್ನು ಹೊಂದಿದ ಸುಂದರ ಗ್ರಾಮ ಇದಾಗಿದೆ.
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ, ಶಿರಸಿ ತಾಲೂಕು ಪಂಚಾಯಿತಿ ಮಾರ್ಗದರ್ಶನದಲ್ಲಿ ಸ್ವಚ್ಛ ಭಾರತ ಮಿಷನ್ ಸಹಾಯಧನದೊಂದಿಗೆ ಗ್ರಾಮದ ಸೋದೇ ವಾದಿರಾಜ ಮಠದಲ್ಲಿ ರಾಜ್ಯದ ಮೊದಲ ಸಮುದಾಯ ಗೋಬರ್‌ಧನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿನ ಮಾದರಿಯನ್ನು ಆಧರಿಸಿ ಜಿಲ್ಲೆಯ ಹಾಗೂ ರಾಜ್ಯದ ಇತರೆಡೆ ಈ ಘಟಕಗಳು ಈಗ ನಿರ್ಮಾಣವಾಗುತ್ತಿವೆ. ವಾದಿರಾಜ ಮಠ ಹಾಗೂ ಸದಾಶಿವ ದೇವಸ್ಥಾನದಲ್ಲಿ ತಲಾ 3 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಹುಲೇಕಲ್ ಗ್ರಾಪಂ ಸಹಯೋಗದೊಂದಿಗೆ ಸಮರ್ಪಕ ಘನ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
2021-22 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 4 ಸಾವಿರ ಮಾನವದಿನಗಳ ಗುರಿ ಹೊಂದಲಾಗಿತ್ತು. 9200 ಮಾನವದಿನವನ್ನು ಬಳಸಿಕೊಳ್ಳುವ ಮೂಲಕ ಗ್ರಾಪಂ ಗುರಿ ಮೀರಿ ಸಾಧನೆ ಮಾಡಿದೆ. ಕೋವಿಡ್ ಸಂಕಷ್ಟ ಕಾಲದಲ್ಲೂ 5.6 ಲಕ್ಷ ರೂ. ಸಂಪೂರ್ಣ ತೆರಿಗೆ (ಶೇ.100) ರಷ್ಟು ವಸೂಲಿ ಮಾಡಲಾಗಿತ್ತು. ಅಲ್ಲದೆ, 15 ನೇ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಗ್ರಾಪಂ ತಾಲೂಕಿನ ಇತರ ಗ್ರಾಪಂಗಳಿಗೆ ಮಾದರಿಯಾಗಿತ್ತು. ಕೋವಿಡ್ ಸಂದರ್ಭದಲ್ಲಿ ಮನೆಗಳಿಗೆ ತರಕಾರಿ, ಔಷಽಗಳನ್ನು ತಲುಪಿಸುವುದು, ಆರೋಗ್ಯ ಸೇವೆ ಒದಗಿಸಿದ್ದು, ಸೇರಿ ಉತ್ತಮ ನಿರ್ವಹಣೆಯನ್ನೂ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ.
ಉಪಾಧ್ಯಕ್ಷರು, ಎಲ್ಲ ಸದಸ್ಯರು, ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಹಾಗೂ ಮುಖ್ಯವಾಗಿ ಜನರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಗಾಂಧಿ ಗ್ರಾಮ ಪುರಸ್ಕಾರದ ಮೂಲಕ ನಮ್ಮ ಕಾರ್ಯಕ್ಕೆ ಮನ್ನಣೆ ದೊರಕಿದಂತಾಗಿದೆ. ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಸಾಧನೆ ಮಾಡಲು ಹುಮ್ಮಸ್ಸು ಬಂದಿದೆ.
~ಮಮತಾ ಚಂದ್ರರಾಜ ಜೈನ್ , ಗ್ರಾ.ಗ್ರಾಪಂ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhatkal; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ
Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದು ಕಾಂಗ್ರೆಸ್ ಸರಕಾರದಿಂದ ಅಪರಾಧ: ಕಾಗೇರಿ
Bhatkala: ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ
Bhatkal: ತಿರುಪತಿಗೆ ನೇರ ರೈಲು ಸಂಪರ್ಕದಿಂದ ಜನರಿಗೆ ಅನುಕೂಲ: ಎಸ್.ಎಸ್. ಕಾಮತ್
ನವರಾತ್ರಿ ಉತ್ಸವದಲ್ಲಿ ಗಮನಸೆಳೆದ ಕಾಂತಾರ ಖ್ಯಾತಿಯ ಮಾನಸಿ ನೇತೃತ್ವದ ಸಾಂಸ್ಕೃತಿಕ ಕಾರ್ಯಕ್ರಮ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.