ಪೀರಸಾಬನ ಲಾರಿ ಹತ್ತಿಕೊಂಡು ಗಂಗಾವತಿಗೆ ಬಂದವನನ್ನು ಕನ್ನಡಭಾಷೆ ಸಮ್ಮೇಳನಾಧ್ಯಕ್ಷನನ್ನಾಗಿಸಿದೆ

ಅನ್ನ ಕೊಡುವ ಭಾಷೆಯ ಜತೆಗೆ ಮಾತೃಭಾಷೆ ಕನ್ನಡಕ್ಕೂ ಮೊದಲ ಆದ್ಯತೆ ಇರಲಿ

Team Udayavani, Mar 5, 2023, 2:54 PM IST

5—gangavathi

ಗಂಗಾವತಿ: ಪೀರ ಸಾಬನ ಲಾರಿಯಲ್ಲಿ ತಾವರಗೇರಿಯಿಂದ ಗಂಗಾವತಿಗೆ ಬಂದವನ್ನು ಕನ್ನಡ ಭಾಷೆ ಶಿಕ್ಷಕ ವೃತ್ತಿ ನೀಡಿ ಇದೀಗ ಕನ್ನಡ ಸಾಹಿತ್ಯದ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನೀಡಿದ್ದು ಕನ್ನಡ ಭಾಷೆಗೆ ಮನುಷ್ಯನ ಬದುಕನ್ನು ರೂಪಿಸುವ ಶಕ್ತಿ ಇದೆ ಎಂದು ಗಂಗಾವತಿ ತಾಲೂಕು  8 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿ.ಎಚ್.ನಾರಿನಾಳ ಹೇಳಿದರು.

ಅವರು ತಮ್ಮ ನಿವಾಸದಲ್ಲಿ ಉದಯವಾಣಿ ಜತೆ ಮಾತನಾಡಿ, ಕನ್ನಡ ಭಾಷೆ ಮತ್ತು ಕರುನಾಡಿನ ಮಾತೃ ಹೃದಯ ಬಹಳ ದೊಡ್ಡದು ಕನ್ನಡವನ್ನು ಮನಸ್ಸಿನಿಂದ ಪ್ರೀತಿಸಿದರೆ ಅತ್ಯುನ್ನತ ಸ್ಥಾನಕ್ಕೇರುವುದು ಖಚಿತ. ಅನ್ನ ಕೊಡುವ ಭಾಷೆಯ ಜತೆಗೆ ಮಾತೃಭಾಷೆ ಕನ್ನಡವನ್ನು ಮರೆತರೆ ಭವಿಷ್ಯ ಕಾಣಿಸದು ಆದ್ದರಿಂದ ಪ್ರತಿ ಹಂತದಲ್ಲೂ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದರು.

ಉದ್ಯೋಗ ಮತ್ತಿತರ ಕಾರಣಕ್ಕೆ ಇಂಗ್ಲೀಷ್ ಕಲಿಯುವುದು ಅನಿವಾರ್ಯವಾಗಿದೆ. ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವುದು ಸರಿಯಾದ ಕ್ರಮವಲ್ಲ.ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುವ ರಾಜಕಾರಣಿ ಅಥವಾ ಸರಕಾರಗಳು ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕನ್ನಡ ಶಾಲೆಗಳಲ್ಲ. ಗುಣಾತ್ಮಕ ಕಲಿಕೆಗೆ ಆದ್ಯತೆ ನೀಡಬೇಕು. ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ಮಕ್ಕಳನ್ನು ಪಾಲಕರು ಶಾಲೆಗೆ ದಾಖಲಿಸುವಂತೆ ಮಾಡಬೇಕು. ಸರಕಾರಿ ನೌಕರರು ರಾಜಕಾರಣಿಗಳ ಮಕ್ಕಳು ಸರಕಾರಿ ಶಾಲೆಗಳಲ್ಲಿ ಓದುವ ವಾತಾವರಣ ಸೃಷ್ಠಿಯಾಗಬೇಕು. ಸಮ್ಮೇಳನದ ಹೆಸರಿನಲ್ಲಿ ಅದ್ದೂರಿತನ ಮೆರೆಯದೇ ಜನರ ಬದುಕನ್ನು ಹಸನು ಮಾಡುವ ಗೋಷ್ಠಿ, ವಿಚಾರ ಮಂಥನಗಳ ಕಾರ್ಯ ಹೆಚ್ಚಾಗಬೇಕು ಎಂದರು.

ವೃತ್ತಿಪರ ಬರಹಗಾರರು, ಲೇಖಕರು ಕಸಾಪ ಚುಕ್ಕಾಣಿ ಹಿಡಯುವಂತಾಗಬೇಕು. ಇತ್ತೀಚೆಗೆ ರಾಜಕೀಯ ನಿರಾಶ್ರಿತರು ಕಸಾಪದಲ್ಲಿ ಅಧಿಕಾರ ಪಡೆಯುತ್ತಿರುವುದು ವಿಷಾದದ ಸಂಗತಿಯಾಗಿದ್ದು ಇದು ಹೋಗಬೇಕು. ಕಸಾದ ಸದಸ್ಯತ್ವ ಪಡೆಯಲು ಕೆಲ ನಿಯಮಗಳು ಅಗತ್ಯವಾಗಿವೆ ಎಂದರು ಹೇಳಿದರು.

ಅನುಷ್ಠಾನ ಅಗತ್ಯ: ಸಾಹಿತ್ಯ ಸಮ್ಮೇಳನಗಳಲ್ಲಿ ಸರ್ವಾಧ್ಯಕ್ಷರ ಭಾಷಣ ಮತ್ತು ಸಮ್ಮೇಳನದ ನಿರ್ಣಯಗಳನ್ನು ಸರಕಾರ ತಪ್ಪದೇ ಅನುಷ್ಠಾನ ಮಾಡಬೇಕು. ಗಂಗಾವತಿ ಭತ್ತದ ಕಣಜವಾಗಿತ್ತು. ಜಾಗತೀಕರಣದ ಪರಿಣಾಮ ರೈಸ್‌ಗಳು ಬಂದ್ ಆಗಿದ್ದು ಇಲ್ಲಿಯ ಜನ ಉದ್ಯೋಗಕ್ಕಾಗಿ ಅನ್ಯ ಊರುಗಳಿಗೆ ಹೋಗುವ ಸ್ಥಿತಿಯುಂಟಾಗಿದೆ ಎಂದರು.

ಕಿಷ್ಕಿಂದಾ ಅಂಜನಾದ್ರಿ, ಪಂಪಾಸರೋವರ, ಆನೆಗೊಂದಿ, ಸಾಣಾಪೂರ ಸೂರ್ಯೋದಯ, ಸೂರ್ಯಾಸ್ತದ ದೃಶ್ಯಗಳು, ಸಾಣಾಪೂರ ಫಾಲ್ಸ್., ಲೇಕ್(ಕೆರೆ), ಮೋರ್ಯರ ಬೆಟ್ಟ, ಗಂಡುಗಲಿ ಕುಮಾರ ರಾಮನ ಬೆಟ್ಟ, ಹೇಮಗುಡ್ಡ, ಕನಕಗಿರಿ, ವಾಣಿಭದ್ರೇಶ್ವರ, ದೇವಘಾಟ ಅಮೃತೇಶ್ವರ  ಹಾಗೂ ಕಿಷ್ಕಿಂಧಾ ಏಳುಬೆಟ್ಟ ಪ್ರದೇಶದ ವೀಕ್ಷಣೆಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಪ್ರಚಾರ ಮಾಡುವ ಮೂಲಕ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಠಿ ಯೋಜನೆ ಆರಂಭಿಸಬೇಕೆಂದರು.

ಸಾಹಿತಿ ಅಥವಾ ಬರಹಗಾರನಿಗೆ ಸಮುದಾಯದ ಕಾಳಜಿ ಅಗತ್ಯವಾಗಿದ್ದು ಶೋಷಿತರು ದೀನ ದಲಿತ ಬದುಕಿನ ಕಷ್ಟ ಸುಖಗಳ ಕುರಿತು ಪರಿಜ್ಞಾನವಿರಬೇಕು. ಗಂಗಾವತಿಯಲ್ಲಿ ಜರುಗಿದ ಪೌರಕಾರ್ಮಿಕ ಖಾಯಂ ಅಥವಾ ಸರಕಾರದಿಂದ ನೇರ ವೇತನ ಹೋರಾಟದಲ್ಲಿ ಕಾರ್ಮಿಕ ಮುಖಂಡರು, ನಾನು ಸೇರಿ ಸಾಹಿತಿಗಳ ಬೆಂಬಲ ಸಿಕ್ಕಿದ್ದರಿಂದ ರಾಜ್ಯದ 35 ಸಾವಿರ ಪೌರಕಾರ್ಮಿಕರಿಗೆ ಸೇವಾ ಭದ್ರತೆ ಲಭಿಸಿದ್ದು ಹೋರಾಟಗಾರರಿಗೆ ಸಾಹಿತಿಗಳಿಗೆ ಸಂದ ಜಯವಾಗಿದೆ. ಕನ್ನಡ ಭಾಷೆ ಅತ್ಯಂತ ಸೊಗಸಾಗಿದ್ದು ವಿದ್ಯಾರ್ಥಿ, ಯುವ ಜನರು ಮೊಬೈಲ್ ಗೀಳು ಬಿಟ್ಟು ಹೆಚ್ಚೆಚ್ಚು ಓದಬೇಕು. ಕುವೆಂಪು, ತೇಜಸ್ವಿ, ಕಾರ್ನಾಡ್, ಅನಂತಮೂರ್ತಿ, ಬಸವಣ್ಣ, ಡಾ|ಬಿ.ಆರ್.ಅಂಬೇಡ್ಕರ್ ಸೇರಿ ವಿಶ್ವದ ಕ್ರಾಂತಿಗಳ ಕುರಿತು ಅಧ್ಯಾಯನ ಮಾಡುವ ಮೂಲಕ ಕನ್ನಡ ನೆಲ, ಜಲ ಮತ್ತು  ಭಾಷೆಯನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ.  –ಸಿ.ಎಚ್.ನಾರಿನಾಳ  ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.