Garba: ವಿದೇಶದಲ್ಲೂ ಗರ್ಬಾ ನೃತ್ಯ ವೈರಲ್
Team Udayavani, Dec 9, 2023, 12:32 AM IST
ಇತ್ತೀಚೆಗಷ್ಟೇ ಯುನೆಸ್ಕೋ ಪಾರಂಪರಿಕ ಸಂಸ್ಕೃತಿ ಪಟ್ಟಿಗೆ ಸೇರ್ಪಡೆಗೊಂಡ ಭಾರತದ ಗುಜರಾತಿನ ಗರ್ಬಾ ನೃತ್ಯ ಇದೀಗ ವಿದೇಶಗಳಲ್ಲೂ ಮನೆ ಮಾತಾಗಿದೆ. ಅಲ್ಲದೇ ಗರ್ಬಾ ಯುನೆಸ್ಕೋ ಸೇರ್ಪಡೆಯನ್ನು ಸಂಭ್ರಮಿಸಿ ವಿದೇಶಿ ನೆಲದಲ್ಲೇ ಭಾರತೀಯರು ಹಜ್ಜೆ ಹಾಕಿದ್ದು, ಆ ವೀಡಿಯೋಗಳು ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್, ನ್ಯೂಜೆರ್ಸಿ ನಗರಗಳಲ್ಲಿ ಭಾರತೀಯರ ತಂಡ ಗರ್ಬಾ ನೃತ್ಯಗಳನ್ನು ಪ್ರದರ್ಶಿದೆ. ಗುಜ ರಾತಿನ ಸಾಂಪ್ರದಾಯಿಕ ದಿರಿಸಿನಲ್ಲೇ ಕಂಗೊಳಿಸಿದ ನೃತ್ಯಗಾರ ರನ್ನು ರಸ್ತೆ ಬದಿಯಲ್ಲಿದ್ದ ವಿದೇಶಿಗರು ಹುರಿದುಂಬಿಸಿ ಫೋಟೋ ಗಳನ್ನು ತೆಗೆದುಕೊಂಡಿದ್ದಾರೆ. ಹಲವರು ವೀಡಿಯೋ ಗಳನ್ನು ಮಾಡುತ್ತಾ ಸಂಭ್ರಮಿಸಿದರೆ ಇನ್ನೂ ಕೆಲವು ವಿದೇಶಿಗರು ತಾವೂ ಗರ್ಬಾ ನೃತ್ಯ ಕಲಿಯುವ ಆಸಕ್ತಿ ತೋರಿ ಪ್ರಯತ್ನ ಕೂಡ ಮಾಡಿದ್ದಾರೆ. ಈ ಫೋಟೋ ವೀಡಿಯೋಗಳನ್ನು ಎಕ್ಸ್ನಲ್ಲಿ ಇಂಡಿಯಾ ಇನ್ ನ್ಯೂಯಾರ್ಕ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದ್ದು, ಜನರಿಂದ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ