ಟಾಪ್ 10 ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಔಟ್!
4ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ
Team Udayavani, Feb 1, 2023, 7:30 AM IST
ನವದೆಹಲಿ:ಅಮೆರಿಕದ ಹಿಂಡನ್‌ಬರ್ಗ್ ಸಂಶೋಧನಾ ವರದಿಯ ಪರಿಣಾಮವೆಂಬಂತೆ ಅದಾನಿ ಸಮೂಹ ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ ಅವರು “ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿ’ಯಿಂದ ಹೊರಬಿದ್ದಿದ್ದಾರೆ.
ಮೂರು ದಿನಗಳಲ್ಲಿ ಅದಾನಿ ಸಂಪತ್ತಿನಲ್ಲಿ 34 ಶತಕೋಟಿ ಡಾಲರ್(2.78 ಲಕ್ಷ ಕೋಟಿ ರೂ.) ಕೊಚ್ಚಿಹೋಗಿದೆ. ಹೀಗಾಗಿ, ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದಲ್ಲಿ ಅದಾನಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶ್ರೀಮಂತರ ಪೈಕಿ ಟಾಪ್ 4ನೇ ಸ್ಥಾನದಲ್ಲಿದ್ದ ಅದಾನಿ ಈಗ 11ನೇ ಸ್ಥಾನಕ್ಕೆ ಇಳಿದಿದ್ದಾರೆ. ಪ್ರಸ್ತುತ ಅವರ ಸಂಪತ್ತಿನ ಮೌಲ್ಯ 84.4 ಶತಕೋಟಿ ಡಾಲರ್(6.90 ಲಕ್ಷ ಕೋಟಿ ರೂ.) ಆಗಿದ್ದು, ಅವರ ಪ್ರತಿಸ್ಪರ್ಧಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು (82.2 ಶತಕೋಟಿ ಡಾಲರ್) ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.
ಎಫ್ ಪಿಒ ಚಂದಾದಾರಿಕೆ ಪೂರ್ಣ
ಅದಾನಿ ಎಂಟರ್‌ಪ್ರೈಸಸ್ ಬಿಡುಗಡೆ ಮಾಡಿದ್ದ ಎಫ್ ಪಿಒ(ಫಾಲೋಆನ್ ಪಬ್ಲಿಕ್ ಆಫರ್) ಮಂಗಳವಾರ ಪೂರ್ಣಪ್ರಮಾಣದ ಚಂದಾದಾರಿಕೆ ಪಡೆದಿದೆ. ಒಟ್ಟು 20 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಕಂಪನಿ ಬಿಡುಗಡೆ ಮಾಡಿತ್ತು. ದೊಡ್ಡ ದೊಡ್ಡ ಕಂಪನಿಗಳು ಮತ್ತು ಸಾಂಸ್ಥಿಕ ಹೂಡಿಕೆದಾರರು ಈ ಷೇರುಗಳನ್ನು ಖರೀದಿಸಿದ್ದಾರೆ. 4.55 ಕೋಟಿ ಷೇರುಗಳನ್ನು ಮಾರಾಟಕ್ಕಿಟ್ಟಿದ್ದರೆ, ಅದಕ್ಕಿಂತಲೂ ಹೆಚ್ಚು ಅಂದರೆ 4.62 ಕೋಟಿ ಷೇರುಗಳಿಗೆ ಬೇಡಿಕೆ ಬಂದಿತ್ತು. ಆದರೆ, ಚಿಲ್ಲರೆ ಹೂಡಿಕೆದಾರರು ಮತ್ತು ಕಂಪನಿಯ ಉದ್ಯೋಗಿಗಳು ಈ ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್
Iran-Israel Clash: ಯುದ್ದದ ಪರಿಣಾಮ- ಷೇರುಪೇಟೆ ಸೂಚ್ಯಂಕ ಭಾರೀ ಕುಸಿತ, ತೈಲ ಬೆಲೆ ಏರಿಕೆ
Demand Gold: ಚಿನ್ನ ನೀನೇಕೆ ಇಷ್ಟು ತುಟ್ಟಿ?; ಬಂಗಾರ ಖರೀದಿ ಸಾಂಸ್ಕೃತಿಕ ಪರಂಪರೆಯ ಭಾಗ
Bank: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್
Stock Market: ಷೇರುಪೇಟೆ ಸಾರ್ವಕಾಲಿಕ ದಾಖಲೆ, ಮೊದಲ ಬಾರಿಗೆ 85,000 ಅಂಕ ದಾಟಿದ ಸೂಚ್ಯಂಕ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kalaburagi: ಅಧಿಕಾರಿಗಳಿಗೆ ಕೊಬ್ಬು ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್
Darshan Bail: ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ: ಕುತೂಹಲ
Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ
Bantwala: ಹುಲಿ ಕುಟುಂಬದಲ್ಲಿ ಆಕೆ ಬ್ಲ್ಯಾಕ್ ಟೈಗರ್!
Hasana:ಅನಾರೋಗ್ಯ: 3 ದಿನಗಳಿಂದ ನಿಂತಲ್ಲೇ ನಿಂತಿದ್ದ ಕಾಡಾನೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.