ಚೋಪ್ರಾ ಐಪಿಎಲ್ ತಂಡದಲ್ಲಿ ಗೇಲ್, ರಸೆಲ್ಗೆ ಜಾಗವಿಲ್ಲ
Team Udayavani, Jun 30, 2020, 6:00 AM IST
ಹೊಸದಿಲ್ಲಿ: ಭಾರತದ ಮಾಜಿ ಆರಂಭಕಾರ ಆಕಾಶ್ ಚೋಪ್ರಾ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವೊಂದನ್ನು ರಚಿಸಿದ್ದಾರೆ. ಆದರೆ ಇದರಲ್ಲಿ ವಿಂಡೀಸಿನ ಬಿಗ್ ಹಿಟ್ಟರ್ಗಳಾದ ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್ ಸ್ಥಾನ ಪಡೆದಿಲ್ಲ. ಮಹೇಂದ್ರ ಸಿಂಗ್ ಧೋನಿ ಈ ತಂಡದ ನಾಯಕರಾಗಿದ್ದಾರೆ.
“ಆರಂಭಿಕನಾಗಿ ನನ್ನ ಮೊದಲ ಆಯ್ಕೆ ಡೇವಿಡ್ ವಾರ್ನರ್. ಇವರು ಕ್ರಿಸ್ ಗೇಲ್ಗಿಂತ ಹೆಚ್ಚು ಸ್ಥಿರ ಪ್ರದರ್ಶನ ನೀಡು ಸಾಮರ್ಥ್ಯ ಹೊಂದಿದ್ದಾರೆ. ಗೇಲ್ ಸ್ಫೋಟಕ ಬ್ಯಾಟ್ಸ್ಮನ್ ನಿಜ. ಆದರೆ ವಾರ್ನರ್ ಕೂಡ ಯಾರಿಗೂ ಕಡಿಮೆ ಇಲ್ಲ. ಇವರು ನನ್ನ ಆಯ್ಕೆಯ ಮೊದಲ ವಿದೇಶಿ ಕ್ರಿಕೆಟಿಗ ಕೂಡ ಹೌದು’ ಎಂಬುದಾಗಿ ಆಕಾಶ್ ಚೋಪ್ರಾ ಆಯ್ಕೆ ಕುರಿತು ಹೇಳಿದ್ದಾರೆ.
ಆಕಾಶ್ ಚೋಪ್ರಾ ಐಪಿಎಲ್ ಇಲೆವೆನ್: ಡೇವಿಡ್ ವಾರ್ನರ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಬಿ ಡಿ ವಿಲಿಯರ್, ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್), ಸುನೀಲ್ ನಾರಾಯಣ್, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ.