Goa ಸ್ಮಾರ್ಟ್ ಸಿಟಿ ಯೋಜನೆಯ ತನಿಖೆ ನಡೆಸಬೇಕು: ಕಾಂಗ್ರೆಸ್ ಒತ್ತಾಯ


Team Udayavani, Jun 1, 2023, 6:03 PM IST

1-sadasd

ಪಣಜಿ: ರಾಜಧಾನಿ ಪಣಜಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದ್ದು, ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರವರು ಇಡೀ ಯೋಜನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಗೋವಾ  ಕಾಂಗ್ರೆಸ್ ಮುಖಂಡ ಎಲ್ವಿಸ್ ಗೋಮ್ಸ್ ಒತ್ತಾಯಿಸಿದ್ದಾರೆ.

ಪಣಜಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮ ವಿಭಾಗದ ಅಧ್ಯಕ್ಷ ಅಮರನಾಥ ಪಣಜಿಕರ್, ಪ್ರಧಾನ ಕಾರ್ಯದರ್ಶಿ ವಿಜಯ್ ಭಿಕೆ, ಪಣಜಿ ಮಹಿಳಾ ಬಳಗದ ಅಧ್ಯಕ್ಷೆ ಲವಿನಿಯಾ ಡಿಕೋಸ್ತಾ ಉಪಸ್ಥಿತರಿದ್ದರು.

ಪಣಜಿ ಸ್ಮಾರ್ಟ ಸಿಟಿ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದು ಗೋಮ್ಸ್ ಹೇಳಿದರು. ಭ್ರಷ್ಟಾಚಾರವನ್ನು ಸಾಬೀತುಪಡಿಸುವ ಧೈರ್ಯವನ್ನು ಬಿಜೆಪಿ ಸರ್ಕಾರ ತೋರಿಸಬೇಕು. ಕೇಂದ್ರ ಸಚಿವ ಪುರಿ ಅವರು ಸರ್ಕಾರದ ಮುಖವಾಣಿಯಾಗಿರುವ ಪ್ರೆಸ್ ಇನ್‍ಫರ್ಮೇಷನ್ ಬ್ಯೂರೋವನ್ನು ಬಳಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಅವರು ವಾಸ್ತವವಾಗಿ ಪಣಜಿಯ ಜನರನ್ನು ಭೇಟಿ ಮಾಡಲು ವಿಫಲರಾಗಿದ್ದಾರೆ ಮತ್ತು ಸ್ಮಾರ್ಟ್ ಸಿಟಿಯ ನಡೆಯುತ್ತಿರುವ ಕಳಪೆ ಕಾಮಗಾರಿಗಳಿಂದ ಜನತೆ ಹೇಗೆ ಬಳಲುತ್ತಿದ್ದಾರೆ ಎಂದು ಕೇಳಲು ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಗರಾಭಿವೃದ್ಧಿ ಸಚಿವರು, ನಗರಾಭಿವೃದ್ಧಿ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ, ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ತಪ್ಪಿತಸ್ಥರು. ಅವರೇ ಪ್ರಮುಖ ಆರೋಪಿಗಳು. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸುವ ಧೈರ್ಯ ಬಿಜೆಪಿಗಿಲ್ಲ ಎಂದು ಆರೋಪಿಸಿದರು.

ಕಪ್ಪು ಬಾವುಟಗಳನ್ನು ಪ್ರದರ್ಶಿಸಲಾಗುವುದು
ಕಳಪೆ ಕಾಮಗಾರಿಯಿಂದ ಯಾರಿಗೆ ಲಾಭವಾಗುತ್ತದೆ ಎಂಬುದು ಗೊತ್ತಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಯನ್ನು ಮಾಧ್ಯಮಗಳು ಬಯಲಿಗೆಳೆದಿವೆ. ಈ ಸಚಿವರನ್ನು  ಸಂಪುಟದಿಂದ ತೆಗೆದುಹಾಕಬೇಕು. ಇನ್ನೊಮ್ಮೆ ಇಲ್ಲಿಗೆ ಬಂದರೆ ಕಪ್ಪು ಬಾವುಟ ತೋರಿಸುತ್ತೇವೆ ನಗರದಲ್ಲಿ ಡೇಂಜರ್ ಝೋನ್ ಗಳು ಎಲ್ಲಿವೆ? ಇದನ್ನು ತೋರಿಸಲು ನಾವು ಕಪ್ಪು ಬಾವುಟಗಳನ್ನು ನಿಮ್ಮೊಂದಿಗೆ ಒಯ್ಯುತ್ತೇವೆ ಎಂದು ಅಮರನಾಥ ಪಣಜಿಕರ್ ಹೇಳಿದರು.

ಕಾಂಗ್ರೆಸ್ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತದೆ ಮತ್ತು ಸ್ಮಾರ್ಟ್ ಸಿಟಿ ಭ್ರಷ್ಟಾಚಾರದ ಬಗ್ಗೆ ಮೌನವಾಗಿರುವುದಿಲ್ಲ. ನಾವು ಮಾಡಿರುವ ಕೆಲವು ಆರೋಪಗಳು ಆಧಾರ ರಹಿತವಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ನಾವು ಕೇಂದ್ರ ಸಚಿವ ಪುರಿ ಅವರನ್ನು ನಗರದ ಮೂಲಕ ನಡೆಯಲು ಕೇಳಿದ್ದೆವು. ಆದರೆ ಹಾಗೆ ಮಾಡದೆ ದೆಹಲಿಗೆ ಓಡಿಹೋದರು ಎಂದು ಅಮರನಾಥ ಪಣಜಿಕರ್ ಹೇಳಿದರು.

ಟಾಪ್ ನ್ಯೂಸ್

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

art of living

Art of Living: ಕಲಾರಾಧನೆಗೆ ಆರ್ಟ್‌ ಆಫ್ ಲಿವಿಂಗ್‌ ಸಾಮರಸ್ಯದ ವೇದಿಕೆ

chandrayaan 3………….

Fraud: ಚಂದ್ರಯಾನ-3 ಹೆಸರಿನಲ್ಲಿ 20 ಕೋಟಿ ರೂ. ವಂಚನೆ!

AADITYA L 1

Aditya L1: ಪ್ರಭಾವಲಯ ದಾಟಿದ ಆದಿತ್ಯ ಎಲ್‌1

train wheel ch

Railways: ಗಾಲಿಕುರ್ಚಿ ಬಳಸುವವರಿಗೆ ರೈಲಿನಲ್ಲಿ ರ್‍ಯಾಂಪ್‌

MODI IMP 3

ಮೋದಿ OBC ಅಸ್ತ್ರ: ಒಬಿಸಿಯಾಗಿದ್ದಕ್ಕೇ ನನ್ನ ಕಂಡರೆ ಕಾಂಗ್ರೆಸ್‌ಗೆ ದ್ವೇಷ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

police siren

Fraud: ಈರುಳ್ಳಿ ವ್ಯಾಪಾರಿಗೆ 75 ಲಕ್ಷ ರೂ. ವಂಚನೆ

tower

Mulki: ಮೊಬೈಲ್‌ ಟವರ್‌ ಮೇಲೇರಿ ಪ್ರತಿಭಟನೆ ?

swim

Drown: ಕೇರಳದ ವಯನಾಡ್‌ಗೆ ಪ್ರವಾಸ- ನೀರಿನಲ್ಲಿ ಮುಳುಗಿ ಯುವಕನ ಸಾವು

MOBILE FRAUD MONEY

OTP ಹೇಳಿ ಲಕ್ಷ ರೂ. ಕಳೆದುಕೊಂಡ ಕೂಲಿ ಕಾರ್ಮಿಕ

lok adalat

Bantwal: ಯುವಕನ ಕೊಲೆ ಪ್ರಕರಣ- ಇಬ್ಬರು ಆರೋಪಿಗಳಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.