Udayavni Special

ನವ್ಯ ಸಾಹಿತ್ಯದ ಹರಿಕಾರ ಮೊಗೇರಿ ಗೋಪಾಲಕೃಷ್ಣ ಅಡಿಗ


Team Udayavani, Nov 1, 2020, 5:00 AM IST

ನವ್ಯ ಸಾಹಿತ್ಯದ ಹರಿಕಾರ ಮೊಗೇರಿ ಗೋಪಾಲಕೃಷ್ಣ ಅಡಿಗ

ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಕರಾವಳಿಯ ಹಿರಿಯ ಸಾಹಿತಿಗಳನ್ನು ಸ್ಮರಿಸುವ ಪ್ರಯತ್ನವಿದು. “ಕನ್ನಡ ಕಟ್ಟಿದ ಹಿರಿಯರು’ ಸರಣಿ ಇಂದಿನಿಂದ ಪ್ರಕಟವಾಗುವುದು.

ಕುಂದಾಪುರ: ಕನ್ನಡ ಸಾರಸ್ವತ ಲೋಕದಲ್ಲಿ “ನವ್ಯ ಸಾಹಿತ್ಯದ ಹರಿಕಾರ’ ಎಂದೇ ಹೆಸರಾದವರು ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರು.

1918ರ ಫೆ. 18ರಂದು ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಮದ ಮೊಗೇರಿಯಲ್ಲಿ ಅಡಿಗರು ಜನಿಸಿದರು. ಹುಟ್ಟೂರಿ ನಲ್ಲಿ ಪ್ರಾಥಮಿಕ ಶಿಕ್ಷಣ, ಬೈಂದೂರಿನಲ್ಲಿ ಪ್ರೌಢಶಿಕ್ಷಣ ಪೂರೈಸಿ, ಉನ್ನತ ವ್ಯಾಸಂಗಕ್ಕೆ ಮೈಸೂರಿಗೆ ತೆರಳಿ ಪದವಿ, ಸ್ನಾತಕೋತ್ತರ ಪಡೆದರು. ಆಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡರು. ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ
ಸಲ್ಲಿಸುವ ಜತೆಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡರು.

1964ರಲ್ಲಿ ಸಾಗರದ ಲಾಲ್‌ ಬಹಾದ್ದೂರ್‌ ಕಾಲೇಜು, ಉಡುಪಿಯ ಪಿಪಿಸಿ ಕಾಲೇಜಿನ ಪ್ರಾಂಶುಪಾಲರಾಗಿ
ಸೇವೆ ಸಲ್ಲಿಸಿದ್ದರು. 1971ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಬೆಂಗಳೂರಿನಿಂದ ಸ್ಪರ್ಧಿ ಸಿದ್ದರು.

ನವ್ಯದ ಆದಿಕವಿ
ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯ ಎಂಬ ಹೊಸ ಸಂಪ್ರದಾಯ ಬೆಳೆಸಿದವರು ಅಡಿಗರು. ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಹೊಸ ರೂಪು ಕೊಟ್ಟವರು. ಹೊಸ ಸಂವೇದನೆ ಮತ್ತು ಹೊಸ ಅಭಿವ್ಯಕ್ತಿಯನ್ನು ಪ್ರತಿಪಾದಿಸಿದ್ದ ಅಡಿಗರು ಹೊಸ ತಲೆಮಾರಿನವರ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದರು. “ಸಾಕ್ಷಿ’ ಎಂಬ ಪತ್ರಿಕೆಯನ್ನು ಮುನ್ನಡೆಸಿದ್ದರು, ಸ್ವಾತಂತ್ರÂ ಹೋರಾಟಗಾರ, ಕವಿ, ಪ್ರಾಧ್ಯಾಪಕ, ಸಾಹಿತ್ಯ ಸಂಘಟಕ, ಹೋರಾಟಗಾರ, ರಾಜಕಾರಣಿ -ಹೀಗೆ ಬಹುಮುಖೀಯಾಗಿ ಗುರುತಿಸಿಕೊಂಡಿದ್ದರು.

1974ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಪ್ರಶಸ್ತಿಗೆ ಆಗ್ರಹ
ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದಿಸೆ ತೋರಿದ ಅಡಿಗರಿಗೆ ಸರಕಾರದಿಂದ ಸಿಗಬೇಕಾಗಿದ್ದ ಗೌರವ ಸಿಕ್ಕಿಲ್ಲ ಎನ್ನುವ ಕೊರಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಯೊಂದನ್ನು ಸ್ಥಾಪಿಸ ಬೇಕು ಎಂಬ ಆಗ್ರಹವಿದೆ. 2018ರಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಕೂಡ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಚರಿಸಲು ಮುಂದಾಗದಿರುವುದು ದುರಂತ.

ಹುಟ್ಟೂರಿನಲ್ಲಿ ಸ್ಮಾರಕವಿಲ್ಲ
ಇವರ ಹೆಸರಲ್ಲಿ ಹುಟ್ಟೂರು ಮೊಗೇರಿ ಯಲ್ಲಿಯೇ ಸ್ಮಾರಕ ನಿರ್ಮಿಸಬೇಕು ಎನ್ನುವ ಬೇಡಿಕೆ ಇದೆ. ಅದಕ್ಕಾಗಿ ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗ ಗುರುತಿಸಿದ್ದು, ಶಾಸಕರ ನೇತೃತ್ವದಲ್ಲಿ ಥೀಂ ಪಾರ್ಕ್‌ಗೆ ಪ್ರಯತ್ನಗಳು ನಡೆಯುತ್ತಿವೆೆ. ಕೆರ್ಗಾಲಿನಲ್ಲಿ ಅವರ ಸ್ಮಾರಕ ವಾಚ ನಾಲಯವಿದೆ. ಬೆಂಗಳೂರಿನ ಕರೀಸಂದ್ರದಲ್ಲಿ ಅಡಿಗರ ಹೆಸರಲ್ಲಿ ಕಿರು ಉದ್ಯಾನವನವಿದೆ.

ಸಾಹಿತ್ಯ ಸಾಧನೆ
1946ರಲ್ಲಿ ಪ್ರಕಟಗೊಂಡ “ಭಾವತರಂಗ’ ಅವರ ಮೊದಲ ಕವನ ಸಂಕಲನ. ಭೂಮಿಗೀತ, ವರ್ಧಮಾನ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚೆಂಡೆಮದ್ದಳೆ ಸೇರಿದಂತೆ 11 ಕವನ ಸಂಕಲನಗಳು, ಆಕಾಶದೀಪ, ಅನಾಥೆ ಎಂಬ ಕಾದಂಬರಿಗಳು, ಮಣ್ಣಿನ ವಾಸನೆ, ವಿಚಾರ ಪಥ, ಕನ್ನಡದ ಅಭಿಮಾನದಂತಹ ಅನೇಕ ವೈಚಾರಿಕ ಲೇಖನಗಳು ಅವರ ಸಾಹಿತ್ಯ ಕೃಷಿಯ ಫ‌ಲ.
ಸಾಹಿತ್ಯ ಸೇವೆಗಾಗಿ ಅಡಿಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೇರಳದ ಪ್ರತಿಷ್ಠಿತ ಕುಮಾರ್‌ ಸಮ್ಮಾನ್‌, ಮಧ್ಯಪ್ರದೇಶ ಸರಕಾರದ ಕಬೀರ್‌ ಸಮ್ಮಾನ್‌ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

bng-tdy-2

ಮನೆ ಮಾರಿಯಾದ್ರೂ ಪಕ್ಷ ಕಟ್ಟುತ್ತೇನೆ:ಎಚ್ ಡಿಕೆ

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’:ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ

‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’: ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ

ಭಾರತಕ್ಕಿಂದು ಗೆಲ್ಲಲೇಬೇಕಾದ ಒತ್ತಡ: ಟಾಸ್ ಗೆದ್ದ ಫಿಂಚ್, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ

ಭಾರತಕ್ಕಿಂದು ಗೆಲ್ಲಲೇಬೇಕಾದ ಒತ್ತಡ: ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್, ತಂಡದಲ್ಲಿ ಬದಲಾವಣೆ

ಮ್ಯಾಟ್ರಿಮೋನಿ ಹೆಸರಲ್ಲಿ 24.50 ಲಕ್ಷ ರೂ. ವಂಚನೆ: ಸೆರೆ

ಮ್ಯಾಟ್ರಿಮೋನಿ ಹೆಸರಲ್ಲಿ 24.50 ಲಕ್ಷ ರೂ. ವಂಚನೆ: ಸೆರೆ

ಚತ್ತೀಸ್ ಗಡ್ ನಲ್ಲಿ ಐಇಡಿ ದಾಳಿ: ಓರ್ವ ಸಿಆರ್ ಪಿಎಫ್ ಕಮಾಂಡೋ ಹತ್ಯೆ, 10 ಯೋಧರಿಗೆ ಗಾಯ

ಚತ್ತೀಸ್ ಗಡ್ ನಲ್ಲಿ ಐಇಡಿ ದಾಳಿ: ಓರ್ವ ಸಿಆರ್ ಪಿಎಫ್ ಕಮಾಂಡೋ ಹುತಾತ್ಮ, 10 ಯೋಧರಿಗೆ ಗಾಯ

ಮೀಸಲಾತಿಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಇಷ್ಟಲಿಂಗ ಕಳುಹಿಸಿ ಪ್ರತಿಭಟನೆ

ಮೀಸಲಾತಿಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಇಷ್ಟಲಿಂಗ ಕಳುಹಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಪಂಚಾಯತ್‌ ಮಟ್ಟದಲ್ಲಿ ನಿರ್ವಹಣೆ ಕೊರತೆ; ಸೊರಗುತ್ತಿವೆ ನೂರಾರು ಅಣೆಕಟ್ಟುಗಳು

ಪಂಚಾಯತ್‌ ಮಟ್ಟದಲ್ಲಿ ನಿರ್ವಹಣೆ ಕೊರತೆ; ಸೊರಗುತ್ತಿವೆ ನೂರಾರು ಅಣೆಕಟ್ಟುಗಳು

ಕೋವಿಡ್‌-19ರ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಕೋಟಿಲಿಂಗೇಶ್ವರ ದೇಗುಲ ಕೊಡಿ ಹಬ್ಬ: ಕೋವಿಡ್‌-19ರ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಹಿನ್ನೀರು ಮೀನುಗಾರಿಕೆ ಕೃಷಿ ಸಬ್ಸಿಡಿಗೆ 1 ಸಾವಿರ ಅರ್ಜಿ

ಹಿನ್ನೀರು ಮೀನುಗಾರಿಕೆ ಕೃಷಿ ಸಬ್ಸಿಡಿಗೆ 1 ಸಾವಿರ ಅರ್ಜಿ

ಮೊವಾಡಿ-ನಾಡ ಸೇತುವೆ: ಇನ್ನೂ ಆರಂಭಗೊಳ್ಳದ ಸಂಚಾರ

ಮೊವಾಡಿ-ನಾಡ ಸೇತುವೆ: ಇನ್ನೂ ಆರಂಭಗೊಳ್ಳದ ಸಂಚಾರ

MUST WATCH

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಹೊಸ ಸೇರ್ಪಡೆ

ಫ್ಯಾಂಟಮ್‌ಗಾಗಿ ಮತ್ತೆ ಜಿಮ್‌ನತ್ತ ಕಿಚ್ಚ

ಫ್ಯಾಂಟಮ್‌ಗಾಗಿ ಮತ್ತೆ ಜಿಮ್‌ನತ್ತ ಕಿಚ್ಚ

bng-tdy-2

ಮನೆ ಮಾರಿಯಾದ್ರೂ ಪಕ್ಷ ಕಟ್ಟುತ್ತೇನೆ:ಎಚ್ ಡಿಕೆ

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ದಿಡೀರ್‌ ಅಂತ ತಯಾರಿಸಬಹುದಂತ ನಿಂಬೆಹಣ್ಣಿನ ಸಾರು

ಚಳಿಗೆ ಹಿತಕರ: ದಿಢೀರ್‌ ಅಂತ ರುಚಿಯಾದ ನಿಂಬೆಹಣ್ಣಿನ ತಿಳಿ ಸಾರು ಮಾಡಿ…

ಹೊನ್ನಿನ ಹುಡುಗನ ಮಣ್ಣಿನ ಕನಸು…

ಹೊನ್ನಿನ ಹುಡುಗನ ಮಣ್ಣಿನ ಕನಸು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.