
ಬರ ನಿರ್ವಹಣೆಗೆ ಅಂತರ್ಜಲ ಸುಧಾರಣೆಯೇ ಪರಿಹಾರ: ಬೋಸರಾಜು
ಜಲ ಮೂಲಗಳ ಸಂರಕ್ಷಣೆ, ಕೆರೆಗಳ ಒತ್ತುವರಿ ತೆರವು, ಹೂಳೆತ್ತಲು ಕ್ರಮ
Team Udayavani, Sep 28, 2023, 12:22 AM IST

ಬೆಂಗಳೂರು: ಸರಕಾರಕ್ಕೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಗಳೆರಡನ್ನೂ ನಿರ್ವಹಿಸುವುದು ಸವಾಲಿನ ಸಂಗತಿ. ಪ್ರಸ್ತುತ ಬರ ನೀಗಲು ಜಲ ಮೂಲಗಳ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಸುಧಾರಣೆಯೇ ಪರಿಹಾರ. ರಾಜ್ಯದ 40 ಸಾವಿರ ಜಲಮೂಲಗಳ ಸಂರಕ್ಷಣೆ ಹಾಗೂ ಪುನಃಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅಭಿಪ್ರಾಯಪಟ್ಟರು.
“ಉದಯವಾಣಿ’ ಬೆಂಗಳೂರು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿವೃಷ್ಟಿ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ನೀರು ವ್ಯರ್ಥವಾಗುವುದಲ್ಲದೆ, ರೈತರ ಬೆಳೆ ನಷ್ಟ, ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗುತ್ತವೆ. ವ್ಯರ್ಥವಾಗುವ ನೀರನ್ನು ಹೇಗೆಲ್ಲ ಸದ್ಬಳಕೆ ಮಾಡಿ ಕೊಳ್ಳಬಹುದು ಎಂಬ ಆಲೋಚನೆ ಒಂದೆಡೆಯಿದ್ದರೆ, ಬರಗಾಲದಂತಹ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎಂಬ ಚಿಂತನೆಗಳೂ ಇನ್ನೊಂದೆಡೆ ಇವೆ. ಹೀಗಾಗಿ ಲಭ್ಯವಿರುವ ಜಲಮೂಲ ಗಳನ್ನು ಸಂರಕ್ಷಿಸಿದರೆ ಅಂತರ್ಜಲ ವೃದ್ಧಿಯಾಗಿ ಬರಗಾಲ ನಿರ್ವಹಣೆ ಸುಲಭವಾಗಲಿದೆ. ಈ ನಿಟ್ಟಿನಲ್ಲಿ ತಮ್ಮ ಸರಕಾರ ಕಾರ್ಯೋನ್ಮುಖವಾಗಿದೆ ಎಂದರು.
ಸದ್ಯಕ್ಕೆ ರಾಜ್ಯದ 195ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ಸಂಖ್ಯೆ ಮತ್ತಷ್ಟು ಏರಿಕೆಯೂ ಆಗಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ಕನ್ನ… 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು

ಸೋಲದೇವನಹಳ್ಳಿ: ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಡಿಕೆ ಶಿವಕುಮಾರ್

M.C Ashwath: ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವಥ್ ಗೆ ಮಾತೃ ವಿಯೋಗ

KHB ನಿವೇಶನ ಖಾಲಿ ಬಿಟ್ಟರೆ “ದಂಡ’ ಪ್ರಯೋಗ

Abortions ಮಾಡಿಸಿಕೊಂಡವರಿಗೂ ಕಂಟಕ; ಭ್ರೂಣ ಹತ್ಯೆ ಮಾಡಿಸಿಕೊಂಡವರ ಮಾಹಿತಿ ಸಂಗ್ರಹ
MUST WATCH
ಹೊಸ ಸೇರ್ಪಡೆ

Tamil Nadu ವಿ ಸೆಂಥಿಲ್ ಬಾಲಾಜಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

30 ರ ವಯಸ್ಸಿನಲ್ಲಿ ಮಾರಿ ಸೆಲ್ವರಾಜ್ ಸಹಾಯಕ ನಿರ್ದೇಶಕ ನಿಧನ: ಅತಿಯಾದ ಧೂಮಪಾನವೇ ಕಾರಣ?

T20 World Cup; ಸತತ ಮೂರನೇ ಬಾರಿಗೆ ಅರ್ಹತೆ ಪಡೆದ ನಮೀಬಿಯಾ

Gangavati: ಕಾಂತರಾಜ್ ವರದಿ ಅನುಷ್ಠಾನ,ಮುಸ್ಲಿಮರಿಗೆ ಶೇ.8 ರಷ್ಟು ಮೀಸಲಾತಿ ಕಲ್ಪಿಸಲು ಮನವಿ

Shirahatti: ಮಾಗಡಿ ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ