ಹೆಲ್ತ್ ಕಾರ್ಡ್‌ ವಿತರಣೆಯಲ್ಲಿ ಕಳಪೆ ಸಾಧನೆ : ಅಧಿಕಾರಿಗಳ ವಿರುದ ಡೀಸಿ ಗರಂ


Team Udayavani, Sep 10, 2020, 4:23 PM IST

ಹೆಲ್‌ ಕಾರ್ಡ್‌ ವಿತರಣೆಯಲ್ಲಿ ಕಳಪೆ ಸಾಧನೆ : ಅಧಿಕಾರಿಗಳ ವಿರುದ ಡೀಸಿ ಗರಂ

ಕೋಲಾರ: ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಲ್ತ್‌ ಕಾರ್ಡ್‌ ನೀಡುವಲ್ಲಿ ಕಳಪೆ ಸಾಧನೆ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ವಿವರ ಒದಗಿಸಿದ ನೋಡಲ್‌ ಅಧಿಕಾರಿ ಡಾ. ಎಸ್‌.ಸಿ.ನಾರಾಯಣ ಸ್ವಾಮಿ, ಜಿಲ್ಲೆಯಲ್ಲಿ 15.32 ಲಕ್ಷ ಜನ ಸಂಖ್ಯೆಯ ಪೈಕಿ 3.56 ಲಕ್ಷ ಮಂದಿಗೆ ಆರೋಗ್ಯ ಕಾರ್ಡ್‌ ನೀಡಲಾಗಿದೆ ಎಂದು ತಿಳಿಸಿದರು.

ಇಷ್ಟು ದಿನ ಏನು ಮಾಡುತ್ತಿದ್ದೀರಿ?: ಹೆಲ್ತ್‌ ಕಾರ್ಡ್‌ ನೀಡುವಲ್ಲಿ ಕಳಪೆ ಸಾಧನೆಗೆ ಗರಂ ಆದ ಡೀಸಿ ಇಷ್ಟು ಸಾಕಾ? ಜಿಲ್ಲೆಯಲ್ಲಿ 15 ಲಕ್ಷ ಜನಸಂಖ್ಯೆ ಪೈಕಿ 13 ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್‌ ಕುಟುಂಬಗಳಿವೆ. ಯೋಜನೆ ಬಂದು ಎರಡು ವರ್ಷವಾಯಿತು. ಇನ್ನೂ 4 ಲಕ್ಷ ಮಂದಿಗೂ ಕಾರ್ಡ್‌ ವಿತರಿಸಿಲ್ಲ ಎಂದರೆ ಏನು ಮಾಡುತ್ತಿದ್ದೀರಿ? ಗುರಿ ಇಟ್ಟುಕೊಂಡು ಕಾರ್ಡ್‌ ಮಾಡಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಈ ವೇಳೆ ನೋಡಲ್‌ ಅಧಿಕಾರಿ ನಾರಾಯಣಸ್ವಾಮಿ ಕೊರೊನಾದಿಂದಾಗಿ ಸಾಧ್ಯವಾಗಲಿಲ್ಲ, ಗ್ರಾಪಂಗಳಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿ ವಿತರಿಸಲು ಕ್ರಮ ವಹಿಸಬೇಕೆಂದು ನಿಮ್ಮಿಂದ ತಾಪಂ ಇಒಗೆ ನಿರ್ದೇಶನ ಹೋಗಬೇಕೆಂದು ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಡೀಸಿ, ಇನ್ನು ಮುಂದೆ ಕೊರೊನಾ ವಿಚಾರವನ್ನು ನೆಪವಾಗಿ ಇಟ್ಟುಕೊಂಡು ಹೇಳಬಾರದು, ಇಲಾಖಾ ಕಾರ್ಯಕ್ರಮ ನಡೆಸುತ್ತಿಲ್ಲವೇ, ಇಒಗೆ ಮಾಡೋದಕ್ಕೆ ಬೇಕಾದಷ್ಟು ಕೆಲಸ ಇದೆ. ನಿಮ್ಮ ಇಲಾಖೆ ಸಿಬ್ಬಂದಿ, ಅಧಿಕಾರಿ ಗಳನ್ನು ಇಟ್ಟುಕೊಂಡು ಕೆಲಸ ಮಾಡಿಸಿ ತಾಕೀತು ಮಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್‌, ಆಯುಷ್ಮಾನ್‌ ಭಾರತ್‌ ಜಿಲ್ಲಾ ನೋಡಲ್‌ ಅಧಿಕಾರಿ ಡಾ.ಎನ್‌.ಸಿ.  ನಾರಾಯಣಸ್ವಾಮಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರಾದೇಶಿಕ ಸಲಹೆಗಾರ ಡಾ.ರಾಜಣ್ಣ, ಜಿಲ್ಲಾ ಸಮನ್ವಯಾಧಿಕಾರಿ ಡಾ.ಗಿರೀಶ್‌ ಉಪಸ್ಥಿತರಿದ್ದರು.

ಜಾಲಪ್ಪ ಆಸ್ಪತ್ರೆ ವೈದ್ಯರ ವಿರುದ ಡೀಸಿ ಆಕ್ರೋಶ
ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಫಲಾನುಭವಿಗಳ ಚಿಕಿತ್ಸೆಗಾಗಿ ಹಣ ಅನುಮೋದನೆ ಆದರೂ ಹೆಚ್ಚುವರಿ ಹಣ ಪಾವತಿಸಿಕೊಂಡಿರುವ ಕುರಿತ ದೂರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ವೇಳೆ ಜಾಲಪ್ಪ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಸತ್ಯಭಾಮ, ಸರ್ಕಾರ ಪುಕ್ಕಟೆ ಚಿಕಿತ್ಸೆ ನೀಡಿ ಎನ್ನುತ್ತಿಲ್ಲ, ಹಣ ಕೊಡುತ್ತಿದೆ. ಆಯುಷ್ಮಾನ್‌ ಕಾರ್ಡ್‌ ಹೊಂದಿರುವವರಿಗೆ ಲಭ್ಯವಿರುವ ವೈದ್ಯಕೀಯ ಸೇವೆ ಉಚಿತವಾಗಿ ಒದಗಿಸದೆ ಹಣ ಯಾಕೆ ಕಟ್ಟಿಸಿಕೊಳ್ಳುತ್ತೀರಿ ಎಂದು ವೈದ್ಯ ಡಾ.ಅಭಿನಂದನ್‌ ಅವರನ್ನು ಪ್ರಶ್ನಿಸಿದರು.

ಇದು ಮೊದಲ ಸಭೆಯಾದ್ದರಿಂದ ವಿನಾಯಿತಿ ನೀಡುತ್ತೇನೆ, ಮುಂದೆ ಪ್ರತಿ ತಿಂಗಳು ಸಭೆ ನಡೆಸುತ್ತೇನೆ. ಈ ಸಂದರ್ಭದಲ್ಲೂ ದೂರುಗಳು ಬಂದರೆ ಸರ್ಕಾರದ ಗಮನಕ್ಕೆ ತಂದು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.

ಟಾಪ್ ನ್ಯೂಸ್

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Belthangady ಕಡಿರುದ್ಯಾವರ: ಕಾಡಾನೆ ದಾಂಧಲೆ

Belthangady ಕಡಿರುದ್ಯಾವರ: ಕಾಡಾನೆ ದಾಂಧಲೆ

Red Alert ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಂದುವರಿದ ಮಳೆ

Red Alert ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಂದುವರಿದ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ಲಾಭಾಂಶದ ಆಮಿಷ… ಮಹಿಳೆಗೆ ಆನ್‌ಲೈನ್‌ನಲ್ಲಿ 9.50 ಲಕ್ಷ ರೂ. ವಂಚನೆ

Fraud Case: ಲಾಭಾಂಶದ ಆಮಿಷ… ಮಹಿಳೆಗೆ ಆನ್‌ಲೈನ್‌ನಲ್ಲಿ 9.50 ಲಕ್ಷ ರೂ. ವಂಚನೆ

Governmnet-Emp

Government Employees; ಸರಕಾರದ ನಿಲುವುಗಳಿಗೆ ತಕ್ಕಂತೆ ಕೆಲಸ ಮಾಡಿ: ಸಿದ್ದರಾಮಯ್ಯ

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ

ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ

ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ

CM-siddu

Reservation for Job; ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು: ಸರ್ಕಾರ ಯೂಟರ್ನ್‌

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.