ಮನೆ ಮನೆಗೆ ಗಾಣದ ಎಣ್ಣೆ ವಾಹ್‌ ತಾಜಾ!


Team Udayavani, Jun 15, 2020, 5:18 AM IST

gaana yenne

ದೇಸೀ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯಬೇಕು, ಬಹುರಾಷ್ಟೀಯ ಕಂಪನಿಯ ಉತ್ಪನ್ನಕ್ಕೆ ಸರಿಸಮಾನ ಎಂಬಂಥ ವಸ್ತು- ಉತ್ಪನ್ನಗಳು ನಮ್ಮಲ್ಲಿಯೂ ತಯಾರಾಗಬೇಕು. ಆ ಮೂಲಕ, ಉದ್ಯೋಗ ಸೃಷ್ಟಿಗೆ ಕಾರಣ ಆಗಬೇಕು ಎಂಬ  ಮಾತು, ಈಗ ಎಲ್ಲೆಡೆ ಕೇಳಿಬರುತ್ತಿದೆ. ಅಂಥ ಸಂದರ್ಭದಲ್ಲಿಯೇ, ಮಂಡ್ಯದ ಎಂ.ಟೆಕ್‌ ಪದವೀಧರ ಕಮಲೇಶ್‌ ಮತ್ತು ಸಾಫ್ಟ್‌ವೇರ್‌ ಎಂಜಿನಿಯರ್‌ ಗಳಾದ ಶ್ರೀಕಾಂತ್‌, ಬಸವರಾಜು, ಸೌಮ್ಯ, ಮಹೇಶ್‌ ಕುಮಾರ್‌, ಮೇಘಶ್ರೀ ಮತ್ತು  ದೀಪಕ್‌ ಎಂಬುವರು ಸೇರಿಕೊಂಡು, ಗ್ರಾಸ್‌ ರೂಟ್‌ ಆರ್ಗ್ಯಾನಿಕ್ಸ್‌ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಗಾಣದಿಂದ ತೆಗೆದ ಅಡುಗೆ  ಎಣ್ಣೆಯನ್ನು ಮನೆಮನೆಗೆ ತಲುಪಿಸಿ, ಆರಂಭಿಕ ಯಶಸ್ಸು ಕಂಡಿರುವುದು ಈ ಸಂಸ್ಥೆಯ ಹೆಚ್ಚುಗಾರಿಕೆ.  ಈ ತಂಡದ ಮುಖ್ಯಸ್ಥರಾದ ಕಮಲೇಶ್‌ ಕೃಷಿ ಕುಟುಂಬದಿಂದ ಬಂದವರು. ಹಾಗಾಗಿ, ಕೃಷಿಕರು ಅನುಭವಿಸುವ ಕಷ್ಟ-ನಷ್ಟಗಳ ಅರಿವು ಸಾಕಷ್ಟು ಇತ್ತು. ಪದವಿಯ ನಂತರ, ಬೆಂಗಳೂರು ಸೇರಿದರೂ, ಊರಿಗೆ ವಾಪಸ್ಸಾಗಿ ಹತ್ತಿಪ್ಪತ್ತು  ಜನರಿಗೆ ಕೆಲಸ ನೀಡುವಂಥ ಕೃಷಿ ಉದ್ಯಮ ಆರಂಭಿಸಬೇಕು ಎಂಬ ಆಸೆ ಜೊತೆಯ ಲ್ಲಿಯೇ ಇತ್ತು.

ತಾಜಾ, ಪರಿಶುದ್ಧ ಎಣ್ಣೆ: ನಾವೆಲ್ಲಾ ಒಟ್ಟಾಗಿ, ಹಳ್ಳಿಗಳಲ್ಲಿ ಕಾಣಸಿಗುವ ಕೌಶಲ್ಯವನ್ನೇ ಬಳಸಿ, ಗಾಣದಿಂದ ತೆಗೆದ ಅತ್ಯುತ್ತಮ ಗುಣಮಟ್ಟದ ಕಡಲೇಕಾಯಿ ಎಣ್ಣೆ, ಎಳ್ಳೆಣ್ಣೆ, ಕುಸುಬೆ ಎಣ್ಣೆ, ಹುಚ್ಚೆಳ್ಳು ಎಣ್ಣೆ, ಕೊಬ್ಬರಿ ಎಣ್ಣೆ,  ಹರಳೆಣ್ಣೆಯನ್ನು ಉತ್ಪಾದಿಸಿ ದ್ದೇವೆ. ಇದು ರಾಸಾಯನಿಕ ರಹಿತ ಪರಿಶುದ್ಧ ಎಣ್ಣೆ. ಶ್ರೀರಂಗಪಟ್ಟಣ ಸಮೀಪದ ನೆಲಮನೆಯಲ್ಲಿದ್ದ ಹಳೆಯ ಆಲೆಮನೆಯನ್ನೇ ಎಣ್ಣೆ ಉತ್ಪಾದಿಸುವ ಸ್ಥಳವನ್ನಾಗಿ ಮಾಡಿಕೊಂಡಿದ್ದೇವೆ. ಸದ್ಯ  ಮೈಸೂರು,  ಬೆಂಗಳೂರು, ಮಂಡ್ಯ ನಗರಗಳಲ್ಲಿ, ಸುಮಾರು 800ಕ್ಕೂ ಹೆಚ್ಚು ಕುಟುಂಬ ಗಳಿಗೆ ಈ ಶುದ್ಧ, ತಾಜಾ, ರಾಸಾಯನಿಕ ಮುಕ್ತ ಎಣ್ಣೆಯನ್ನು ನೇರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಮುಂದೆ ತಾಜಾ ಸಾವಯವ ಹಾಲು,  ಕಲ್ಲಿನಿಂದ ಬೀಸಿ ತಯಾರಿಸಿದ ಹಿಟ್ಟುಗಳನ್ನು ಹೊರತರುವ ತಯಾರಿಯಲ್ಲಿದ್ದೇವೆ ಅನ್ನುತ್ತಾರೆ ಕಮಲೇಶ್‌.

ಸ್ಥಳೀಯರಿಗೆ ನೌಕರಿ: ಗ್ರಾಸ್‌ ರೂಟ್‌ ತಂಡದವರ ಒಡೆತನದಲ್ಲಿ ಸದ್ಯ ಎರಡು ಗಾಣಗಳಿದ್ದು, 10 ಜನಕ್ಕೆ ಕೆಲಸ ನೀಡಲಾಗಿದೆ. ತಾಜಾ ಎಣ್ಣೆಗೆ ಗ್ರಾಹಕರ ಕಡೆಯಿಂದ ಭರಪೂರ ಮೆಚ್ಚುಗೆ ಸಿಕ್ಕಿದೆ. ಇದರಿಂದ ಉತ್ತೇಜಿತರಾದ ತಂಡವು, 3  ಹೊಸ ಗಾಣಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದರಿಂದ ಒಟ್ಟು 25 ಜನರಿಗೆ ಸ್ಥಳೀಯವಾಗಿ ಕೆಲಸ ಸಿಗಲಿದೆ. ಇದಲ್ಲದೆ, ಸಾವಯವ ಹಾಲು ಹಾಗೂ ಹಿಟ್ಟು ತಯಾರಿಸುವ ಕೆಲಸಕ್ಕೆ 30 ಜನರ ಅವಶ್ಯವಿದೆ. ಗಾಣದಲ್ಲಿ ತೆಗೆದ ಎಣ್ಣೆಯನ್ನು, ಆರ್ಡರ್‌ ಬಂದ ಕೂಡಲೇ ಗ್ರಾಹಕರ ಮನೆಬಾಗಿಲಿಗೇ ತಲುಪಿಸಲಾಗುತ್ತದೆ.

ಡೆಡ್‌ಲೈನ್‌ ಭಯ ಇಲ್ಲ: “ನಾವೆಲ್ಲಾ ಸಾಫ್ಟ್ವೇರ್‌ ಕ್ಷೇತ್ರದಲ್ಲಿ ಇದ್ದವರು. ಇಷ್ಟು ದಿನ ಎಸಿ ರೂಮ್‌ನಲ್ಲಿ ಕುಳಿತು ಕೆಲಸ ಮಾಡಿ ದವರಿಗೆ, ಈಗ ಬಯಲಿನಲ್ಲಿ ನಿಂತು ಕೆಲಸ ಮಾಡಲು ಕಷ್ಟ ಆಗಲ್ಲವಾ? ಎಂಬುದು ಹಲವರ ಪ್ರಶ್ನೆ.  ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ದಿನವೂ ಡೆಡ್‌ಲೈನ್‌ ಕಣ್ಮುಂದೆ ಇರುತ್ತದೆ. ಇಲ್ಲಿ ಹಾಗಿಲ್ಲ. ಯಾವ ಒತ್ತಡವೂ ಇಲ್ಲ. ನಾಳೆಯೇ ದೊಡ್ಡ ಯಶಸ್ಸು ಪಡೆಯಬೇಕೆಂಬ ಅವಸರವೂ ಇಲ್ಲ. ಉತ್ತಮ ಗುಣಮಟ್ಟದ ಎಣ್ಣೆ ಉತ್ಪಾದಿಸಬೇಕು. ನಮ್ಮ ರೈತಾಪಿ ಜನರ ಬೆಳೆಗೆ ಮಾರುಕಟ್ಟೆ ಒದಗಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ. ‘ ಎಂಬುದು ಗ್ರಾಸ್‌ ರೂಟ್‌ ತಂಡದ ಎಲ್ಲರ ಮಾತು.

ಮಿತಿಗಳೂ ಇವೆ: ಯಂತ್ರದಲ್ಲಿ ದಿನಕ್ಕೆ ಸಾವಿರ ಲೀಟರ್‌ ಎಣ್ಣೆ ತೆಗೆಯಬಹುದು. ಗಾಣದಲ್ಲಿ ಎಣ್ಣೆ ಉತ್ಪಾ ದನೆ ಕಡಿಮೆ ಪ್ರಮಾಣದಲ್ಲಿ ನಡೆಯು ವು ದರಿಂದ, ಹೊರ ದೇಶಗಳಿಗೆ ರಫ್ತು ಮಾಡಲು ಕಷ್ಟ. ಚೊತೆಗೆ, ಗಾಣ ತಯಾರಿಸುವ  ಕೌಶಲ್ಯ, ಇಂದಿನ ಮರಗೆಲಸದವರಿಗೆ ತಿಳಿದಿಲ್ಲ. ಸದ್ಯಕ್ಕೆ ಅದೂ ಒಂದು ಕೊರತೆ

ಲೀಟರ್‌ಗೆ ಎಷ್ಟು?: ಕಡಲೆಕಾಯಿ ಎಣ್ಣೆ- 360ರೂ., ಕುಸುಬೆ ಎಣ್ಣೆ-580 ರೂ , ಕೊಬ್ಬರಿ ಎಣ್ಣೆ-520 ರೂ , ಎಳ್ಳೆಣ್ಣೆ- 520ರೂ., ಹುಚ್ಚೆಳ್ಳು ಎಣ್ಣೆ- 680 ರೂ, ಹರಳೆಣ್ಣೆ -580 ರೂ.

ಮಾಹಿತಿಗೆ: 9844123344/ 9164468872

ಟಾಪ್ ನ್ಯೂಸ್

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.