

Team Udayavani, Mar 18, 2023, 9:20 AM IST
ಶಿರ್ವ: ಕಾರು ಮತ್ತು ಕಂಟೈನರ್ ನಡುವೆ ಹೊನ್ನಾವರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಂಟಕಲ್ಲು ಶ್ರಿ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಮೃತಪಟ್ಟ ಘಟನೆ ಶುಕ್ರವಾರ (ಮಾ.17) ಮಧ್ಯಾಹ್ನ ನಡೆದಿದೆ.
ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್ (40) ಮೃತಪಟ್ಟ ವ್ಯಕ್ತಿ.
ಅನಂತೇಶ ರಾವ್ ಉಡುಪಿಯಿಂದ ಸೋದೆ ಮೂಲ ಮಠಕ್ಕೆ ತೆರಳುತ್ತಿದ್ದ ವೇಳೆ ಅವರ ಕಾರು ಹೊನ್ನಾವರದ ಬಳಿ ಕಂಟೈನರ್‌ಗೆ ಢಿಕ್ಕಿ ಹೊಡೆದಿದ್ದು, ಈ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಗಳೂರು ನಿವಾಸಿಯಾದ ಅವರು ಪತ್ನಿ ಮಂಗಳೂರು ಎಂ.ವಿ.ಶೆಟ್ಟಿ ಎಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಪ್ರಾಂಶುಪಾಲೆ ಶ್ರೀಪ್ರಿಯಾ ಅನಂತೇಶ್ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಕಾರ್ಯದರ್ಶಿ ರತ್ನಕುಮಾರ್ ಮತ್ತು ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲ ಡಾ| ಗಣೇಶ್ ಐತಾಳ್ ಸಂತಾಪ ಸೂಚಿಸಿದ್ದಾರೆ.
Ad
ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!
Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ
Shocking! ಬುದ್ಧಿಮಾತು ಹೇಳಿದ್ದಕ್ಕೆ ಕೊಡಲಿಯಿಂದ ಹ*ಲ್ಲೆ ನಡೆಸಿ ಅಜ್ಜಿಯನ್ನೇ ಕೊಂ*ದ ಮೊಮ್ಮಗ
ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; 4 ವರ್ಷದ ಬಳಿಕ ಮರಳಿದ ಘಾತಕ ವೇಗಿ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
You seem to have an Ad Blocker on.
To continue reading, please turn it off or whitelist Udayavani.