
ರಾಶಿ ಫಲ: ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಧನ ಸಂಪಾದನೆ, ಆರೋಗ್ಯದಲ್ಲಿ ಸುಧಾರಣೆ
Team Udayavani, Mar 11, 2023, 7:21 AM IST

ಮೇಷ: ಉತ್ತಮ ಸಂತಸದಿಂದ ಕೂಡಿದ ಸಮಯ. ದೀರ್ಘ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಗುರುಹಿರಿಯರ ಆಶೀರ್ವಾದದ ಸುಖ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ. ದೇವತಾ ಸ್ಥಳ ಸಂದರ್ಶನ.
ವೃಷಭ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಸಂದರ್ಭಕ್ಕೆ ಸರಿಯಾಗಿ ಸಹಾಯ ಸಹಕಾರ ಒದಗಿ ಮಾಡುವಂತಹ ಕೆಲಸಕಾರ್ಯಗಳಲ್ಲಿ ಮುನ್ನಡೆ. ಉತ್ತಮ ಧನಾರ್ಜನೆ. ಸಾಂಸಾರಿಕ ಸುಖ ವೃದ್ಧಿ. ದೇವತಾ ಸ್ಥಳ ಸಂದರ್ಶನ.
ಮಿಥುನ: ಆರೋಗ್ಯದಲ್ಲಿ ಸುಧಾರಣೆ. ಮನೆಯ ಕಡೆ ವಿಶೇಷ ಗಮನಹರಿಸುವಿಕೆ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಮಿತ್ರರ ಭೇಟಿಯಿಂದ ಸಂತಸ ವೃದ್ಧಿ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಧನ ಸಂಪಾದನೆ. ಪಾಲುಗಾರಿಕಾ ವಿಚಾರದಲ್ಲಿ ಆತುರತೆ ಬೇಡ.
ಕರ್ಕ: ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿನ ಹೋರಾಟ. ಆರೋಗ್ಯದ ಬಗ್ಗೆ ಗಮನಹರಿಸಿ. ಪ್ರಯಾಣದಲ್ಲಿ ವಿಳಂಬ ಅಡಚಣೆ ತೋರೀತು. ಧನಾಗಮನಕ್ಕೆ ಕೊರೆಯಾಗದು. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ವಹಿಸಿದರೆ ಉತ್ತಮ ಸ್ಥಾನ ಲಭಿಸುವುದು.
ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದರಿಂದ ಸಂತಸದ ವಾತಾವರಣ. ಅಭಿವೃದ್ಧಿಯ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಧಾರ್ಮಿಕ ಕಾರ್ಯಗಳ ನೇತೃತ್ವ. ಗುರುಹಿರಿಯರ ವಿಚಾರದಲ್ಲಿ ವಿಶೇಷ ಕಾಳಜಿ.
ಕನ್ಯಾ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಿರತೆ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ಭೂಮಿ ಆಸ್ತಿ ಪತ್ರ ವ್ಯವಹಾರಾದಿಗಳಲ್ಲಿ ಜಾಗ್ರತೆ ವಹಿಸಿ. ಮಕ್ಕಳಿಂದ ವಿಶಿಷ್ಟ ಸುಖ. ಗುರುಹಿರಿಯರಿಂದ ಉತ್ತಮ ಸಹಕಾರ.
ತುಲಾ: ಗೃಹ ವಾಹನಾದಿ ವಿಚಾರಗಳಲ್ಲಿ ಆಸಕ್ತಿ. ಕ್ರಯ ವಿಕ್ರಯ ಸಂಭವ. ನೂತನ ಮಿತ್ರರ ಸಮಾಗಮದಿಂದ ಲಾಭ. ಕೆಲಸ ಕಾರ್ಯಗಳಲ್ಲಿ ಪ್ರಗತಿದಾಯ ಬದಲಾವಣೆ. ಮನೋರಂಜನೆಗೆ ಸಮಯ ವಿನಿಯೋಗ. ಆರ್ಥಿಕ ವಿಚಾರದಲ್ಲಿ ಸರಿಯಾದ ಯೋಜನೆ ಅಗತ್ಯ.
ವೃಶ್ಚಿಕ: ಅವಿವಾಹಿತರಿಗೆ ವಿವಾಹ ಭಾಗ್ಯ ಒದಗುವುದು. ದೂರ ಪ್ರಯಾಣ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾನ್ವಿತ ಪ್ರಗತಿ ಬದಲಾವಣೆ ಸಂಭವ. ಅಧಿಕ ಧನಾರ್ಜನೆ ಉತ್ತಮ ವಾಕ್‌ಚತುರತೆಯ ಕಾರ್ಯ ವೈಖರಿ.
ಧನು: ಹಠ ಮಾಡದೇ ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಪ್ರಗತಿ. ಗೌರವಾನ್ವಿತ ಧನ ಸಂಪಾದನೆ. ಹಿರಿಯರೊಡನೆ ಸಹನೆ, ತಾಳ್ಮೆಯಿಂದ ವ್ಯವಹರಿಸಿ.
ಮಕರ: ದೂರ ಪ್ರಯಾಣ. ಗುರುಹಿರಿಯರ ಅವಲಂಬನೆ. ಪರಿಶ್ರಮ ನಿಷ್ಠೆಗೆ ತಕ್ಕ ಪ್ರತಿಫಲ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ, ಮಾನ್ಯತೆ ಪ್ರಾಪ್ತಿ. ಗೃಹದಲ್ಲಿ ಸಂಭ್ರಮ. ಬಂಧುಮಿತ್ರರ ಆಗಮನದಿಂದ ಮನಃಸಂತೋಷ.
ಕುಂಭ: ಉತ್ತಮ ಸ್ಥಾನ ಗೌರವದ ಸುಖ. ಆಸ್ತಿ ಸಂಗ್ರಹದಲ್ಲಿ ಆಸಕ್ತಿ. ನೂತನ ಮಿತ್ರರ ಭೇಟಿ. ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕವಾಗಿ ಸುದೃಢತೆ.
ಮೀನ: ಸಣ್ಣ ಪ್ರಯಾಣ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ. ಅಧ್ಯಯನದಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ವಿಫಲ ಸದವಕಾಶಗಳು ಒದಗಿಬರುವುವು. ಹೆಚ್ಚಿದ ಧನಾಗಮನ. ಉಳಿತಾಯಕ್ಕೆ ಆದ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಕಾರ್ಯಕ್ರಮಗಳ ಭಾಗಿಯಾಗುವ ಅವಕಾಶ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope: ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ ಸಂಭವ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Daily Horoscope: ಉದ್ಯೋಗಸ್ಥರಿಗೆ ನಾಳೆಯ ಪರಿಸ್ಥಿತಿಯ ಕುರಿತು ಅನವಶ್ಯ ಚಿಂತೆ

Daily Horoscope: ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ
MUST WATCH
ಹೊಸ ಸೇರ್ಪಡೆ

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Muslim ಮಹಿಳೆಯರ ಪರವಾಗಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು