ರಾಶಿ ಫಲ: ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ, ಸಾಲಗಾರರ ಬಲೆಗೆ ಸಿಲುಕದಿರಿ
Team Udayavani, Mar 13, 2023, 7:14 AM IST
ಮೇಷ: ಸರಕಾರೀ ಕೆಲಸಗಳಲ್ಲಿ ಪ್ರಗತಿ. ಸಂಚಾರಶೀಲತೆ. ಮುಂದಾಳತ್ವ. ಕ್ರಯವಿಕ್ರಯ ನಿಪುಣತೆ. ದೈಹಿಕ ಆರೋಗ್ಯದಲ್ಲಿ ಉದಾಸೀನತೆ ಸಲ್ಲದು. ಸಂದಭೋìಚಿತ ಗುಣ ಪ್ರವೃತ್ತಿ. ಅಧಿಕ ವಿಚಾರಗಳಲ್ಲಿ ಆಸಕ್ತಿ. ಗುರು ಹಿರಿಯರೊಂದಿಗೆ ತಾಳ್ಮೆಯಿಂದ ಗಮನಿಸಿ.
ವೃಷಭ: ಧಾರ್ಮಿಕ ಚಟುವಟಿಕೆಗಳಲ್ಲಿ ತತ್ಪರತೆ. ದೂರ ಪ್ರಯಾಣ. ಆರ್ಥಿಕ ಸುದೃಢತೆ. ಉತ್ತಮ ವಾಕ್ ಚತುರತೆಯಿಂದ ಜನಮನ್ನಣೆ. ಸ್ತ್ರೀಪುರುಷರು ಪರಸ್ಪರ ಪ್ರೋತ್ಸಾಹ ಅಗತ್ಯ. ವೈವಾಹಿಕ ಯೋಗ. ಗೃಹ ಸಂಬಂಧೀ ವಿಚಾರದಲ್ಲಿ ಖರ್ಚು ವೆಚ್ಚ.
ಮಿಥುನ: ಪರರ ಕಾರ್ಯದಲ್ಲಿ ಆಸಕ್ತಿ. ಜವಾಬ್ದಾರಿಯಿಂದ ನಿರ್ವಹಿಸುವುದರಿಂದ ವೈಯಕ್ತಿಕ ತೊಂದರೆಗೊಳಗಾಗದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಸಾಲಗಾರರ ಬಲೆಗೆ ಸಿಲುಕದಿರಿ. ಗುರುಹಿರಿಯರ ಆಜ್ಞಾಪಾಲನೆಯಲ್ಲಿ ಆಸಕ್ತಿ. ಆರೋಗ್ಯ ಗಮನಿಸಿ.
ಕರ್ಕ: ಸರ್ವರಲ್ಲಿ ದ್ವೇಷ ಸಾಧಿಸದಿರಿ. ಕೆಲಸ ಕಾರ್ಯಗಳಲ್ಲಿ ಉತ್ಸಾಹವಿರಲಿ. ಆಲಸ್ಯ ತೋರದಿರಿ. ಗುರುಹಿರಿಯರ ಚಿಂತೆ ಕಾಡೀತು. ವಿದೇಶ ಮೂಲದ ಜನ ಸಂಪರ್ಕ. ಸಹೋದರ ಸಮಾನರೊಂದಿಗೆ ತಾಳ್ಮೆ ಅಗತ್ಯ. ಸತ್ಕರ್ಮಕ್ಕೆ ಧನವ್ಯಯ. ಆರೋಗ್ಯ ಗಮನಿಸಿ.
ಸಿಂಹ: ಸಜ್ಜನರಿಂದ ಗೌರವ ಆದರ ಮನ್ನಣೆ. ಹಣಕಾಸಿನ ವಿಚಾರದಲ್ಲಿ ನಷ್ಟ ಸಂಭವಿಸಿದರೂ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸರಕಾರಿ ಕೆಲಸಗಳಲ್ಲಿ ಮಗ್ನತೆ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ಆರೋಗ್ಯದಲ್ಲಿ ಸುದಾರಣೆ. ಹಿರಿಯರ ಮಾರ್ಗದರ್ಶನ.
ಕನ್ಯಾ: ವಿದ್ಯೆಯಲ್ಲಿ ತಲ್ಲೀನತೆ. ಮಕ್ಕಳಿಂದ ಸಂತೋಷ ವಾರ್ತೆ. ಸಂಶೋದನಾತ್ಮಕ ಕಾರ್ಯಗಳಲ್ಲಿ ಆಸಕ್ತಿ. ಪರರಿಗೆ ಸಹಾಯ ಮಾಡಿದುದರಿಂದ ಕೀರ್ತಿ ಯಶಸ್ಸು ಗೌರವ ಪ್ರಾಪ್ತಿ. ಉತ್ತಮ ನಿರೀಕ್ಷಿತ ಧನಾಗಮ. ಗುರು ಹಿರಿಯರ ಸಹಕಾರ. ಸುದೃಢ ಆರೋಗ್ಯ. ದೀರ್ಘ ಪ್ರಯಾಣ.
ತುಲಾ: ದೀರ್ಘ ಪ್ರಯಾಣ ಸಂಭವ. ದಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ. ಗುರುಹಿರಿಯರ ಮೇಲಧಿಕಾರಿಗಳ ಪೂರ್ಣ ಸಹಾಯ. ನಿರೀಕ್ಷೆಗೂ ಮೀರಿದ ಧನಾಗಮ. ಸಹೋದ್ಯೋಗಿಗಳಿಂದ ಹೆಚ್ಚಿನ ಲಾಭ. ಭೂಮ್ಯಾದಿ ವಿಚಾರಗಳಲ್ಲಿ ಚರ್ಚೆಯಿಂದ ಮುನ್ನಡೆ.
ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷೆಯಂತೆ ಸ್ಥಾನ ಲಾಭ. ಧನಸಂಪತ್ತು ಪ್ರಾಪ್ತಿ. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿ. ಮಕ್ಕಳಿಂದಲೂ ಗೃಹದಲ್ಲಿ ಸಂತೋಷ ವೃದ್ಧಿ. ಸತ್ಕರ್ಮಕ್ಕೆ ಧನ ವ್ಯಯ. ಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.
ಧನು: ಸಣ್ಣ ಪ್ರಯಾಣ. ಸಹೋದ್ಯೋಗಿಗಳ ಮೇಲೆ ಅವಲಂಬನೆ. ನೂತನ ಮಿತ್ರರ ಭೇಟಿ. ಕೈತುಂಬ ವ್ಯವಹಾರ ಉದ್ಯೋಗಾವಕಾಶ. ದೂರದ ವ್ಯವಹಾರಗಳಿಂದ ಧನಲಾಭ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಪುರಸ್ಕಾರ ಲಭ್ಯ.
ಮಕರ: ಭೂಮಿ ಆಸ್ತಿ ವಿಚಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಬದಲಾವಣೆ ಸಂಭವ. ಆದಾಯಕ್ಕೆ ಸಮನಾದ ವ್ಯಯ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.
ಕುಂಭ: ಗೃಹ ಉಪಯೋಗಿ ವಸ್ತು ಸಂಗ್ರಹ. ಗೃಹದಲ್ಲಿ ಸಂಭ್ರಮದ ವಾತಾವರಣ. ಬಂಧುಮಿತ್ರರ ಆಗಮನದಿಂದ ಮನಃ ಸಂತೋಷ. ಆರೋಗ್ಯ ವೃದ್ಧಿ. ಹೆಚ್ಚಿದ ಧನಲಾಭ. ವಾಹನಾದಿ ಸೌಕರ್ಯ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಶಂಸೆ.
ಮೀನ: ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರಗಳಲ್ಲಿ ವೃದ್ಧಿದಾಯಕ ಬದಲಾವಣೆ. ಬಂಧುಮಿತ್ರರ ಸಹಕಾರ. ಮಾತೃ ಸಮಾನರಿಂದ ಸಹಾಯ. ಕಲಾವಿದರಿಗೆ ವಿಪುಲ ಅವಕಾಶ ಒದಗಿ ಬರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.