ರಾಶಿ ಫಲ: ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ, ಆರೋಗ್ಯದಲ್ಲಿ ಸುದಾರಿಕೆ
Team Udayavani, Mar 20, 2023, 7:11 AM IST
ಮೇಷ: ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಅಧಿಕ ಪರಿಶ್ರಮದಿಂದ ಸಫಲತೆ ಸ್ಥಾನ ಗೌರವಾದಿ ಲಭ್ಯ. ನೆಮ್ಮದಿ ಕಮ್ಮಿ. ಬಂಧುಮಿತ್ರರಿಗೆ ಹೆಚ್ಚಿದ ಒತ್ತಡ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಸ್ಪಷ್ಟ ನಿರ್ಧಾರದಿಂದ ನಿರೀಕ್ಷಿತ ಫಲ ಲಭ್ಯ. ವೃಷಭ: ಮನೋರಂಜನೆಯಲ್ಲಿ ಕಾಲಕಳೆ ಯುವಿಕೆ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ಗೌರವಾದಿ ಪ್ರಾಪ್ತಿ. ಅವಿವಾಹಿತರಿಗೆ ವಿವಾಹ ಯೋಗ. ಯೋಗ್ಯ ಸಂಬಂಧ ಒದಗಿ ಬರುವುದು. ಬಹುವಿಧದಿಂದ ಧನ ಸಂಚಯನ. ಮಿಥುನ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದರಿಂದ ಮನಃ ತೃಪ್ತಿ. ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಸುದಾರಿಕೆ. ದಾಂಪತ್ಯ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರುವುದು. ಕರ್ಕ: ಹಣಕಾಸಿನ ನಿರೀಕ್ಷೆಯಲ್ಲಿ ಸಫಲತೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯವೈಖರಿ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಲಭ್ಯ. ಗೃಹದಲ್ಲಿ ಸಂಭ್ರಮದ ವಾತಾವರಣ. ಸಿಂಹ: ದೂರ ಸಂಚಾರ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಅಭಿವೃದ್ಧಿ, ಪ್ರಗತಿ. ಗುರುಹಿರಿಯರ ಸಂರ್ಭೋಚಿತ ಸಹಾಯ ಸಹಕಾರ ಲಭ್ಯ. ಜವಾಬ್ದಾರಿಯುತ ಮಾತಿನಿಂದ ವ್ಯವಹಾರದಲ್ಲಿ ಶ್ರೇಯಸ್ಸು ಸಂಭವ. ಕನ್ಯಾ: ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವುದು. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಬಂಧುಮಿತ್ರರ ಸಹಕಾರ. ಗೃಹಉಪಯೋಗೀ ವಸ್ತುಗಳ ಸಂಗ್ರಹ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಅಭಿವೃದ್ಧಿ. ತುಲಾ: ಆಸ್ತಿ ವಿಚಾರಗಳಲ್ಲಿ ತಲ್ಲೀನತೆ ಹಾಗೂ ನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧುಮಿತ್ರರ ಮಾತೃಸಮಾನರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿದಾಯಕ ಬದಲಾವಣೆ. ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ವೃಶ್ಚಿಕ: ಆರೋಗ್ಯ ಗಮನಿಸಿ. ಹೆಚ್ಚಿದ ದೇಹಾಯಾಸ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಅತಿ ಉದಾರತೆಯಿಂದ ಕಿರಿಕಿರಿ ಆದೀತು. ಆಸ್ತಿ ವಿಚಾರಗಳಲ್ಲಿ ಹೆಚ್ಚಿನ ಪರಿಶ್ರಮ. ಧನು: ಅತಿಯಾದ ಆತ್ಮವಿಶ್ವಾಸದಿಂದ ಆರೋಗ್ಯ ದಲ್ಲಿ ಗಮನಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರ್ಯೋನ್ಮುಖರಾಗಿ ನಿಷ್ಠುರ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನ ಲಾಭ ಸಂಭವ. ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನವ್ಯಯ. ಆರೋಗ್ಯ ವಿಚಾರದಲ್ಲಿ ನಿಗಾವಹಿಸಿ. ಕುಂಭ: ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ವಾಕ್ ಚತುರತೆ ಪ್ರದರ್ಶನ. ಗುರುಹಿರಿಯರ ಆರೋಗ್ಯ ಮಧ್ಯಮ. ಸಾಂಸಾರಿಕ ಸುಖಕ್ಕೆ ಹೆಚ್ಚು ಪರಿಶ್ರಮ ಸಂಭವ ಮೀನ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣದಿಂದ ಲಾಭ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಸರಿಯಾಗಿ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ ವ್ಯವಹರಿಸುವುದರಿಂದ ಸಫಲತೆ. ಸಾಂಸಾರಿಕ ಸುಖ ಮಧ್ಯಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ
Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.