
ರಾಶಿ ಫಲ: ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ, ಆರೋಗ್ಯ ಗಮನಿಸಿ
Team Udayavani, Mar 29, 2023, 7:12 AM IST

ಮೇಷ: ಅಧಿಕ ಜನಸಂಪರ್ಕ. ಸಾಂಸಾರಿಕ ಸುಖದಲ್ಲಿ ತಲ್ಲೀನತೆ. ನಾನಾ ರೀತಿಯ ಮನೋರಂಜನೆಯಲ್ಲಿ ಆಸಕ್ತಿ. ಅವಿವಾಹಿತರಿಗೆ ವಿವಾಹ ಸಮಯ. ದೀರ್ಘ ಪ್ರಯಾಣ. ಪಾಲುಗಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿ.
ವೃಷಭ: ಅಧಿಕ ಧನ ಸಂಪಾದನೆಯ ಅಪೇಕ್ಷೆ. ಉತ್ತಮ ಜ್ಞಾನ ತಿಳಿವಳಿಕೆಯಿಂದ ಕೂಡಿದ ಮಾತುಗಾರಿಕೆಗೆ ಪ್ರಯತ್ನ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಗುರು ಹಿರಿಯರ ಪ್ರೋತ್ಸಾಹದಿಂದ ಕಾರ್ಯ ಸಫಲತೆ.
ಮಿಥುನ: ಆರೋಗ್ಯ ಗಮನಿಸಿ. ಸಾಹಸ ಪ್ರವೃತ್ತಿ ಮಾಡದಿರಿ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ. ಅಧ್ಯಯನದಲ್ಲಿ ಆಸಕ್ತಿ. ದಾಂಪತ್ಯ ಸುಖಕರ. ಸಂದರ್ಭಕ್ಕೆ ಸರಿಯಾಗಿ ಪಾಲುಗಾರರ ಸಹಕಾರ ಲಭ್ಯ.
ಕರ್ಕ: ನಕಾರಾತ್ಮಕ ಚಿಂತನೆಗೆ ಆದ್ಯತೆ ನೀಡದಿರಿ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ಬಂಧು ಮಿತ್ರರಿಂದ ಸಹಕಾರ ಲಭಿಸುವುದು. ದಾಂಪತ್ಯ ಸುಖ ವೃದ್ಧಿ. ಕ್ಷಮಾಗುಣಕ್ಕೆ ಆದ್ಯತೆ ನೀಡುವುದರಿಂದ ಜನರಿಂದ ಪ್ರಶಂಸೆ.
ಸಿಂಹ: ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾದಾಯ ಲಭಿಸುವುದು. ದಂಪತಿಗಳಲ್ಲಿ ಅನುರಾಗ ವೃದ್ಧಿ ಪರಸ್ಪರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಜಾಣತನದ ಪ್ರದರ್ಶನದಿಂದ ಅತಿ ಸಫಲತೆ.
ಕನ್ಯಾ: ಆರೋಗ್ಯ ವೃದ್ಧಿ. ಗುರುಹಿರಿಯರ ಆಶೀರ್ವಾದ ಬಲದಿಂದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಆಯಕ್ಕೆ ಸರಿಯಾಗಿ ವ್ಯಯ ಸಂಭವ. ಮಾತಿನಲ್ಲಿ ಜವಾಬ್ದಾರಿ ಹೆಚ್ಚಾಗಿ ಕಂಡೀತು.
ತುಲಾ: ಮನೋರಂಜನೆಯಲ್ಲಿ ತಲ್ಲೀನತೆ. ಆಹಾರ ಸೇವನೆಯಲ್ಲಿ ಜಾಗ್ರತೆ ವಹಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಪವಾದ ಬರದಂತೆ ಎಚ್ಚರಿಕೆ ವಹಿಸಿ. ಪಾರದರ್ಶಕತೆಗೆ ಆದ್ಯತೆ ನೀಡಿ. ಆರ್ಥಿಕತೆಯಲ್ಲಿ ಪ್ರಗತಿ ತೋರುವುದು. ಸಾಂಸಾರಿಕ ಸುಖ ತೃಪ್ತಿದಾಯಕ.
ವೃಶ್ಚಿಕ: ನಿರೀಕ್ಷೆಗೂ ಮೀರಿದ ಧನ ಸಂಪತ್ತು ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಕೀರ್ತಿ ಲಭಿಸಿದ್ದರಿಂದ ಮನಃತೃಪ್ತಿ. ಜನಮನ್ನಣೆ. ಸ್ಪಷ್ಟತೆಯ ನಡೆಯಿಂದ ಲಾಭ. ನಾಯಕತ್ವ ಗುಣ ವೃದ್ದಿ. ಗೃಹದಲ್ಲಿ ಸಂತಸದ ವಾತಾವರಣ.
ಧನು: ವಿದ್ಯಾರ್ಜನೆಯಲ್ಲಿ ಆಸಕ್ತಿ. ಅನಿರೀಕ್ಷಿತ ಸುಖ ವ್ಯವಸ್ಥೆಗಳು ಲಭಿಸುವುವು. ಪದವಿ ಪ್ರಾಪ್ತಿ. ಮಾನಸಿಕ ತೃಪ್ತಿ. ಯೋಚಿಸಿದಂತೆ ಕಾರ್ಯಗಳು ನಡೆಯುವುವು. ಗುರು ಹಿರಿಯರ ಮಾರ್ಗದರ್ಶನ ಲಾಭ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವುದು.
ಮಕರ: ಕೆಲಸ ಕಾರ್ಯಗಳಲ್ಲಿ ಯಶಸ್ಸು. ಗೌರವ ವೃದ್ಧಿ. ಜನಮನ್ನಣೆ ಲಭಿಸಿದ್ದರಿಂದ ಮನಃ ಸಂತೋಷ. ದಂಪತಿಗಳಲ್ಲಿ ಪರಸ್ಪರ ಸಹಕಾರ ಅನುರಾಗ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿದ ವರಮಾನ. ಗುರು ಹಿರಿಯರ ನಿಮಿತ್ತ ಖರ್ಚುವೆಚ್ಚ.
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಕೆಲಸ ಕಾರ್ಯಗಳಲ್ಲಿ ಉತ್ತಮ ಬದಲಾವಣೆ ತೋರಿ ಬಂದಾವು. ಹೂಡಿಕೆಗಳಲ್ಲಿ ಆಸಕ್ತಿ. ಬಂಧು ಮಿತ್ರರ ಸಹಕಾರ. ಮಕ್ಕಳಿಂದ ಸಂತೋಷ ವಾರ್ತೆ ಕೇಳಿ ಬರುವುದು.
ಮೀನ: ಅಧಿಕ ಧನಸಂಪಾದನೆ. ಉದ್ಯೋಗದಲ್ಲಿ ಕೀರ್ತಿ ಅಭಿವೃದ್ಧಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಪ್ರೀತಿ ವೃದ್ಧಿ. ಹೂಡಿಕೆಗಳಲ್ಲಿ ಆಸಕ್ತಿ. ಆರೋಗ್ಯ ವೃದ್ಧಿ. ಜವಾಬ್ದಾರಿಯುತ ನಡೆಯಿಂದ ಪ್ರವೃತ್ತಿಯಲ್ಲಿ ಲಾಭ. ವಚನ ನೀಡುವಾಗ ಪೂರ್ವಪರ ತಿಳಿದು ನೀಡಿ. ಅನಗತ್ಯ ತೊಂದರೆಗೊಳಗಾಗದಿರಿ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope; ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ

Daily Horoscope: ಅವಿವಾಹಿತರಿಗೆ ಕಂಕಣ ಭಾಗ್ಯ, ಉತ್ತಮ ಬೆಳವಣಿಗೆ, ಅಧಿಕ ಧನಾರ್ಜನೆ

Daily Horoscope; ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ

Daily Horoscope: ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ, ನಿರೀಕ್ಷೆಗೂ ಮೀರಿದ ಧನಾಗಮನ

Daily Horoscope: ನಿರೀಕ್ಷಿತ ಧನ ವೃದ್ಧಿ, ದೀರ್ಘ ಪ್ರಯಾಣ ಸಂಭವ